ಹುಬ್ಬಳ್ಳಿ –
ಬೆಳ್ಳಂ ಬೆಳಿಗ್ಗೆ ಪಾಗಲ್ ಪ್ರೇಮಿಯ ಹುಚ್ಚಾಟವೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಆಟೋ ಚಾಲಕನಾಗಿದ್ದ ಇಮ್ತಿಯಾಜ್ ಕುಂದಗೋಳ ತಾಲೂಕಿನ ಕುಂಕುರ ಗ್ರಾಮದವರು.ಶೈನಾ ಎಂಬ ಯುವತಿಯೊಂದಿಗೆ ಕಳೆದ ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದರು ಇಬ್ಬರು.ದೇಶಪಾಂಡೆ ನಗರದ ನಿವಾಸಿ ಯುವತಿ ಶೈನಾ ಭಾನು ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಯವತಿಯ ಕತ್ತಿಗೆ ಮೂರು ಬಾರಿ ಇಮ್ತಿಯಾಜ್ ಹೊಡೆದಿದ್ದಾರೆ.ಇನ್ನೂ ಸ್ಥಳದಲ್ಲಿದ್ದ ಮಂಜುನಾಥ ಎಂಬುವವರಿಂದ ಯುವತಿಯನ್ನು ರಕ್ಷಣೆ ಮಾಡಲಾಗಿದೆ.ಘಟನೆ ನಡೆಯುತ್ತಿದ್ದಂತೆ ಹಲ್ಲೆ ನಡೆಯುತ್ತಿದ್ದಂತೆ ಯುವಕನಿಂದ ಯುವತಿಯ ರಕ್ಷಣೆ ಮಾಡಲಾಗಿದೆ.ಯುವತಿಯನ್ನ ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಮಂಜುನಾಥ.
ಜನನಿಬೀಡ ಪ್ರದೇಶದಲ್ಲಿಯೇ ಕೊಲೆ ಯತ್ನ ನಡೆದಿದೆ.ತಲ್ವಾರ್ ನಿಂದ ಹಲ್ಲೆಗೆ ಯತ್ನವನ್ನು ಮಾಡಲಾಗಿದೆ.ಗಂಭೀರವಾಗಿ ಗಾಯಗೊಂಡಿರುವ ಯುವತಿ ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ದೇಶಪಾಂಡೆ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಮಾಸ್ಕ ಹಾಕಿಕೊಂಡು ಬಂದು ಈ ಒಂದು ಕೃತ್ಯ ನಡೆದಿದೆ.ತಲ್ವಾರನಿಂದ ಹಲವು ಬಾರಿ ಹಲ್ಲೆ ಮಾಡಿದ್ದಾನೆ.
ಪ್ರೇಮ ವೈಫಲ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.ಆರೋಪಿ ಸಧ್ಯ ಉಪನಗರ ಪೊಲೀಸ್ ಠಾಣೆ ಅತಿಥಿಯಾಗಿದ್ದಾರೆ.