ಬೆಳ್ತಂಗಡಿ/ ಕಾರ್ಕಳ –
ರಾಜ್ಯ ಸರಕಾರ ನೀಡುವ 2022ನೇ ಸಾಲಿನ ಉತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಮಿತಾನಂದ ಹೆಗ್ಡೆ ಆಯ್ಕೆಯಾ ಗಿದ್ದಾರೆ.
ಅಮಿತಾನಂದ ಹೆಗ್ಡೆ ಅವರ ಕುರಿತು ಒಂದಿಷ್ಟು ಮಾಹಿತಿ ಹೌದು ಬೆಳ್ತಂಗಡಿ:ಮಯ ಅಮಿತಾನಂದ ಹೆಗ್ಡೆ ಅವರು ಬಂಗಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ.ಉಜಿರೆ ಪಿಲಿಕುಂಜೆ ನಿವಾಸಿಯಾಗಿರುವ ಅವರು ಸ.ಹಿ.ಪ್ರಾ. ಶಾಲೆ ಉಪ್ಪಿನಂ ಗಡಿ,ಹಳೆಪೇಟೆ ಉಜಿರೆಯಲ್ಲಿ ಶಿಕ್ಷಕರಾಗಿ,ಸಮೂಹ ಸಂಪನ್ಮೂಲ ಕೇಂದ್ರ ಬೆಳ್ತಂಗಡಿಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ್ ಸೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿಯಾಗಿ ತಾಲೂಕಿನ ವಿವಿಧ ಕಡೆಗಳಲ್ಲಿ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಸಮುದಾಯಕ್ಕಾಗಿ ವಿವಿಧ ಕಾರ್ಯಕ್ರಮಗಳು ಹಾಗೂ ಜಿಲ್ಲಾ ತಾಲೂಕು ಮಟ್ಟದ ಸಮಾವೇಶಗಳನ್ನು ಆಯೋಜಿಸಿದ್ದಾರೆ.
ಉತ್ತಮ ಸಂಘಟಕರಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಸಂಯೋಜಕರಾಗಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರದು ಹಲವಾರು ಕಾರ್ಯಕ್ರಮಗಳ ಉತ್ತಮ ಸಂಘಟಕರಾಗಿ ನೃತ್ಯ,ನಾಟಕಗಳ ತರಬೇತುದಾರರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ಘಟಕದ ಸದಸ್ಯರಾಗಿದ್ದುವಜಿಲ್ಲಾ ಘಟಕದ ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.2021ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳು ಅವರಿಗೆ ಸಂದಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಶಸ್ತಿ ಗಳು ಒಲಿದು ಬಂದು ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿ ಯಾಗ ವೆಂಬುದು ನಮ್ಮ ಆಶಯ.