ಕೋಲಾರ –
ಸಾಮಾನ್ಯವಾಗಿ ಮನೆ. ದೇವಸ್ಥಾನ, ಅಂಗಡಿ,ಬ್ಯಾಂಕ್ ,ವಾಹನಗಳು ಹೀಗೆ ಎಲ್ಲವನ್ನೂ ಕಳ್ಳತನ ಮಾಡೊದನ್ನ ನೋಡಿದ್ದೇವೆ ಕೇಳಿದ್ದೇವೆ ಆದರೆ ಕೋಲಾರದಲ್ಲಿ ರೈತರು ಬೆಳೆದಿದ್ದ ಆಲೂಗಡ್ಡೆಯನ್ನೇ ಕಳ್ಳತನ ಮಾಡಿದ್ದಾರೆ.
ಹೌದು ಇಂಥಹದೊಂದು ಪ್ರಕರಣವೊಂದು ಕೋಲಾರ ಜಿಲ್ಲೆಯಲ್ಲಿ ಕಂಡು ಬಂದಿದೆ.ಹೊಲದಲ್ಲಿ ಬೆಳೆದಿದ್ದ ರೈತರ ಆಲೂಗಡ್ಡೆಯನ್ನೇ ಕಳ್ಳತನ ಮಾಡಿದ್ದಾರೆ ಕಳ್ಳರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಉಕ್ಕುಂದ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಗ್ರಾಮದ ಕೃಷ್ಣಪ್ಪ ಹಾಗೂ ವೆಂಕಟೇಶಪ್ಪ ಎಂಬುವರ ಹೊಲದಲ್ಲಿ ಈ ಒಂದು ಕಳ್ಳತನ ನಡೆದಿದೆ, ಕಷ್ಟ ಪಟ್ಟು ಬೆಳೆದ ಆಲೂಗಡ್ಡೆಯನ್ನು ರೈತರು ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಜಮೀನಿನಲ್ಲಿದ್ದ ಇನ್ನೂ ಕಟಾವು ಮಾಡದ ಆಲೂಗಡ್ಡೆಯನ್ನು ಕಿತ್ತುಕೊಂಡು ಮೂಟೆಯಲ್ಲಿ ತುಂಬಿಕೊಂಡು ಕಳ್ಳತನ ಮಾಡಿದ್ದಾರೆ.
ಇನ್ನೇನು ಇವತ್ತು ಇಲ್ಲವೇ ನಾಳೆ ಕಟಾವು ಮಾಡಿ ಮಾರಕಟ್ಟೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡಿದರಾಯಿತು ಎಂದುಕೊಂಡಿದ್ದರು ರೈತರು. ಕಟಾವು ಮಾಡಬೇಕು ಎಂದುಕೊಂಡಿದ್ದ ರೈತರಿಗೆ ಕಳ್ಳರು ಶಾಕ್ ನೀಡಿದ್ದಾರೆ. ಹತ್ತು ಹಲವಾರು ಸಮಸ್ಯೆಗಳ ನಡುವೆ ಸಾಕಷ್ಟು ಪ್ರಮಾಣದಲ್ಲಿ ಸಮೃದ್ದವಾಗಿ ಬೆಳೆದಿದ್ದ ಆಲೂಗಡ್ಡೆಗೆ ಸಧ್ಯ ಬಂಗಾರದ ಬೆಲೆ ಇದೆ.
ಹೀಗಾಗಿ ರಾತ್ರಿ ಹಗಲು ಎನ್ನದೇ ಜಮೀನನಲ್ಲಿಯೇ ಕುಳಿತುಕೊಂಡು ರೈತರು ಬೆಳೆದಿರುವ ಆಲೂಗಡ್ಡೆಯನ್ನು ಕಾಯುತ್ತಿದ್ದಾರೆ ರೈತರು.ಇದು ಕೋಲಾರದಲ್ಲಿ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿದ್ದು ಆಲೂಗಡ್ಡೆಯನ್ನು ಕಾಯುತ್ತಿದ್ದಾರೆ.
ಕಟಾವು ಮಾಡಿ ಚೀಲದಲ್ಲಿ ತುಂಬಿ ಜಮೀನಿನಲ್ಲಿ ಇಡಲಾಗಿದ್ದ ಆಲೂಗಡ್ಡೆಯ ಮೂಟೆಗಳನ್ನು ತಗೆದುಕೊಂಡು ಹೋಗಿದ್ದರೇ ಅದೊಂದು ಬೇರೆ ವಿಚಾರ. ಇನ್ನೂ ಕಟಾವು ಮಾಡದೇ ಭೂಮಿಯಲ್ಲಿದ್ದ ಆಲೂಗಡ್ಡೆಯನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ತಾವೇ ಕಟಾವು ಮಾಡಿಕೊಂಡು ಮೂಟೆಯಲ್ಲಿ ಆಲೂಗಡ್ಡೆಯನ್ನು ತುಂಬಿಕೊಂಡು ಹೋಗಿದ್ದಾರೆ. ಒಂದು ಕಡೆ ಆನೆ ಕಾಟ ಮತ್ತೊಂದು ಕಡೆ ಕಳ್ಳರ ಕಾಟ ಇವೆರಡರ ನಡುವೆ ದಿನದಿಂದ ದಿನಕ್ಕೇ ಕಳ್ಳರ ಹಾವಳಿ ಹೆಚ್ಚಾಗಿದ್ದು ತಡರಾತ್ರಿ ಕಳ್ಳರು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ.
ಸಧ್ಯ ಎರಡು ರೈತರ ಜಮೀನಿನಲ್ಲಿ ಇನ್ನೂ ಭೂಮಿಯಲ್ಲಿದ್ದ ಆಲೂಗಡ್ಡೆಯನ್ನು ಕಳ್ಳರು ತಾವೇ ಕಿತ್ತುಕೊಂಡು ಸುಮಾರು 60 ಮೂಟೆಗಳಷ್ಟು ಆಲೂಗಡ್ಡೆ ಚೀಲಗಳನ್ನು ತಗೆದುಕೊಂಡು ಹೋಗಿದ್ದಾರೆ. ಜಮೀನಿನಲ್ಲಿದ್ದ ಆಲೂಗಡ್ಡೆ ಬೆಳೆಯನ್ನು ಕಿತ್ತು ಮೂಟೆಗಳಲ್ಲಿ ಕಳ್ಳರು ತುಂಬಿಕೊಂಡು ಹೋಗಿದ್ದಾರೆ. ಎಂದಿನಂತೆ ಇಂದು ಬೆಳಿಗ್ಗೆ ಜಮೀನಿಗೆ ಬಂದ ರೈತರಿಗೆ ವಿಷಯ ಗೋತ್ತಾಗಿದೆ.
ಆಲೂಗಡ್ಡೆಗೆ ಉತ್ತಮ ಬೆಲೆ ಇರುವ ಹಿನ್ನೆಲೆಯಲ್ಲಿ ಜಮೀನಿನಲ್ಲಿಟ್ಟ ಆಲೂಗಡ್ಡೆಗೆ ಕನ್ನ ಹಾಕಿ ಕಳ್ಳತನ ಮಾಡಿದ್ದಾರೆ. ಇನ್ನೂ ಒಂದು ವಾರದಲ್ಲಿ ಇದು ಎರಡನೇ ಪ್ರಕರಣವಾಗಿದ್ದು ವಿಷಯ ತಿಳಿದ ಬಂಗಾರಪೇಟೆ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸಧ್ಯ ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಮಡ್ತಾ ಇದ್ದಾರೆ ಬಂಗಾರಪೇಟೆ ಪೊಲೀಸರು.