ಕೋಲಾರ –
ಅಬಕಾರಿ ಅಧಿಕಾರಿಯೊಬ್ಬರ ಪುತ್ರಿಯೊಬ್ಬರು ಪ್ರಧಾನಿ ಮೋದಿ ಕಚೇರಿಗೆ ದೂರು ನೀಡಿದ್ದಾರೆ.
ವರ್ಗಾವಣೆಗೆ ಒಂದು ಕೋಟಿ ರೂಪಾಯಿ ಲಂಚವನ್ನು ಅಬಕಾರಿ ಸಚಿವ ಹೆಚ್.ನಾಗೇಶ್ ಕೇಳಿದ್ದಾರೆ.ಅಬಕಾರಿ ಇಲಾಖೆಯಲ್ಲಿ ದಲ್ಲಾಳಿಗಳನ್ನು ಇರಿಸಿ ವರ್ಗಾವಣೆಯಲ್ಲಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ.
ಪ್ರಧಾನಿ ಕಚೇರಿಯಲ್ಲಿ ದಾಖಲಾದ ದೂರಿನ ಸಂಖ್ಯೆ POWPU/E/2020/0655623,
ರಾಜ್ಯ ಸರ್ಕಾರದಲ್ಲಿ ದಾಖಲಾಗಿರುವ ಇ-ಜನ ಸ್ಪಂದನ ಮನವಿಯ ಸಂಖ್ಯೆ 51868298 ಯಾಗಿದೆ.ನಮ್ಮ ತಂದೆ ಅನಾರೋಗ್ಯ ಪೀಡಿತ ಅಧಿಕಾರಿಯಾಗಿದ್ದಾರೆ. ಹಣಕ್ಕಾಗಿ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಅಧಿಕಾರಿಯ ಪುತ್ರಿ ಆರೋಪ ಮಾಡಿದ್ದಾರೆ.
ಭ್ರಷ್ಟಚಾರ ತಡವಾಗಿ ಬೆಳಕಿಗೆ ಬಂದ ಪ್ರಕರಣ ಇದಾಗಿದೆ.ರಾಜ್ಯದ ಸಚಿವರು ಈ ಒಂದು ಭ್ರಷ್ಟಾಚಾರ ಕುರಿತು ವಿರೋಧ ಪಕ್ಷದವರಿಗೂ ದೂರಿನ ಮಾಹಿತಿಯನ್ನು ಅಧಿಕಾರಿಯ ಪುತ್ರಿ ಕೊಟ್ಟಿದ್ದಾಳೆ.
ಹೊಸಪೇಟೆಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬಕಾರಿ ಅಧಿಕಾರಿಗೆ ಬೆಂಗಳೂರಲ್ಲಿ ಖಾಲಿ ಇರುವ ಜಂಟಿ ಆಯುಕ್ತರ ಹುದ್ದೆಗೆ ಬರಲು 1 ಕೋಟಿ ಬೇಡಿಕೆಯನ್ನು ಇಟ್ಟಿದ್ದಾರೆಂದು ದೂರನ್ನು ಅಧಿಕಾರಿ ಪುತ್ರಿ ಸ್ನೇಹ ಎಂಬುವವರಿಂದ ಪ್ರಧಾನಿಗೆ ಪತ್ರವನ್ನು ಬರೆದಿದ್ದಾರೆ.ಸಧ್ಯ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ದೂರನ್ನು ನೀಡಿದ್ದು ಅಲ್ಲಿಂದ ಏನು ಉತ್ತರ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.