ಹುಬ್ಬಳ್ಳಿ – ತಾಲೂಕು ಕಾನೂನು ಸೇವಾ ಸಮಿತಿಯಿಂದ ಹುಬ್ಬಳ್ಳಿ ನೂತನ ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು. ಆಯೋಜಿಸಲಾದ ಮೆಗಾ ಲೋಕ ಅದಾಲತ್ ನಲ್ಲಿ ಬಾಕಿ ಇದ್ದ 4460 ಪ್ರಕರಣಗಳು ಇತ್ಯರ್ಥ ಪಡಿಸಲಾಗಿದೆ.

16 ಪೀಠಗಳಲ್ಲಿ ಜರುಗಿದ ಅದಾಲತ್ ನಲ್ಲಿ 36 ಕ್ರಿಮಿನಲ್ ಕಂಪೌಂಡೆಬಲ್, 250 ಎನ್.ಐ ಆ್ಯಕ್ಟ, 15 ಮನಿ ರಿಕವರಿ, 19 ಅಪಘಾತ ವಿಮೆ, 66 ಕಾರ್ಮಿಕ , 17 ವೈವಾಹಿಕ , 108 ಸಿವಿಲ್, 124 ಕ್ರಿಮಿನಲ್, 3858 ಪಿಟಿ ಕೇಸುಗಳನ್ನು

ಚರ್ಚಿಸಿ ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲಾಯಿತು. ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನಾಗರಾಜಪ್ಪ ಎ.ಕೆ. ತಿಳಿಸಿದ್ದಾರೆ.