ನೆಲಮಂಗಲ –
ಹೌದು ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಸುಧಾನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅನಿರೀಕ್ಷಿತವಾಗಿ ಧಿಡೀರ್ ಭೇಟಿ ನೀಡಿದರು. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಸುಧಾನಗರದಲ್ಲಿರುವ ಶಾಲೆಗೆ ಬೆಳಗ್ಗೆ 9.45ಕ್ಕೆ ಭೇಟಿ ನೀಡಿದ ಸಚಿವರು ಪ್ರತಿಯೊಂದು ತರಗತಿಗೆ ತೆರಳಿ ಮಕ್ಕಳ ಹಾಜರಾತಿ ಮತ್ತು ಶಿಕ್ಷಕರ ಸಮಯಪಾಲನೆ ಗಮನಿಸಿದರು.
ಶಾಲೆಯ ಪರಿಸರ ಉತ್ತಮವಾಗಿದೆ.ಮಕ್ಕಳು ಪ್ರತಿಭಾ ವಂತರಿದ್ದಾರೆ.ಹಾಜರಾತಿ ಸಹ ಉತ್ತಮವಾಗಿದೆ.ಒಂದು ತರಗತಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿತ್ತು.ಶಿಕ್ಷಕರು ಇನ್ನಷ್ಟು ಕಾರ್ಯನ್ಮೋಖರಾಗಬೇಕು.ಹಾಜರಾತಿ ಗಮನಿಸ ಬೇಕು.ಯಾವುದೇ ಸಬೂಬು ನಾನು ಕೇಳುವುದಿಲ್ಲ. ಕ್ರಿಯಾಶೀಲ ರಾಗಿ ಕೆಲಸ ಮತ್ತು ಸಮಯಪಾಲನೆ ಮಾಡಬೇಕು ಎಂದು ಸ್ಥಳದಲ್ಲೇ ಎಚ್ಚರಿಕೆ ನೀಡಿದರು.
ಶಿಕ್ಷಣ ಸಚಿವರು ಏಕಾಏಕಿ ಯಾವುದೇ ಅಧಿಕಾರಿಗಳಿಲ್ಲದೇ ತಮ್ಮ ಆಪ್ತ ಸಹಾಯಕರೊಂದಿಗೆ ಒಬ್ಬರೇ ದಿಢೀರ್ ಭೇಟಿ ನೀಡಿದ ತಕ್ಷಣ ನಮಗೆ ಭಯದ ಜೊತೆ ನಮ್ಮ ಶಾಲೆಗೆ ಸಚಿವರೇ ಆಗಮಿಸಿದರು ಎಂಬ ಸಂತಸವು ಇತ್ತು. ಮುಖ್ಯ ಶಿಕ್ಷಕ ಉತ್ತರೇಗೌಡ ವಿವರಿಸಿದರು.ಸಚಿವರ ದಿಢೀರ್ ಭೇಟಿ ಶಿಕ್ಷಕರಿಗೆ ಸಮಯಪಾಲನೆ ಅರಿವು ಇನ್ನಷ್ಟು ಹೆಚ್ಚಾಗಲಿದೆ. ಈಗಾಗಲೇ ನಾನು ಸೇರಿದಂತೆ ಅಧಿಕಾರಿ ವರ್ಗ ತಾಲೂಕಿ ನಲ್ಲಿ ದಿಢೀರ್ ಮತ್ತು ಅನಿರೀಕ್ಷಿತ ಭೇಟಿ ನೀಡುತ್ತಿದ್ದೇವೆ.25 ಶಾಲೆಗಳಿಗೆ ಭೇಟಿ ವರದಿ ಸಹ ಇದೆ.ಎಲ್ಲಾ ಶಾಲೆಗಳಿಗೆ ಮತ್ತೂಮ್ಮೆ ನೋಟಿಸ್ ಜಾರಿ ಮಾಡಿ ಸಮಯಪಾಲನೆ ಮತ್ತು ಹಾಜರಾತಿ ಕಟ್ಟುನಿಟ್ಟು ಮಾಡಿ ಎನ್ಇಪಿಯ ಮೂಲ ಪರಿಕಲ್ಪನೆಯಾದ ಕಲಿಕೆಯ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಕ್ಕೆ ಒತ್ತು ನೀಡುತ್ತೇವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ತಿಳಿಸಿದರು.ಪ್ರಾಥಮಿಕ ಶಾಲೆ ಸಹಶಿಕ್ಷಕಿ ಪರಿಮಳ,ಸುಧಾಮನಗರ ಗ್ರಾಮಸ್ಥ ಪ್ರಕಾಶ್ ಗೌಡ ಮಾತನಾಡಿದರು.ಈ ವೇಳೆಯಲ್ಲಿ ಗ್ರಾಮಸ್ಥ ಪ್ರಕಾಶ್, ವೆಂಕಟೇಶ್ ಇದ್ದರು.