ಬೆಂಗಳೂರು –
ಪ್ರತಿ ವರ್ಷದಂತೆ ರಾಜ್ಯದಲ್ಲಿ ದಸರಾ ಸಮಯದಲ್ಲಿ ರಾಜ್ಯಾಧ್ಯಂತ ಶಾಲಾ ಕಾಲೇಜುಗಳಿಗೆ ದಸರಾ ರಜೆಯನ್ನು ಘೋಷಣೆ ಮಾಡುವುದು ಸರ್ವೆ ಸಾಮಾನ್ಯ ಹೀಗಿರುವಾಗ ಈ ಬಾರಿ ಕಳೆದ ಎರಡು ವರ್ಷಗಳಿಂದ ದಸರಾ ರಜೆಯಲ್ಲಿ ಕಡಿತವನ್ನು ಮಾಡಿದ ಈ ಬಾರಿ ದಸರಾ ರಜೆಯನ್ನು ಮಾರ್ಪಾಡು ಮಾಡಿ ದಸರಾ ಹಬ್ಬ ಮುಗಿದ ನಂತರ ರಜೆಯನ್ನು ಇಲಾಖೆ ನೀಡಿದೆ ಮಂಗಳೂರಿಗೊಂದು ರಜೆ ರಾಜ್ಯದ ಉಳಿದ ಭಾಗಗಳಿಗೆ ಪ್ರತ್ಯೇಕವಾಗಿ ರಜೆಯನ್ನು ಸಚಿವರು ಘೋಷಣೆ ಮಾಡಿ ಸೂಚನೆ ನೀಡಿದ್ದಾರೆ ಈ ಒಂದು ತಾರತಮ್ಯದ ರಜೆಯ ಘೋಷಣೆಯನ್ನು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಪರವಾಗಿ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಖಂಡಿಸಿದ್ದಾರೆ.
ರಾಜ್ಯವೇ ಒಂದಾಗಿರುವ ನಾವೇಲ್ಲರೂ ಒಂದು ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ಸಧ್ಯ ರಜೆ ಘೋಷಣೆ ವಿಚಾರದಲ್ಲಿ ಒಡೆದು ಆಳುವ ನೀತಿಯನ್ನು ರಜೆ ನೀಡುವ ಮೂಲಕ ತೋರಿಸಿದೆ. ಈ ಒಂದು ಸರ್ಕಾರದ ಮತ್ತು ಇಲಾಖೆಯ ನಿರ್ಧಾರವನ್ನು ಈಗಾಗಲೇ ರಾಜ್ಯದ ಪೋಷಕ ರು ವಿದ್ಯಾರ್ಥಿಗಳು ಆಡಳಿತ ಪಕ್ಷದ ಜನಪ್ರತಿನಿಧಿಗಳು ವಿರೋಧ ಪಕ್ಷದವರು ಸೇರಿದಂತೆ ಹಲವರು ಅಸಮಾಧಾನ ಗೊಂಡಿದ್ದು ಇದರ ನಡುವೆ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘವು ಖಂಡಿಸಿದೆ. ರಾಜ್ಯಾಧ್ಯಂತ 25 ರಿಂದ ನವರಾತ್ರಿ ಹಬ್ಬ ಆರಂಭವಾಗಲಿದ್ದು ಪ್ರತಿ ವರ್ಷದಂತೆ ಹಬ್ಬದ ಸಮಯದಲ್ಲಿ ಎಂದಿನಂತೆ ನಾಡಹಬ್ಬದ ಸಮಯ ದಲ್ಲಿ ರಜೆಯನ್ನು ನೀಡುವಂತೆ ಒತ್ತಾಯವನ್ನು ಮಾಡಿ ದ್ದಾರೆ.ನಾಡ ಹಬ್ಬದ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಎಕರೂ ಪದ ರಜೆಯನ್ನು ನೀಡುವಂತೆ ಈಗಾಗಲೇ ಮಾರ್ಪಾಡು ಮಾಡುವಂತೆ ಇಲ್ಲವೇ ಮಂಗಳೂರಿನ ಮಾದರಿಯಲ್ಲಿಯೇ ರಜೆಯನ್ನು ಘೋಷಣೆ ಮಾಡುವಂತೆ ಒತ್ತಾಯ ಮಾಡಿ ದ್ದಾರೆ.