ಹಿಂಡಗಲಾ ಜೈಲಿಗೆ ವಿನಯ ಕುಲಕರ್ಣಿ ಕುಟುಂಬಸ್ಥರು

Suddi Sante Desk

ಬೆಳಗಾವಿ –

ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಗಲಾ ಜೈಲಿನಲ್ಲಿದ್ದಾರೆ. ಇವರನ್ನು ಭೇಟಿಯಾಗಲು ಬೆಳಗಾವಿ ಹಿಂಡಲಗಾ ಜೈಲಿಗೆ ಕುಟುಂಬಸ್ಥರು ಆಗಮಿಸಿದ್ರು.

ಬೆಳಗಾವಿಗೆ ಆಗಮಿಸಿದ ಕುಟುಂಬಸ್ಥರು ನೇರವಾಗಿ ಕಾರಾಗೃಹಕ್ಕೇ ಆಗಮಿಸಿದ್ರು.ಕೊಲೆ ಪ್ರಕರಣದಲ್ಲಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ.ಕಳೆದ 31 ದಿನಗಳಿಂದ ಹಿಂಡಲಗಾ ಜೈಲಿನಲ್ಲಿದ್ದಾರೆ.

ಸಿಬಿಐ ವಿಶೇಷ ಕೋರ್ಟ್ ನಿಂದ ಅನುಮತಿ ಪಡೆದುಕೊಂಡು ಕುಟುಂಬಸ್ಥರು ವಿನಯ ಕುಲಕರ್ಣಿ ಅವರನ್ನು ಭೇಟಿಯಾಗಲು ಆಗಮಿಸಿ ಭೇಟಿಯಾಗಿದ್ದಾರೆ. ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ತಮ್ಮ ಮೂವರು ಮಕ್ಕಳೊಂದಿಗೆ ಹಾಗೇ ಓರ್ವ ಸಂಬಂಧಿಯೊಂದಿಗೆ ಸೇರಿಕೊಂಡು ಭೇಟಿ ಮಾಡಲು ಬಂದಿದ್ದರು. ನ್ಯಾಯಾಲಯ ಒಟ್ಟು ನಾಲ್ಕು ಜನ ಭೇಟಿಗೆ ಅವಕಾಶವನ್ನು ನೀಡಿದೆ. ಇಂದು ಸಂಜೆ ನಾಲ್ಕು ಗಂಟೆಯಿಂದ ಐದು ಗಂಟೆ ವರೆಗೆ ಮಾತ್ರ ವಿನಯ್ ಭೇಟಿಗೆ ಕಾಲಾವಕಾಶವನ್ನು ನೀಡಿತ್ತು ಹೀಗಾಗಿ ನ್ಯಾಯಾಲಯ ನೀಡಿರುವ ಸಮಯದಲ್ಲಿಯೇ ಕಾರಾಗೃಹಕ್ಕೇ ಆಗಮಿಸಿ ವಿನಯ ಕುಲಕರ್ಣಿ ಅವರನ್ನು ಪತ್ನಿ ಮಕ್ಕಳು ಮತ್ತು ಸಂಬಂಧಿಕರು ಭೇಟಿಯಾಗಿ ಮರಳಿ ತೆರಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.