ಧಾರವಾಡ – ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡಲಿಲ್ಲವೆಂದು ಆಕ್ರೋಶಗೊಂಡು ಬಸ್ ತಡೆದು ಪ್ರತಿಭಟನೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.ಬಸ್ ಬಿಡದೇ ಇರುವುದನ್ನು ಖಂಡಿಸಿ ಹೆಬ್ಬಳ್ಳಿ ಗ್ರಾಮಸ್ಥರು ಬಸ್ ತಡೆದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಒಂದು ಘಟನೆ ಧಾರವಾಡದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೆಬ್ಬಳ್ಳಿ ಗ್ರಾಮಕ್ಕೆ ರಾತ್ರಿ 8.30 ಕ್ಕೆ ತೆರಳಬೇಕಾಗಿದ ಬಸ್ 30 ನಿಮಿಷ ತಡವಾಗಿ ಧಾರವಾಡದ ಕೇಂದ್ರಿಯ ಬಸ್ ನಿಲ್ದಾಣಕ್ಕೆ ಬಂದಿದೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅದೇ ಗ್ರಾಮಕ್ಕೆ ತೆರಳಬೇಕಾಗಿದ್ದ 9 ಗಂಟೆಯ ಬಸ್‌ನ್ನು ತಡೆದು ಸಾರಿಗೆ ಬಸ್ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರಾತ್ರಿ ಸಮಯವಾಗಿದೆ ಈಗ ನೀವು 30 ನಿಮಿಷ ತಡ ಮಾಡಿದ್ದೀರಿ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು

ಇನ್ನೂ ಕೆಲವು ಯುವಕರು ಅತಿರೇಕದ ವರ್ತನೆ ತೋರಿ ಹಿಂದೆ ಇರುವ ಬಸ್ ನ್ನು ಮುಂದೆ ತಂದು ಅದೇ ಬಸ್ ನಲ್ಲಿ ನಾವು ಹೋಗುತ್ತೆವೆ ಎಂದು ಪಟ್ಟು ಹಿಡಿದಿದ್ದರು. ಆದರೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಧಾರವಾಡ ಶಹರ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ್ ಸತಾರೆ ರವರು ಸ್ಥಳಕ್ಕೆ ಆಗಮಿಸಿ. ಗ್ರಾಮಸ್ಥರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇನ್ನೂ ಸ್ಥಳಕ್ಕೆ ಪೊಲೀಸರು ಎಂಟ್ರಿಯಾಗುತ್ತಿದಂತೆ ಅತೀರೆಕದ ವರ್ತನೆ ತೋರುತ್ತಿದ್ದ ಕೆಲವು ಯುವಕರು ಸುಮ್ಮನೆ ಬಸ್ ಏರಿದರು.