ಧಾರವಾಡ –
ಧಾರವಾಡದ ಜಯದೇವಿ ತಾಯಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ತು ಮತ್ತು ದಳಗಳ ಉದ್ಘಾಟನೆ ಸಮಾರಂಭ ನಡೆಯಿತು.ಎಸ್ ಎಸ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ನಡೆಯಿತು
ಶಾಲಾ ಸಂಸತ್ತು ಹಾಗೂ ದಳಗಳ ಉದ್ಘಾಟನೆ ಕಾರ್ಯ ಕ್ರಮ ನೆರವೇರಿತು.ಇದೇ ವೇಳೆ ಮಾತನಾಡಿದ ಅವರು ವಿದ್ಯಾರ್ಥಿನಿಯರಿಗೆ ಮಾತಾಡುವ ರೀತಿ ಶ್ರದ್ಧೆ ಸೇವಾ ಮನೋಭಾವನೆ ಯಿಂದ ಏನನ್ನಾದರೂ ಸಾಧಿಸಬಹುದು ಎಂದರು.ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪ್ರೊಫೆಸರ್ ಸಿ.ಬಿ ಕಣವಲ್ಲಿ ಯವರು ಮಾತನಾಡಿ ಜೀವನ ದಲ್ಲಿ ಸಮಯ ಹಾಗೂ ಸಮುದ್ರದ ಅಲೆಗಳುನಿಲ್ಲುವುದಿಲ್ಲ ಅವುಗಳು ಇರುವಾಗಲೇ ಅವುಗಳೊಂದಿಗೆ ನಾವು ನಮ್ಮ ಜೀವನದ ಗುರಿ ತಲುಪಬೇಕು ಎಂದು ಕರೆ ನೀಡಿದರು
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎಸ್.ಎಸ್. ಚಿಕ್ಕಮಠ ಮಾತನಾಡಿ ಮಾತೇ ಮಾಣಿಕ್ಯ ಮಾತಿಂದಲ್ಲೇ ಉನ್ನತಿ ಮಾತಿಂದಲ್ಲೇ ಅವನತಿ ಎನ್ನುವ ಸಂದೇಶ ಕೊಟ್ಟರು ಈ ಕಾರ್ಯಕ್ರಮದಲ್ಲಿ ಮುಖ್ಯ ಅಧ್ಯಾಪಕಿ ಎಸ್ ಎಸ್ ಸುರಪುರಮಠ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು .
ಎಮ್ ಸ್ ಹಿರೇಮಠ ನಿರೂಪಿಸಿದರು.ತೋಟಗೇರ್ ಪುಷ್ಪಾರ್ಪಣೆ ಮಾಡಿದರು.ಪುಷ್ಪಾ ಬಾದಾಮಿ ಸಂಸತ್ತು ಪರಿಚಯ ವಿ.ವಿ.ಕಿಲ್ಲೆದ ದಳಗಳನ್ನು ಪರಿಚಯಿಸಿದರು. ಎ ಹೆಚ್.ಮುದರೆಡ್ಡಿ ವಂದಿಸಿದರು ಈ ಸಮಾರಂಭದಲ್ಲಿ ಎಸ್ ಎಸ್ ದೇಸಾಯಿಯವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ J G ಸುಬ್ಬಾರಮಠ ಹಾಗೂ D G ದೊಡವಾಡ ,I V ಆಕಳವಾಡಿ,ಎಂ ಬಿ ಬಡಿಗೇರ ಅವರು ಉಪಸ್ಥಿತರಿದ್ದರು
ವರದಿ – ಮಂಜುನಾಥ ಬಡಿಗೇರ