ಶಹಾಬಾದ್ –
ತುಂಬಾ ಉತ್ಸಾಹಿ ಮತ್ತು ಇಲಾಖೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿ ವಿದ್ಯಾರ್ಥಿಗಳಿಗೆ ತುಂಬಾ ಅಚ್ಚು ಮಚ್ಚಿನ ಶಿಕ್ಷಕಿಯಾಗಿದ್ದ ಶ್ರೀಮತಿ ಶಿವಲಿಂಗಮ್ಮ ಸಹ ಶಿಕ್ಷಕಿಯರು ಸರ್ಕಾರಿ ಪ್ರೌಢ ಶಾಲೆ ಲಾಡ್ಲಾಪೂರ ಇವರು ನಿಧನರಾಗಿ ದ್ದಾರೆ.ಹೌದು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳ ಲುತ್ತಿದ್ದ ಇವರು ಸೆಪ್ಟಂಬರ್ 8 ರಂದು ಇಂದು ಸ್ವರ್ಗ ವಾಸಿಯಾಗಿದ್ದಾರೆ.
ಇವರ ನಿಧನದಿಂದಾಗಿ ಇಲಾಖೆಗೆ ತುಂಬಲಾರದ ನಷ್ಟ ವಾಗಿದ್ದು ನಿಧನಕ್ಕೆ ಶಹಾಬಾದ್ ನ ಮತ್ತು ಜಿಲ್ಲೆಯ ನಾಡಿನ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಾವ ಪೂರ್ಣ ನಮನಗಳನ್ನು ಸಲ್ಲಿಸಿ ಸಂತಾಪವನ್ನು ಸೂಚಿ ಸಿದ್ದು ಇನ್ನೂ ಮೃತ ಶಿಕ್ಷಕಿಯವರ ಅಂತ್ಯಕ್ರಿಯೆ ಸ್ವಗ್ರಾಮ ಮರತೂರದಲ್ಲಿ ನಡೆಯಿತು.ಎಂದು ಶಿವಪುತ್ರ ಕಾರ್ಣಿಕ್ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹಾಬಾದ ಇವರು ತಿಳಿಸಿದ್ದಾರೆ.