ಹಾವೇರಿ –
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮತ್ತೊಂದು ದುರಂತವೊಂದು ಹಾವೇರಿಯಲ್ಲಿ ನಡೆದಿದೆ. ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ಹಾವೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕೆರಮತ್ತಿಹಳ್ಳಿಯಲ್ಲಿ ಈ ಒಂದು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಹೋರಿ ಹಬ್ಬದಲ್ಲಿ ಯುವಕನೊಬ್ಬ ಹೋರಿ ಗುದ್ದಿದ ಪರಿಣಾಮವಾಗಿ ಸಾವಿಗೀಡಾಗಿದ್ದಾನೆ.
ಹೋರಿ ಗುದ್ದಿ ಧಾರುಣವಾಗಿ ಸಾವನ್ನಪ್ಪಿದ ಯುವಕನನ್ನು ಚಂದ್ರು ಈರಕ್ಕನವರ ಎನ್ನಲಾಗಿದೆ.ಇದರೊಂದಿಗೆ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನೂ ಹೋರಿ ಗುದ್ದುತ್ತಿದ್ದಂತೆ ತೀವ್ರ ರಕ್ತಸ್ರಾವಾದ ಹಿನ್ನಲೆ ಯುವಕನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು ಆದರೂ ಚಿಕಿತ್ಸೆ ಫಲಿಸದೇ ಯುವಕ ಸಾವಿಗೀಡಾದನು.ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದು ಮೃತ ದುರ್ದೈವಿ ಯುವಕ ರಾಣೇಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ನಿವಾಸಿಯಾಗಿದ್ದಾನೆ.
ಆಸ್ಪತ್ರೆ ಮುಂದೆ ಮೃತನ ಸಂಬಂಧಿಕರು ಮತ್ತು ಹೋರಿ ಅಭಿಮಾನಿಗಳು ಜಮಾಯಿಸಿದ್ದು ಕಂಡು ಬಂದಿತು.ಇನ್ನೂ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಈ ಒಂದು ಅವಘಡ ನಡೆದಿದ್ದು ಯುವಕ ಸಾವನ್ನಪ್ಪುತ್ತಿದ್ದಂತೆ ಹೋರಿ ಹಬ್ಬ ಬಂದ ಮಾಡಲಾಯಿತು. ಹೋರಿ ಹಬ್ಬಕ್ಕೆ ಅನುಮತಿಯನ್ನು ಪೊಲೀಸ್ ಇಲಾಖೆ ನೀಡಿರಲಿಲ್ಲ. ತಿರಸ್ಕಾರ ಮಾಡಿದ್ದ ಪೋಲಿಸ್ ಇಲಾಖೆ ನಡುವೆ ಹೋರಿ ಸ್ಪರ್ಧೆಯನ್ನು ಆಯೋಜಕರು ಮಾಡುತ್ತಿದ್ದರು. ಇನ್ನೂ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಪೋಲಿಸರು ಆಗಮಿಸಿ ಬಿಗಿ ಬಂದೊಬಸ್ತ್ ಮಾಡಿದರು. ಈಪ್ರಕರಣ ಕುರಿತಂತೆ ಆಯೋಜಕರನ್ನು ವಿಚಾರಗೆ ಒಳಪಡಿಸಿದ ಪೋಲಿಸರು ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡ್ತಾ ಇದ್ದಾರೆ.