DNA ವರದಿ ಬಂತು – ಪರಿಹಾರ ಯಾವಾಗ – ಕಣ್ಣಿರಲ್ಲಿ ಕೈತೊಳೆಯುತ್ತಿರುವ ಕುಟುಂಬದ ಕಥೆ ಸ್ವಲ್ಪ ನೋಡ್ರಿ ಜನಪ್ರತಿನಿಧಿಗಳೇ , ಡಿಸಿ ಸಾಹೇಬ್ರೆ

Suddi Sante Desk

ಚಿಕ್ಕೋಡಿ –

ಕೃಷ್ಣಾ ಪ್ರವಾಹಕ್ಕೆ ಸಿಲುಕಿ ಮಗನನ್ನು ಕಳೆದುಕೊಂಡಿದ್ದ ತಾಯಿಗೆ ಒಂದುವರೆ ವರ್ಷದ ಬಳಿಕ ಮಗನ ಸಾವಿನ ಪರಿಹಾರ ಸಿಗುವ ಮುನ್ಸೂಚನೆ ಸಿಕ್ಕಿದೆ.ಪರಿಹಾರ ಸಿಗೋಕೆ ಅಡ್ಡಿಯಾಗಿದ್ದ ಡಿ ಎನ್ ಎ ವರದಿ ಈಗ ಬಂದಿದ್ದು ಮಗನ ಕಳೆದುಕೊಂಡ ತಾಯಿಗೆ ಈಗ ಪರಿಹಾರದ ಆಶಾಭಾವ ಮೂಡಿದೆ.

ಹೌದು ಕರುಳ ಬಳ್ಳಿ ನೀರಲ್ಲಿ ಕೊಚ್ಚಿ ಹೋಗಿ ವರ್ಷವಾದ್ರೂ ಸಹ ಸಿಕ್ಕಿರಲಿಲ್ಲ ತಾಯಿಗೆ ಪರಿಹಾರ ಧನ ಇಲ್ಲದೇ ,ಮಗನೂ ಇಲ್ಲದೆ ಪರಿಹಾರವೂ ಇಲ್ಲದೆ ಒಂದುವರೆ ವರ್ಷ ನೋವಿನಲ್ಲೆ ಕೈ ತೊಳೆಯುತ್ತಿರುವ ತಾಯಿ !! 2019 ರ ಮಹಾ ಪ್ರವಾಹಕ್ಕೆ ಸಿಲುಕಿ ಕೃಷ್ಣಾ ನದಿ ತೀರದ ಗ್ರಾಮಗಳು ಅಕ್ಷರಶಃ ನಲುಗಿ ಹೋಗಿದ್ವು. ಅದರಲ್ಲೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮ ಸಂಪೂರ್ಣ ಸ್ಮಶಾನದಂತಾಗಿ ಹೋಗಿತ್ತು.

ನದಿಯ ನೀರು ಗ್ರಾಮಕ್ಕೆ ನುಗ್ಗಿದಾಗ ಜೀವ ಕೈಯ್ಯಲ್ಲಿ ಹಿಡಿದು ನದಿ ದಾಟುವ ಸ್ಥಿತಿ ಏರ್ಪಟ್ಟಿದ್ದು ಬಹಳಷ್ಟು ಜನರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದರು. ಇನ್ನೂ ಇದಕ್ಕೆ ನಲುಗಿದವರಲ್ಲಿ
ಹೀಗೆ ಕೈಲಿ ಮಗನ ಫೋಟೊ ಹಿಡ್ಕೊಂಡು ಅಳ್ತಾ ಗೋಳಾಡ್ತಿರೋ ಈ ತಾಯಿಯೇ ಸಾಕ್ಷಿ.

ಹೆಸರು ಲಲಿತಾ ಅಂತ. ೨೦೧೯ರ ಕೃಷ್ಣಾ ನದಿಯ ಪ್ರವಾಹದಲ್ಲಿ ಈಕೆಯ ಮಗ ಬಸವರಾಜ್ ಕಾಂಬಳೆ ನೋಡ ನೋಡ್ತಿದ್ದಂತೆ ಹರಿಯೋ ನದಿಯಲ್ಲಿ ಕೊಚ್ಚಿ ಹೋಗಿದ್ದ ಬಳಿಕ ಒಂದು ತಿಂಗಳ ಬಳಿಕ ಕಬ್ಬಿನ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಗ ಬಸವರಾಜನ ಶವ ಪತ್ತೆಯಾಗಿತ್ತು.

ಶಾಲಾ ಬ್ಯಾಗ,ಪಠ್ಯಪುಸ್ತಕ, ಬಸ್ ಪಾಸ್ ಎಲ್ಲ ಸಿಕ್ಕರೂ ಕೂಡ ಶವ ಮಾತ್ರ ಗುರುತು ಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ.
ಈ ಶವ ನನ್ನ ಮಗಂದೆ ಅಂತ ತಾಯಿ ಲಲಿತಾ ಎಷ್ಟು ಹೇಳಿದ್ರು ಕೇಳದೆ ಅಧಿಕಾರಿಗಳು ಡಿ ಎನ್ ಎ ಪರೀಕ್ಷೆಗೆ ಮುಂದಾಗಿದ್ರು.ಡಿ ಎನ್ ಎ ವರದಿಗೆ ಕಳುಹಿಸಿ ಅಧಿಕಾರಿಗಳೂ ಸಹ ಸುಮ್ಮನಾಗಿದ್ರು.

ಆದರೆ ಮಗನನ್ನು ಕಳೆದುಕೊಂಡ ತಾಯಿಯ ಪರಿಸ್ಥಿತಿ ಮಾತ್ರ ಶೋಚನೀಯವಾಗಿತ್ತು.ಇತ್ತ ಪರಿಹಾರವೂ ಸಿಗದೆ ಮಗನೂ ಇಲ್ಲದೆ ತಾಯಿ ಕಂಗಾಲಾಗಿದ್ದಳು.ಇನ್ನು ಕಳೆದ ಒಂದು ವರ್ಷದಿಂದಲೂ ಸಹ ಇದೆ ಡಿ ಎನ್ ಎ ವರದಿಗೋಸ್ಕರವೇ ಪರಿಹಾರ ನೀಡೋದು ತಡವಾಗಿದೆ ಅಂತ ಅಧಿಕಾರಿಗಳು ಹೇಳ್ತಾ ಬರ್ತಿದ್ದರು‌. ಈಗ ಮೊನ್ನೆಯಷ್ಟೆ ವರದಿ ಬಂದಿದ್ದು ಮೃತ ಬಸವರಾಜ್ ಡಿ ಎನ್ ಎ ಅವರ ತಾಯಿಯ ಡಿ ಎನ್ ಎ ಜತೆ ಹೋಲಿಕೆಯಾಗಿದೆ.

ಶ್ರೀಘ್ರವೇ ಪೊಲೀಸ್ ಇಲಾಖೆ ಕಂದಾಯ ಇಲಾಖೆಗೆ ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲಿದೆ.ವರದಿ ಸಲ್ಲಿಕೆಯಾದ ಬೆನ್ನಲ್ಲೆ ಮುಂದಿನ ಪ್ರಕ್ರಿಯೆಗಳ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಇಲ್ಲಿಯವರೆಗೂ ಪರಿಹಾರ ನೀಡೋಕೆ ಡಿ ಎನ್ ಎ ಅಡ್ಡಿಯಾಗಿದೆ ಎಂದು ಹೇಳುತ್ತಿದ್ದ ಅಧಿಕಾರಿಗಳ ಕೈಗೆ ಈಗ ಡಿ ಎನ್ ಎ ವರದಿ ತಲುಪಿದ್ದು ಕೃಷ್ಣಾ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರೋದು ಲಲಿತಾರ ಮಗ ಬಸವರಾಜ್ ಅನ್ನೋದು ಕನ್ಪರ್ಮ ಆಗಿದೆ.

ಹೀಗಾಗಿ ಇನ್ನಾದರೂ ಅಧಿಕಾರಿಗಳು ಮೃತ ಬಸವರಾಜ್ ಕುಟುಂಬಕ್ಕೆ ಸರ್ಕಾರದಿಂದ ಬರಬೇಕಿದ್ದ ಪರಿಹಾರ ಒದಗಿಸಲಿ ಎನ್ನುವುದು ಸಂತ್ರಸ್ಥರ ಆಗ್ರಹವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.