ಮುಂಬಯಿ – ಹರ ಜಾತ್ರಾ ಮಹೋತ್ಸವ-2021 ಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ದೇವೇಂದ್ರ ಪಡ್ನವೀಸ್ ಅವರನ್ನು ಆಹ್ವಾನ ಮಾಡಲಾಯಿತು.
ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂಬೈಗೆ ತೆರಳಿ ನಗರದಲ್ಲಿ ಇರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ದೇವೇಂದ್ರ ಪಡ್ನವೀಸ್‌ನನ್ನು ಭೇಟಿ ನೀಡಿ ಮಾಡಿದರು.
ಇದೇ ವೇಳೆ ಜಾತ್ರೆ ಗೆ ಬರುವಂತೆ ದೇವೇಂದ್ರ ಫಡ್ನವಿಸ್ ಅವರಿಗೆ ಆಮಂತ್ರಣ ನೀಡಿ ಆಹ್ವಾನ ನೀಡಿದರು.
ಹರ ಜಾತ್ರಾ ಮಹೋತ್ಸವ-2021ಕ್ಕೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ದೇವೇಂದ್ರ ಪಡ್ನವೀಸ್ ಜಾಥ್ರಾ ಮಹೋತ್ಸವಕ್ಕೆ ಆಹ್ವಾನ ಮಾಡಿದರು.
ಅಲ್ಲದೆ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ವಿಪಕ್ಷನಾಯಕರಿಗೆ, 2021ರ ಯೋಗ ಕ್ಯಾಲೆಂಡರನ್ನು ನೀಡಲಾಯಿತು.
ಇನ್ನೂ ಈ ವೇಳೆ ಮಾಜಿ ಸಚಿವರು,ಶಾಸಕರಾದ ಮುರುಗೇಶ ನಿರಾಣಿಯವರು,ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ , ಧರ್ಮದರ್ಶಿಗಳಾದ ಚಂದ್ರಶೇಖರ ಪೂಜಾರಿ, ರಾಮಿ ಹೋಟೇಲ್ ಮತ್ತು ರೆಸಾರ್ಟ್ ನ ನಿಶ್ಚಿತ ಶೆಟ್ಟಿ ಹಾಗೂ ಜತೀನ್ ದೇಸಾಯಿಯವರು ಉಪಸ್ಥಿತರಿದ್ದರು.