ಧಾರವಾಡ –
ಗ್ರಾಮ ಪಂಚಾಯತನ ಮೊದಲನೇಯ ಹಂತದ ಮತದಾನ ಧಾರವಾಡ ಜಿಲ್ಲೆಯಲ್ಲೂ ಬೆಳಿಗ್ಗೆ ಯಿಂದ ಆರಂಭವಾಗಿದೆ. ಜಿಲ್ಲೆಯ ಧಾರವಾಡ , ಕಲಘಟಗಿ,ಅಳ್ನಾವರ ಈ ಮೂರು ತಾಲೂಕಿನ 65 ಗ್ರಾಪಂ ಇಂದು ಮತದಾನ ನಡೆಯುತ್ತಿದೆ.
ಇನ್ನೂ ಮತದಾನದ ಹಿನ್ನಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಎಲ್ಲಾ ಸಿದ್ದತೆಯನ್ನು ಮಾಡಿದ್ದು ಬೆಳಿಗ್ಗೆಯಿಂದಲೇ ಮತದಾರರು 65 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ.
ಮೈನಡಗುವ ಚಳಿಯ ನಡುವೆಯೂ ಕೂಡಾ ಮತದಾರರು ಮತಗಟ್ಟೆಗಳತ್ತ ವಿರಳವಾಗಿ ಆಗಮಿಸಿ ತಮ್ಮ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇನ್ನೂ ಮತದಾನ ದಿನವಾದ ಇಂದು ಜಿಲ್ಲೆಯಲ್ಲಿ ಹಲವು ಮತದಾನ ಕೇಂದ್ರಗಳಲ್ಲಿ ಕೆಲ ಅಭ್ಯರ್ಥಿಗಳ ಪರವಾಗಿ ಮತದಾನ ಕೇಂದ್ರಗಳಿಗೆ ಪೂಜೆಯನ್ನು ಮಾಡಲಾಯಿತು.
ಪೊಲೀಸರು ಮತ್ತು ಚುನಾವಣಾ ಸಿಬ್ಬಂದಿಗಳಿದ್ದರೂ ಕೂಡಾ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿ ಪೂಜೆಯನ್ನು ಮಾಡಿದರು.
ಇನ್ನೂ ಇದರೊಂದಿಗೆ ಹೆಚ್ಚಾಗಿ ಜಿಲ್ಲೆಯಲ್ಲಿ ಕಂಡು ಬಂದಿದ್ದು ವಾಮಾಚಾರ .ಜಿಲ್ಲೆಯ ಕಲಘಟಗಿ ಧಾರವಾಡ ಅಳ್ನಾವರ ಈ ಮೂರು ಕಡೆಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಪೇಪರ್ ನಲ್ಲಿ ಬರೆದು ಇನ್ನೂ ಮತ್ತೊಂದು ಕಡೆ ಪೊಟೊಗಳನ್ನು ಇಟ್ಟು ಹೀಗೆ ಇಟ್ಟು ವಾಮಾಚಾರ ಮಾಡಿರುವ ದೃಶ್ಯಗಳು ಕಂಡು ಬಂದವು.
ಮುಕ್ಕಲ ಮತ್ತು ಮಿಶ್ರಕೋಟಿಯಲ್ಲಿ ವಾಮಾಚಾರ ಮಾಡಲಾಗಿದೆ. ಲಿಂಬೆಹಣ್ಣು ಇಟ್ಟು, ಅಭ್ಯರ್ಥಿಗಳ ಹೆಸರು ಬರೆದು ವಾಮಾಚಾರ ಮಾಡಿದ್ದು ಕಂಡು ಬಂದಿತು. ಗೆಲುವಿಗಾಗಿ ಕೊನೆಯ ಕಸರತ್ತು ನಡೆಸಿದ ಅಭ್ಯರ್ಥಿಗಳು. ವೋಟಿಗಾಗಿ ವಾಮಾಚಾರದ ಮೊರೆ ಹೋಗಿದ್ದು ಕಂಡು ಬಂದಿತು.
ಇನ್ನೂ ಇದರಿಂದ ಕೆಲ ಅಭ್ಯರ್ಥಿಗಳು ಭಯಭೀತರಾಗಿದ್ದು ಕಂಡು ಬಂದಿತು.ಅಲ್ಲದೇ ವಾಮಾಚಾರದಿಂದ ಭಯಭೀತರಾದ ಗ್ರಾಮದ ಜನರು ಮತದಾನಕ್ಕೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದೇಲ್ಲ ಮತಗಟ್ಟೆ ಅಕ್ಕಪಕ್ಕದಲ್ಲಿ ಕಂಡು ಬಂದಿತು. ಇದರೊಂದಿಗೆ ದೇವರ ಮೊರೆ ಹೋದ ಅಭ್ಯರ್ಥಿಗಳು.ಭಿತ್ತಿಪತ್ರವನ್ನು ದೇವರ ಗದ್ದುಗೆ ಮೇಲೆ ಇಟ್ಟು ಪ್ರಾರ್ಥನೆ ಮಾಡಿದರು.
ರಾಶಿ ರಾಶಿ ಭಿತ್ತಿಪತ್ರಗಳನ್ನು ದೇವರ ಗದ್ದುಗೆ ಮೇಲಿಟ್ಟು ಪ್ರಾರ್ಥನೆ ಮಾಡಿರುವ ಚಿತ್ರಣ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಕಂಡು ಬಂದಿತು. ನಾಗ ದೇವರ ಮೇಲೆ ಭಿತ್ತಿ ಪತ್ರಗಳನ್ನಿಟ್ಟು ಪೂಜೆ ಮಾಡಿ ಗೆಲುವಿಗಾಗಿ ಪ್ರಾರ್ಥಿಸಿದ್ರು.
ಇನ್ನೂ ಮೈ ನಡಗುವ ಚಳಿಯ ನಡುವೆಯೂ ಮಂದಗತಿಯಲ್ಲಿ ಮತದಾನ ಆರಂಭವಾಗಿದ್ದ ನಿಧಾನವಾಗಿ ಮತ ಚಲಾವಣೆ ಮಾಡಲು ಬರುತ್ತಿದ್ದಾರೆ. ಇನ್ನೂ ಕೊವಿಡ್ ನಿಯಮ ಗಾಳಿಗೆ ತೂರಿ ಮತಗಟ್ಟೆಗಳತ್ತ ಬರುತ್ತಿದ್ದಾರೆ ಮಿಶ್ರಿಕೋಟಿ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಒಂದು ಚಿತ್ರಣದ ಘಟನೆ ಕಂಡು ಬಂದಿತು. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಗುಂಪು ಸೇರಿದ ಜನ.ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ ಮಿಶ್ರಿಕೋಟಿ ಮಂದಿ ಮತಗಟ್ಟೆ ಮುಂದೆ ನೂರಾರು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದು ಕಂಡು ಬಂದಿತು.
ಇನ್ನೂ ಇತ್ತ ಕಣ್ಣಿದ್ದೂ ಕುರುಡಾದ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಸುಮ್ಮನೇ ಇದ್ದರು. ಒಟ್ಟಾರೆ ಧಾರವಾಡ ಜಿಲ್ಲೆಯಲ್ಲೂ ಇಂದು ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 872 ಸ್ಥಾನಗಳಿಗೆ ಇಂದು ಮೊದಲನೇಯ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು ಮೂರು ತಾಲೂಕುಗಳಲ್ಲಿ 2747 ಅಭ್ಯರ್ಥಿಗಳು ಕಣದಲ್ಲಿದ್ದು ಭವಿಷ್ಯವನ್ನು ಮತದಾರ ಪ್ರಭುಗಳು ಬರೆಯುತ್ತಿದ್ದಾರೆ.ಇನ್ನೂ ಈವರೆಗೆ ಅಂದರೆ ಬೆಳಿಗ್ಗೆ ಹನ್ನೊಂದು ಘಂಟೆವರೆಗೆ ಧಾರವಾಡ ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ ಧಾರವಾಡ ತಾಲ್ಲೂಕು- ಶೇ 12.71 ,ಕಲಘಟಗಿ ತಾಲೂಕು- ಶೇ.12.87,ಅಳ್ನಾವರ ತಾಲೂಕು- ಶೇ.11.51 ಮತದಾನವಾಗಿದೆ.