ಧಾರವಾಡ –
7ನೇ ವೇತನ ಆಯೋಗ ಜಾರಿಗೆ ಆಗ್ರಹ ಸಚಿವ ಸಂತೋಷ ಲಾಡ್ ಭೇಟಿಯಾಗಲಿರುವ ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರ ಟೀಮ್ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ SF ಸಿದ್ದನಗೌಡರ ನೇತೃತ್ವದಲ್ಲಿ ಸಚಿವ ರನ್ನು ಭೇಟಿಯಾಗಲಿರುವ ನಿಯೋಗ ಹೌದು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ದ ವತಿಯಿಂದ 7 ನೇ ವೇತನ ಆಯೋಗದ ವರದಿ ಶೀಘ್ರ ಜಾರಿಗಾಗಿ ಒತ್ತಾಯಿಸಿ ಸಚಿವ ಸಂತೋಷ ಲಾಡ್ ರನ್ನು ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರ ಟೀಮ್ ಭೇಟಿಯಾಗಲಿದ್ದಾರೆ.
ಸಚಿವ ಸಂತೋಷ ಎಸ್.ಲಾಡ್ ಕಾರ್ಮಿಕ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ ಬೆಂಗಳೂರು ಇವರನ್ನು 25.01.2024ರ ಬೆಳಿಗ್ಗೆ 09.45 ಕ್ಕೆ ಹೊಸ ಸರ್ಕೂಟ ಹೌಸ್ ಧಾರವಾಡದಲ್ಲಿ ಜಿಲ್ಲಾಧ್ಯಕ್ಷರಾದ ಎಸ್.ಎಫ್.ಸಿದ್ದನಗೌಡರ ನೇತೃತ್ವದಲ್ಲಿ
ಮನವಿ ಸಲ್ಲಿಸಲು ಜಿಲ್ಲಾ ಸಂಘದ ಪದಾಧಿ ಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಜಿಲ್ಲೆಯ ಎಲ್ಲಾ ಇಲಾಖೆಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸಮಸ್ತ ನೌಕರ ಬಂಧುಗಳು ತೀರ್ಮಾನ ಕೈಗೊಂಡಿದ್ದಾರೆ
ರಾಜ್ಯ ಸರ್ಕಾರಿ ನೌಕರರ ಅತ್ಯಂತ ಪ್ರಮುಖ ಬೇಡಿಕೆಗಳಾದ 7 ನೇ ವೇತನ ಆಯೋಗದ ವರದಿ ಜಾರಿ, ಹೊಸ ಪಿಂಚಣಿ ರದ್ದು ಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿ ಮಾಡುವಂತೆ ಮತ್ತು ನೌಕರರಿಗೆ ನಗದು ರಹಿತ ಚಿಕಿತ್ಸೆಗಾಗಿ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗಾಗಿ ಮನವಿ ಸಲ್ಲಸಲಾಗುತ್ತಿದೆ ಆದ್ದರಿಂದ ತಾವು ತಪ್ಪದೆ ಸದರಿ ಕಾರ್ಯದಲ್ಲಿ ಪಾಾಲ್ಗೊಳ್ಳು ವಂತೆ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಳ್ಳಿ ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..