ಬಂಟ್ವಾಳ –
ಕಾರೊಂದು ಢಿಕ್ಕಿಯಾಗಿ ನಾಲ್ಕು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸುರಿಬೈಲು ಕಾಡಂಗಡಿ ಎಂಬಲ್ಲಿ ನಡೆದಿದೆ.ಮಹಮ್ಮದಲಿ ಸಖಾಫಿ ಎಂಬುವರ ಮಗ ಆದಿಲ್ (4) ಮೃತಪಟ್ಟ ಬಾಲಕನಾಗಿದ್ದು ಖಾಸಗಿ ಆಂಗ್ಲ ಮಾದ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ ಎಂದು ತಿಳಿದು ಬಂದಿದೆ
ಶಾಲೆಗೆ ಮನೆ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋ ಗುತ್ತಿದ್ದಾಗ ಮಾರುತಿ ಕಾರೊಂದು ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.ಈ ಕುರಿತು ದೂರನ್ನು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ