ಹೊಸಪೇಟೆ –
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟೆಂಪಲ್ ರನ್ ಕೈಗೊಂಡಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಡಿಕೆಶಿ.ರುದ್ರಸ್ನಾನ ವಿಧಿ ವಿಧಾನಗಳನ್ನು ಪೊರೈಸಿದ್ರು. ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆ ನಡೆಸಿದರು ಡಿಕೆ ಶಿವಕುಮಾರ.
ಈ ಹಿಂದೆ ಡಿಕೆಶಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಆಲಿಸಲು ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದರು. 2017 ರಲ್ಲಿ ಹೆಲಿಕ್ಯಾಪ್ಟರ್ ಮೂಲಕ ಮೈಲಾರಕ್ಕೆ ಆಗಮಿಸಿದ್ದ ಡಿಕೆಶಿ. ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾಯ್ದು ಹೋಗಿದ್ದರಿಂದ ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದರು.
ಹೆಲಿಕ್ಯಾಪ್ಟರ್ ಮೂಲಕ ಮೈಲಾರಕ್ಕೆ ಬಂದು ಹೋದ ಮೇಲೆ ಇಡಿ ಸಂಕಷ್ಟ ಸೇರಿದಂತೆ ಒಂದಲ್ಲ ಒಂದು ತೊಂದರೆ ಸಂಕಷ್ಟಗಳಲ್ಲಿ ಸಿಲುಕೊಂಡಿದ್ದರು.ಸಾಲದಂತೆ ಜೈಲುವಾಸ ಅನುಭವಿಸಿದ್ದರು. ಇದರಿಂದ ಇಂದು ಡಿಕೆಶಿ ಮೈಲಾರಲಿಂಗೇಶ್ವರನ ಸನ್ನಿಧಿಗೆ ಆಗಮಿಸಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ರು.
ಬೆಳಿಗ್ಗೆ ಒಂಬತ್ತೂವರೆ ಗಂಟೆಗೆ ಪೂಜೆ ಸಲ್ಲಿಸಿದ ಡಿಕೆಶಿ. ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹಾಯ್ದು ಹೋದವರಿಗೆ ಸಂಕಷ್ಟ ಎದುರಾಗುತ್ತೆ ಎಂಬ ನಂಬಿಕೆ ಹಿನ್ನಲೆಯಲ್ಲಿ ಈ ಇಂದು ದೇವಸ್ಥಾನಕ್ಕೇ ಆಗಮಿಸಿ ವಿಶೇಷವಾದ ಪೂಜೆ ಸಲ್ಲಿಸಿದ್ರು.ಡಿಕೆಶಿ ಯವರೊಂದಿಗೆ ಮಾಜಿ ಸಚಿವ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ್ ಕೂಡ ಪಾಲ್ಗೊಂಡು ಸಾಥ್ ನೀಡಿದರು.
ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ನಡೆದ ಪೂಜಾ ಕೈಂಕರ್ಯ ದಲ್ಲಿ ಡಿಕೆ ಶಿವಕುಮಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಾಪ ವಿಮೋಚನೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ರು.