ಪಾಲಿಕೆ ಚುನಾವಣೆ – ಇಂದು ಹೊರ ಬೀಳಲಿದೆ ಭವಿಷ್ಯ

Suddi Sante Desk

ಬೆಂಗಳೂರು –

ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ತೀರ್ಪು ಇಂದು ಪ್ರಕಟವಾಗಲಿದೆ. ಈಗಾಗಲೇ ವಾದ ವಿವಾದಗಳನ್ನು ಆಲಿಸಿರುವ ನ್ಯಾಯಾಧೀಶರು ಇಂದು ಬಹುತೇಕವಾಗಿ ತೀರ್ಪನ್ನು ಪ್ರಕಟಿಸಲಿದ್ದಾರೆ. ನ್ಯಾಯಾಲಯದ ಇಂದಿನ ತೀರ್ಪಿನ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಟಿಕೆಟ್‌ ಆಕಾಂಕ್ಷಿಗಳ ತೀರ್ಪಿನತ್ತ ಚಿತ್ತ ಮಾಡಿ ಕೋರ್ಟ್‌ನತ್ತ ನೆಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜ ಗೌರಿ

ವಾರ್ಡ್‌ ಮರುವಿಂಗಡಣೆ ಮತ್ತು ಮೀಸಲಾತಿ ಅಧಿಸೂಚನೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ಹಿಂಪಡೆಯಲು ಈಗಾಗಲೇ ನಗರಾಭಿವೃದ್ಧಿ ಇಲಾಖೆ ವಿಳಂಬ ಮಾಡಿತ್ತು. ಅದಕ್ಕಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯಕ್ಕೇ ಹಾಜರಾಗಿ ಕ್ಷಮೆಯಾಚಿ ಅದನ್ನು ಹಿಂದೆ ಪಡೆದಿದ್ದರು ಅಲ್ಲದೇ ಆದಷ್ಟು ಬೇಗನೆ ಚುನಾವಣೆ ನಡೆಸಲು ಸಿದ್ಧವಿರುವುದಾಗಿಯೂ ತಿಳಿಸಿದ್ದರು .ಮಹಾನಗರ ಪಾಲಿಕೆಗೆ ಆದಷ್ಟು ಬೇಗನೆ ಚುನಾವಣೆ ನಡೆಸಬೇಕು. ಈ ಕುರಿತು ಸರ್ಕಾರ ಹಾಗೂ ಚುನಾವಣಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಹುಬ್ಬಳ್ಳಿಯ ಕಾಂಗ್ರೆಸ್‌ ಮುಖಂಡ ನಾಗರಾಜ ಗೌರಿ ಸೇರಿದಂತೆ ಹಲವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಡಿ. 1ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯದ ವಿಭಾಗೀಯ ಪೀಠ ಡಿ. 10ಕ್ಕೆ ಅಂದರೆ ಇಂದು ಮುಂದೂಡಿತ್ತು. 2019ರ ಮಾರ್ಚ್‌ 6ರಂದು ಪಾಲಿಕೆಯಲ್ಲಿ ಬಿಜೆಪಿಯ ಆಡಳಿತದೊಂದಿಗೆ ಮೇಯರ್ ಸುಧೀರ ಸರಾಫ್ ಅಧಿಕಾರದೊಂದಿಗೆ ಪಾಲಿಕೆಯ ಸದಸ್ಯರ ಅಧಿಕಾರವಧಿ ಕೊನೆಗೊಂಡಿತ್ತು. ಅಂದಿನಿಂದ ಈವರೆಗೆ ಚುನಾವಣೆ ನಡೆಸಲು ಸರ್ಕಾರ ವಿಳಂಬ ಮಾಡಿತ್ತು. ಇದಕ್ಕೇ ಹತ್ತು ಹಲವಾರು ಕಾರಣಗಳಿದ್ದು ‘ಚುನಾವಣೆ ನಡೆಸಲು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೇ ಅರ್ಜಿ ಸಲ್ಲಿಸಲಾಗಿತ್ತು.

ಕೊನೆಗೂ ತೀರ್ಪು ಬರುವ ಕಾಲ ಸನ್ನಿಹಿತವಾಗಿದೆ. ಜನಪ್ರತಿನಿಧಿಗಳಿಲ್ಲದ ಕಾರಣ ಹುಬ್ಬಳ್ಳಿ ಧಾರವಾಡದಲ್ಲಿ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆಯಲ್ಲಿ ಹಲವಾರು ಸಮಸ್ಯೆ, ಕಸ ವಿಲೇವಾರಿ, ಸ್ವಚ್ಛತೆ , ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಹರಿಸುವವರೇ ಇಲ್ಲದಂತಾಗಿದೆ. ಆದಷ್ಟು ಬೇಗ ಚುನಾವಣೆ ನಡೆದರೆ ಜನರಿಗೂ ಅನುಕೂಲವಾಗುತ್ತದೆ’ ಎಂದು ಕೋರ್ಟ್‌ನಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡ ನಾಗರಾಜ ಗೌರಿ ಅರ್ಜಿಯಲ್ಲಿ ಉಲ್ಲೇಖ ಮಾಡಿ ಸಲ್ಲಿಸಿದ್ದು ಬೆಂಗಳೂರಿನ ಹೈಕೊರ್ಟ್ ವಿಭಾಗೀಯ ಪೀಠ ಹನ್ನೇರಡು ಘಂಟೆಗೆ ತೀರ್ಪು ಪ್ರಕಟಿಸಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.