ಬೆಳ್ತಂಗಡಿ –
ಕಣಿಯೂರು ಗ್ರಾಮದ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೀರೇಂದ್ರ ಪಾಟೀಲ (52)ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾದ ಗುತ್ತಿಕಟ್ಟಿ ಲಂಬಾಣಿ ಹಟ್ಟಿಯವರಾದ ಅವರು ಪುಂಜಾಲಕಟ್ಟೆಯ ಪಿಲಾತಬೆಟ್ಟು ಬೆರ್ಕಳ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿ ದ್ದರು.ಪತ್ನಿ ಹಾಗೂ ಮಕ್ಕಳು ರಜೆಯ ನಿಮಿತ್ತ ಊರಿಗೆ ತೆರಳಿದ್ದರು.ಹಿಂದಿರುಗಿ ಶಾಲೆಗೆ ಬಂದ ಕೂಡಲೇ ಈ ಒಂದು ಘಟನೆ ನಡೆದಿದೆ.
ಮೃತ ವೀರೇಂದ್ರ ಪಾಟೀಲ ಅವರು ಈ ಹಿಂದೆ ಬಂಟ್ವಾಳ ತಾಲೂಕಿನ ಬಡಗ ಕಜೆಕಾರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ನೆರಿಯ ಶಾಲೆಯಲ್ಲಿ ಕರ್ತವ್ಯದಲ್ಲಿದ್ದು ಕಳೆದ ಮೂರು ತಿಂಗಳ ಹಿಂದೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಪಿಲಿಗೂಡು ಹಿ.ಪ್ರಾ.ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಅವರು ಪತ್ನಿ, ಪುತ್ರ,ಪುತ್ರಿಯನ್ನು ಅಗಲಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ವಿರೂಪಾಕ್ಷಪ್ಪ ಶಾಸಕ ಹರೀಶ್ ಪೂಂಜ, ಶಾಲಾ ಆಡಳಿತ ಮಂಡಳಿ,ಶಿಕ್ಷಕರು,ಶಿಕ್ಷಣ ಇಲಾಖೆ ಸಂತಾಪ ಸೂಚಿಸಿದ್ದಾರೆ.