ಚಿತ್ರದುರ್ಗ-
ಬೆಳಕಿನ ಹಬ್ಬ ದೀಪಾವಳಿ ದಿನವೇ ಲಕ್ಷ್ಮೀ ಪೂಜೆಗಾಗಿ ತಗೆದುಕೊಂಡು ಹೋಗುತ್ತಿದ್ದ 7 ಲಕ್ಷ ರೂಪಾಯಿಯನ್ನು ಕಳ್ಳತನ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ ನಗರದ ಹೊಳಲ್ಕೆರೆ ರಸ್ತೆಯ ಮೋರ್ ಮಾಲ್ ಬಳಿ ಈ ಒಂದು ಘಟನೆ ನಡೆದಿದೆ. ಭೀಮಸಮುದ್ರ ಮೂಲದ ಓಂಕಾರಪ್ಪ ಎಂಬುವರೇ ಹಣವನ್ನು ಕಳೆದುಕೊಂಡಿದ್ದಾರೆ.
ಇವರ ಅಡಿಕೆ ಮಂಡಿಗೆ ಸೇರಿದ 7 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಖದೀಮರು ಎಸ್ಕೇಫ್ ಆಗಿದ್ದಾರೆ. ಅಡಿಕೆ ಮಂಡಿಯ ಹಣವನ್ನು ಎಸ್ ಬಿಐ ಬ್ಯಾಂಕ್ ನಲ್ಲಿ ಕೊಟ್ಟು ಲಕ್ಷ್ಮೀ ಪೂಜೆಗಾಗಿ ಬ್ಯಾಂಕ್ ನಿಂದ ಹೊಸ ನೋಟುಗಳನ್ನು ತಗೆದುಕೊಂಡು ಬರುವಾಗ ಈಒಂದು ಘಟನೆ ನಡೆದಿದೆ. ಓಂಕಾರಪ್ಪ SBI ಬ್ಯಾಂಕಿನಲ್ಲಿ ಹೋಸ ನೋಟು ಎಕ್ಸ್ ಚೇಂಜ್ ಮಾಡಿಕೊಂಡು ಹೋಗುವಾಗ ಘಟನೆ ನಡೆದಿದ್ದು.
ಮನೆಯಲ್ಲಿ ಲಕ್ಷ್ಮಿಪೂಜೆಗಾಗಿ ಹೊಸನೋಟು ತೆಗೆದುಕೊಂಡು ಹೋಗುತ್ತಿದ್ದ ಓಂಕಾರಪ್ಪ ಬೈಕ್ ಹಿಂಬದಿ ಬ್ಯಾಗ್ ನಲ್ಲಿ ಇಟ್ಟಿದ್ದರು. ದಾರಿಯ ಮಧ್ಯದಲ್ಲಿ ಹೋಗುತ್ತಿದ್ದ ಓಂಕಾರಪ್ಪ ಮೋರ್ ಮಾಲ್ ಬಳಿ ಬೈಕ್ ನಿಲ್ಲಿಸಿ ಕಿರಾಣಿ ಅಂಗಡಿಗೆ ಚಾಕಲೇಟ್ ತರಲು ಹೋಗಿದ್ದರು.ಈ ವೇಳೆ ಕಳ್ಳತನವಾಗಿದ್ದು ಬೈಕ್ ಹಿಂಬದಿ ಹಣ ಬಿಟ್ಟು ಹೋಗಿದ್ದಾಗ ಹಣ ಎಗರಿಸಿಕೊಂಡು ಹೋಗಿರುವ ಖತರ್ನಾಕ್ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಇನ್ನೂ ಕಳ್ಳರು ಹಣವನ್ನು ದೋಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನೂ ವಿಷಯ ತಿಳಿದ ಚಿತ್ರದುರ್ಗದ ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ರು. ಅಲ್ಲದೇ ಸ್ಥಳದಲ್ಲಿನ ಸಿಸಿ ಟಿವಿ ವಿಡಿಯೋ ತಗೆದುಕೊಂಡು ಕೇಸ್ ದಾಖಲಿಸಿಕೊಂಡಿರುವ ಕೋಟೆ ಪೊಲೀಸ್ ಠಾಣೆ ಸಿಪಿಐ ಪ್ರಕಾಶ್ ಮತ್ತು ಸಿಬ್ಬಂದ್ದಿಯವರು ತನಿಖೆ ಮಾಡ್ತಾ ಇದ್ದಾರೆ. ಬ್ಯಾಗ್ ಎಸ್ಕೇಫ್ ಮಾಡಿಕೊಂಡು ಹೋಗಿರುವ ಖತರ್ನಾಕ್ ಕಳ್ಳರ ಬಂಧನಕ್ಕೇ ಜಾಲವನ್ನು ಬೀಸಿದ್ದು ಇನ್ನೂ ಇತ್ತ ಕಷ್ಟ ಪಟ್ಟು ಬೆಳೆದ ಅಡಿಕೆ ಬೆಳೆಯ ಕೈತುಂಬ ಹಣವನ್ನು ಸಂತೋಷದಿಂದ ತಗೆದುಕೊಂಡು ಬಂದು ಮನೆಯಲ್ಲಿ ಕುಟುಂಬ ಸಮೇತರಾಗಿ ಲಕ್ಷ್ಮೀ ಪೂಜೆಯೊಂದಿಗೆ ದೀಪಾವಳಿ ಮಾಡಿದ್ರಾಯಿತು ಎಂದುಕೊಂಡಿದ್ದ ಓಂಕಾರಪ್ಪನವರ ಮನೆಯಲ್ಲಿ ನೀರವ ಮೌನದ ವಾತಾವರಣ ಕಂಡು ಬರುತ್ತಿದೆ.