ಧಾರವಾಡ –
ಹೌದು ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ನನ್ನು ಪ್ರತಿಷ್ಠಾಪನೆ ಮಾಡುವ ವಿಚಾರ ಕುರಿತಂತೆ ಕೊನೆಗೂ ಪಾಲಿಕೆ ವಿವಾದಕ್ಕೆ ತೆರೆ ಏಳೆದಿದೆ.ಹೌದು ಮೂರು ದಿನಗಳ ಕಾಲ ಈದ್ಗಾ ಮೈದಾನ ದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಗೆ ಅನುಮತಿಯನ್ನು ನೀಡಿ ಐತಿಹಾಸಿಕ ಆದೇಶವನ್ನು ಪಾಲಿಕೆ ಪ್ರಕಟಿಸಿದೆ.
ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಐತಿಹಾಸಿಕ ನಿರ್ಣಯ ಪ್ರಕಟ ಮಾಡಿ ಗೊಂದಲಗಳಿಗೆ ಪಾಲಿಕೆಯ ಮೇಯರ್ ತೆರೆ ಏಳೆದಿದ್ದಾರೆ.ಮೂರು ದಿನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶವನ್ನು ನೀಡಲಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.ಹುಬ್ಬಳ್ಳಿಯಲ್ಲಿ ಮೇಯರ್ ಈರೇಶ ಅಂಚಟ ಗೇರಿ ಅವರು ಸುದ್ದಿಗೊಷ್ಠಿಯಲ್ಲಿ ಈ ಒಂದು ಮಾಹಿತಿ ಯನ್ನು ನೀಡಿದರು.
ಒಟ್ಟು ಆರು ಸಂಘಟನೆಗಳು ಸಾರ್ವಜನಿಕ ಗಣೇಶೋತ್ಸ ವಕ್ಕೆ ಮನವಿ ಮಾಡಿವೆ 11 ಅರ್ಜಿಗಳು ಅನುಮತಿ ನೀಡಬಾರದೆಂಬ ಮನವಿ ಪತ್ರ ಬಂದಿವೆ ಈ ಬಗ್ಗೆ ಸರ್ವ ಪಕ್ಷಗಳು ಈ ಬಗ್ಗೆ ಸತತವಾಗಿ ಸಭೆ ಮಾಡಿದ ನಂತರ ಸಮಿತಿಯವರು ನೀಡಿದ ವರದಿಯಿಂದಾಗಿ ಈ ಒಂದು ಅಂತಿಮ ನಿರ್ಣಯವನ್ನು ತೆಗೆದುಕೊಂಡಿದ್ದೇವೆ.ಸಮಿತಿ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ವರದಿ ಕೊಟ್ಟಿದೆ ಹೀಗಾಗಿ ಮೂರು ದಿನಗಳ ಕಾಲ ಗಣೇಶೋತ್ಸವಕ್ಕೆ ಅನು ಮತಿ ನೀಡಲಾಗಿದೆ.ಶಾಂತಿ ಹಾಗೂ ಸೌಹಾರ್ದತೆಯಿಂದ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದ್ದು ಆರು ಸಂಘಟನೆಗಳಲ್ಲಿ ಒಂದು ಸಂಘಟನೆಗೆ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಟ್ಟಿದ್ದು ಉಳಿದ ಸಂಘಟನೆಗಳು ಸಹಕಾರ ನೀಡುವಂತೆ ಕೋರಿದರು.
ಇದರೊಂದಿಗೆ ಕಳೆದ ಕೆಲವು ದಿನಗಳಿಂದ ನಡೆದಿದ್ದ ಗೊಂದಲಗಳಿಗೆ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ತೆರೆ ಎಳೆದು ಅನುಮತಿ ನೀಡಿದ ಪಾಲಿಕೆ ಮೇಯರ್.6 ವಿವಿದ ಹಿಂದೂ ಪರ ಸಂಘಟನೆಗಳಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು ಅನುಮತಿ ನೀಡುವ ವಿಚಾರವಾಗಿ ಪಾಲಿಕೆಯಿಂದ ಸದನ ಸಮಿತಿ ರಚನೆ ಮಾಡಲಾಗಿತ್ತು. ಸದನ ಸಮಿತಿಯ ಸಲಹೆಯ ಮೇರೆಗೆ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ ಪಾಲಿಕೆ.ಯಾವ ಸಂಘಟನೆಗೆ ಗಣೇಶ ಪ್ರತಿಷ್ಠಾಪಣೆ ಮಾಡಲು ಅನುಮತಿ ನೀಡಬೇಕೆಂದು ನಂತರ ತೀರ್ಮಾನ ವನ್ನು ಮಾಡಲಾಗುತ್ತದೆ.ಕಳೆದ ಒಂದು ತಿಂಗಳಿಂದ ನಡೆದಿದ್ದ ಈದ್ಗಾ ಮೈದಾನ ಗಣೇಶೋತ್ಸವ ಗಲಾಟೆ ಪಾಲಿಕೆ ಒಡೆತನದಲ್ಲಿರುವ ಹುಬ್ಬಳ್ಳಿ ಈಧ್ಗಾ ಮೈದಾನ.ಇನ್ನೂ ಈದ್ಗಾ ಮೈದಾನದಲ್ಲಿರುವ ಮುಸ್ಲಿಂ ಪ್ರಾರ್ಥನಾ ಸ್ಮಾರಕಕ್ಕೆ ಯಾವುದೆ ತೊಂದರೆ ಆಗದಂತೆ ಹಬ್ಬ ಆಚರಣೆಗೆ ಅನು ಮತಿ ನೀಡಲಾಗುತ್ತದೆ.
ಪ್ರತಿ ವರ್ಷ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯತ್ತೆ ಈ ವರ್ಷ ಮೂರು ದಿನಕ್ಕೆ ಅವಕಾಶ ನೀಡಲಾಗಿದೆ ಶಾಂತಿಯುತವಾಗಿ ಆಚರಣೆ ನಡೆದ್ರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ನೀಡಲಾ ಗುತ್ತೆ ಎಂದರು.ಇನ್ನೂ ಪಾಲಿಕೆಯ ಈ ಒಂದು ನಿರ್ಧಾರ ವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತಿಸಿದ್ದಾರೆ ಪಾಲಿಕೆ ಒಳ್ಳೆಯ ನಿರ್ಣಯ ತೆಗೆದುಕೊಂಡಿದ್ದಾರೆ. ಪಾಲಿ ಕೆಯ ನಿರ್ಣಯವನ್ನ ನಾನು ಸ್ವಾಗತ ಮಾಡುತ್ತೇನೆ. ಸೌಹಾರ್ದತೆಯಿಂದ ಗಣೇಶೋತ್ಸವ ಆಚರಣೆ ಮಾಡು ವುದು ಸೂಕ್ತ. ಯಾವುದೇ ಅಹಿತಕರ ಘಟನೆ ನಡೆಯ ದಂತೆ ಕ್ರಮ ವಹಿಸಲು ಎಡಿಜಿಪಿಗೆ ತಿಳಿಸಲಾಗಿದೆ.ಈ ನಿಟ್ಟಿನಲ್ಲಿ ಅಧಿಕಾರಿಗಳಿಗೂ ಸಹ ನಾನು ಸೂಕ್ತ ಸಲಹೆ ನೀಡಿದ್ದೇನೆ.ಈಗಾಗಲೇ ಎಲ್ಲಾ ರೀತಿಯ ಕಾನೂನು ಸುವ್ಯ ವಸ್ಥೆ ಆಗಿದೆ.ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಭದ್ರತೆ ಕಾರ್ಯ ನಡೆಯುತ್ತಿದೆ.ಗಣೇಶ ಹಬ್ಬವನ್ನು ಸೌಹಾ ರ್ದತೆಯಿಂದ ಮಾಡೋಣ.ಇದರಿಂದ ಕಳೆದುಕೊಳ್ಳುವು ದೇನೂ ಇಲ್ಲ.ಎಲ್ಲಾ ಶಾಸಕರು,ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದು ಸಮಿತಿ ಈ ನಿರ್ಧಾರ ಕೈಗೊಂಡಿದೆ.ಜನ ಯಾವುದೇ ಉದ್ವೇಗಕ್ಕೊಳಗಾಗದೇ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದರು.