ನನ್ನನ್ನು ವರ್ಗಾವಣೆ ಮಾಡಿದ ಕಾಣದ ಕೈಗಳಿಗೆ ,ಷಡ್ಯಂತ್ರ ರೂಪಿಸಿದವರಿಗೆ ಸಂವಿಧಾನ ವಿರೋಧಿಯ ವ್ಯಕ್ತಿಗೆ ಧನ್ಯವಾದಗಳೆಂದು ಅಧಿಕಾರ ಹಸ್ತಾಂತರಿಸಿದ ಅಧಿಕಾರಿ

Suddi Sante Desk

ಧಾರವಾಡ –

ಧಾರವಾಡ ಸಾರ್ವಜನಿಕರ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ನಿರ್ದೇಶಕರಾಗಿದ್ದ ಬಿಕೆಎಸ್ ವರ್ಧನ್ ವರ್ಗಾವಣೆಯಾಗಿದ್ದಾರೆ. 9-7-2020 ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ವರ್ಧನ್ ರನ್ನು ಧಾರವಾಡ ಆಯುಕ್ತಾಲಯದಿಂದ ಗುಲ್ಬರ್ಗಾ ಆಯುಕ್ತಾಲಯಕ್ಕೇ ವರ್ಗಾವಣೆ ಮಾಡಿ ಆದೇಶ ಮಾಡಿದೆ. ವರ್ಗಾವಣೆ ಆದೇಶ ಬರುತ್ತಿದ್ದಂತೆ ಕಚೇರಿಯಲ್ಲಿ ತಮ್ಮ ಅಧಿಕಾರವನ್ನು ನಿಯೋಜನೆಗೊಂಡ ಅಧಿಕಾರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿ ನಿರ್ಗಮಿಸಿದ್ರು. ಇದು ಇರಲಿ ಬಿಡಿ ಇದಕ್ಕಿಂತ ಮುಖ್ಯವಾದ ಇಂಟ್ರಸ್ಟಿಂಗ್ ಕಹಾನಿ ಏನೆಂದರೆ ಅಧಿಕಾರ ವಹಿಸಿಕೊಂಡ ದಿನದಿಂದ ಈವರೆಗೆ ಹಿರಿಯ ಅಧಿಕಾರಿಯೊಂದಿಗೆ ಮುಸುಕಿನ ಗುದ್ದಾಟವನ್ನು ಇವರು ಮಾಡುತ್ತಿದ್ದರು. ನಿರ್ದೇಶಕರಾಗಿ ಯಾವಾಗ ಅಧಿಕಾರವನ್ನು ವಹಿಸಿಕೊಂಡ್ರೊ ಅಂದಿನಿಂದ ಈವರೆಗೆ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಂದಿಗೆ ಮುಸುಕಿನ ಗುದ್ದಾಟ ನಡೆದಿತ್ತು.

ಇವರ ಮತ್ತು ಹಿರಿಯ ಅಧಿಕಾರಿಯೊಬ್ಬರ ಮುಸುಕಿನ ಗುದ್ದಾಟ ತಿಕ್ಕಾಟಕ್ಕೇ ವರ್ಧನ್ ಸಾಹೇಬ್ರು ಬಲಿಯಾಗಿ ವರ್ಗಾವಣೆಯಾಗಿದ್ದಾರೆ. ಇನ್ನೂ ಅಧಿಕಾರ ಹಸ್ತಾಂತರದ ಕೊನೆಯ ದಿನ ಮತ್ತೇ ಆ ಹಿರಿಯ ಅಧಿಕಾರಿಯ ವಿರುದ್ದ ಗುಡುಗಿದ್ದಾರೆ ಅಲ್ಲದೇ ಅಧಿಕಾರ ಹಸ್ತಾಂತರದ ದಿನವೂ ಮತ್ತೆ ಗುಡುಗಿ ತಮ್ಮ ಅಧಿಕಾರವನ್ನು ಹಸ್ತಾಂತರ ಮಾಡಿ ನಿರ್ಗಮಿಸಿದ್ದಾರೆ.ಇಂದು ಸರ್ಕಾರದ ಆದೇಶದ ಅನುಸಾರ ಧಾರವಾಡ ಆಯುಕ್ತಾಲಯದಿಂದ ಗುಲ್ಬರ್ಗಾ ಆಯುಕ್ತಾಲಯಕ್ಕೆ ವರ್ಗಾವಣೆಯಾದ ನಿಮಿತ್ತ ಸ್ಥಳ ನಿಯುಕ್ತಿಗೊಂಡು ಬಂದಿರುವ ಅಧಿಕಾರಿ ಸಹೋದರಿಗೆ ಇದೀಗ ನಿರ್ದೇಶಕ ಹುದ್ದೆಯ ಪ್ರಭಾರವನ್ನು ಅವರಿಗೆ ವಹಿಸಿರುತ್ತೇನೆ.ಸಂವಿಧಾನ ವಿರೋಧಿಯ ಸಾಮೀಪ್ಯ ದಿಂದ ಸದ್ಯಕ್ಕೆ ಮುಕ್ತಗೊಳಿಸಿದ ಸರ್ಕಾರಕ್ಕೆ, ಇದಕ್ಕೆ ಷಡ್ಯಂತ್ರ ರೂಪಿಸಿದ ಕಾಣದ ಕೈಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

ಈ ಹುದ್ದೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಸಹಾಯ, ಸಹಕಾರ ನೀಡಿದ ಶಿಕ್ಷಣ ಇಲಾಖೆಯ ನನ್ನ ಎಲ್ಲ ಶಿಕ್ಷಕ ಬಂಧು ಬಳಗಕ್ಕೆ,ಸಿಬ್ಬಂದಿ,ಅಧಿಕಾರಿ ಸಹೋದರ, ಸಹೋದರಿಯರಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ನನ್ನ ಅನಂತ ವ೦ದನೆಗಳು. ಈಗಾಗಲೇ ಹಲವಾರು ಸಂದರ್ಭಗಳಲ್ಲಿ ನನ್ನ ಭಾವನೆಗಳಿಗೆ ತಾವೆಲ್ಲರೂ ಸ್ಪಂದನೆ ನೀಡಿದ್ದೀರಿ.ಈ ವ್ಯವಸ್ಥೆಯ ಮಿತಿಯೇ ಇಷ್ಟು. ಇನ್ನೂ ಆರು ವರ್ಷ ಸೇವೆ ಸಲ್ಲಿಸುವ ಅವಕಾಶವಿದೆ ತಮ್ಮೆಲ್ಲರ ಹಾರೈಕೆ ಇದೇ ರೀತಿ ಇರಲಿ. ನಮಗೆ ಎಷ್ಟೇ ತೊಂದರೆ ಬಂದರೂ ಸಂವಿಧಾನ ಉಳಿಸಿಕೊಳ್ಳಲು ನಾವಿರುವ ಪರಿಸರದಲ್ಲಿ ನಾವು ಧ್ವನಿ ಎತ್ತುತ್ತಲೇ ಇರಬೇಕಾಗುತ್ತದೆ. ಭಾರತದ ಪ್ರಜೆಯಾಗಿ ಅದು ನಮ್ಮ ನಾಗರಿಕ ಹೊಣೆಗಾರಿಕೆಯೂ ಹೌದು. ಸಂವಿಧಾನಕ್ಕೆ ಜಯವಾಗಲಿ, ಸಾಮಾಜಿಕ ನ್ಯಾಯ ಸಿಗದಿದ್ದರೂ ಪರವಾಗಿಲ್ಲ, ನೈಸರ್ಗಿಕ ನ್ಯಾಯ ನನಗೆ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಲ್ಲರಿಗೂ ಒಳ್ಳೆಯದಾಗಲಿ. ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡು ಪೊಸ್ಟ್ ಮಾಡಿ ನಿರ್ಗಮಿಸಿ ಹಿರಿಯ ಅಧಿಕಾರಿಯೊಬ್ಬರ ವಿರುದ್ದ ಮತ್ತೇ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.ಇತ್ತ ಸಾಮಾಜಿಕ ಜಾಲ ತಾಣಗಳಲ್ಲಿ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ವಿರುದ್ಧ ಕೆಲವರು ಕಿಡಿಕಾರಿದ್ದಾರೆ‌.ಕಳೆದ ಹಲವಾರು ವರುಷಗಳಿಂದ ಜಾತಿಯತೆ ಮಾಡ್ರಾ ದಬ್ಬಾಳಿಕೆ ಮಾಡ್ತಿದ್ದಿರಾ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.