ಜೋ ಬೈಡನ್ ಸಚಿವ ಸಂಪುಟದಲ್ಲಿ ಇಬ್ಬರು ಭಾರತೀಯ ಅಮೆರಿಕನ್ನರಿಗೆ ಪ್ರಮುಖ ಖಾತೆಗಳು

Suddi Sante Desk

ವಾಷಿಂಗ್ಟನ್ –

ಅಮೆರಿಕದ ನಿಯೋಜಿತ ನೂತನ ಅಧ್ಯಕ್ಷ ಜೋ ಬೈಡನ್ ಸಚಿವ ಸಂಪುಟದಲ್ಲಿ ಇಬ್ಬರು ಭಾರತೀಯ ಅಮೆರಿಕ ನ್ನರಿಗೆ ಪ್ರಮುಖ ಖಾತೆಗಳು ಖಚಿತಯೆನ್ನಲಾಗಿದೆ.ಅಮೆರಿಕದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಹಾಗೂ ಸ್ಟ್ಯಾಂಡ್ ಫೋರ್ಡ್ ವಿವಿಯ ಪ್ರೊಫೆಸರ್ ಅರುಣ್ ಮಜುಮ್ದಾರ್ ಅವರಿಗೆ ಜೋ ಬೈಡನ್-ಕಮಲ ಹ್ಯಾರಿಸ್ ಆಡಳಿತದಲ್ಲಿ ಪ್ರಮುಖ ಖಾತೆಗಳು ಲಭ್ಯವಾಗಲಿದೆ.ವಿವೇಕ್ ಮೂರ್ತಿ ಕೋವಿಡ್-19 ಗೆ ಸಂಬಂಧಿಸಿದಂತೆ, ಈಗಾಗಲೇ ಜೋ ಬೈಡನ್ ಅವರ ಪ್ರಮುಖ ಸಲಹೆಗಾರರಾಗಿ ಆಯ್ಕೆಯಾಗಿ ದ್ದಾರೆ.

ಇವರಿಗೆ ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಖಾತೆಯ ಹೊಣೆಗಾರಿಕೆ ಸಿಗಲಿದೆ. ಸ್ಟ್ಯಾಂಡ್ ಫೋರ್ಡ್ ವಿವಿ ಪ್ರೊಫೆಸರ್ ಆಗಿರುವ ಅರುಣ್ ಮಜುಮ್ದಾರ್ ಅವರನ್ನು ಇಂಧನ ಖಾತೆ ಸಚಿವರನ್ನಾಗಿ ಮಾಡಲಾಗುತ್ತದೆ.

ಮಜುಮ್ದಾರ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಏಜೆನ್ಸಿ-ಎನರ್ಜಿಯ ಯೋಜನಾ ಸಂಶೋಧನೆಯ ಪ್ರಥಮ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಡನ್‌’ಗೆ ಉನ್ನತ ಮಟ್ಟದ ಸಲಹೆಗಾರರಾಗಿದ್ದಾರೆ ಇದರೊಂದಿಗೆ ಭಾರತೀಯರಿಗೂ ಅಮೇರಿಕಾದಲ್ಲಿ ದೊಡ್ಡ ಪ್ರಮಾಣದ ಸ್ಥಾನ ಗೌರವ ಸಿಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.