ಹುಬ್ಬಳ್ಳಿ –
ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಬಂಧನ ಮಾಡಿದ್ದಾರೆ. ಹುಬ್ಬಳ್ಳಿಯ ಗ್ರಾಮೀಣ ಇನಸ್ಪೇಕ್ಟರ್ ರಮೇಶ ಗೋಕಾಕ್ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು ಸರಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಬಂಧನ ಮಾಡಿದ್ದಾರೆ, ಹುಬ್ಬಳ್ಳಿಯ ಕುರುಡಕೇರಿ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಸರಾಯಿಯನ್ನು ಮಾರಾಟ ಮಾಡುತ್ತಿದ್ದಳು ಮಹಿಳೆ. ಇಂದೂಬಾಯಿ ಜಾಧವ ಬಂದಿತ ಮಹಿಳೆಯಾಗಿದ್ದಾಳೆ.
ಬಂದಿತ ಮಹಿಳೆ ಕುರುಡಕೇರಿ ಗ್ರಾಮದ ನಿವಾಸಿಯಾಗಿದ್ದು ವಯಕ್ತಿಕ ಲಾಭದಗೊಸ್ಕರವಾಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತುಕೊಂಡು ಸರಾಯಿಯನ್ನು ಮಾರಾಟ ಮಾಡುತ್ತಿದ್ದಳು. ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ಮಾಡಿ ಮಹಿಳೆಯನ್ನು ಬಂಧನ ಮಾಡಿದ್ದಾರೆ.17 ಪ್ಯಾಕೇಟ್ ಒರಿಜನಲ್ ಚಾಯ್ಸ್ ಟೆಟ್ರಾ ಪೌಚ್ ಗಳು ಹೈವರ್ಡಸ್ ಮತ್ತು ಪೈವ್ ಸ್ಟಾರ್ ವಿಸ್ಕಿ ಪೌಚ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
1788 ಮೌಲ್ಯದ ಸರಾಯಿ ಪ್ಯಾಕೇಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇನ್ನೂ ಬಂಧಿತ ಮಹಿಳೆಯಿಂದ ಇನಸ್ಪೇಕ್ಟರ್ ರಮೇಶ ಗೋಕಾಕ ಅವರೊಂದಿಗೆ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ,ಮಂಜು ಎಳವಾರ,ಮಹಾಂತೇಶ ನ್ಯಾನಗೌಡ, ದಾಬೋಳಿ, ಡೇವಿಡ್ ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯನ್ನು ಬಂಧನ ಮಾಡಿರುವ ಗ್ರಾಮೀಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೇ ಒಪ್ಪಿಸಿದ್ದಾರೆ. ಪ್ರಮುಖವಾಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ವಯಕ್ತಿಕ ಲಾಭದಗೊಸ್ಕರವಾಗಿ ಸರಾಯಿ ಪ್ಯಾಕೇಟ್ ಗಳನ್ನು ತಗೆದುಕೊಂಡು ಬಂದು ಮಾರಾಟ ಮಾಡುತ್ತಿದ್ದಳು ಮಹಿಳೆ.ಈ ಕುರಿತಂತೆ ಗ್ರಾಮಸ್ಥರು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರಿಗೆ ದೂರನ್ನು ನೀಡಿದ್ದರು.