ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ರು – ಮತದಾರರು ಅವಿರೋಧವಾಗಿ ಆಯ್ಕೆ ಮಾಡಿದ್ರು – ಒಗ್ಗಟ್ಟನ್ನು ಪ್ರದರ್ಶಿಸಿದ ಹೆಬ್ಬಳ್ಳಿ ಗ್ರಾಮಸ್ಥರು

Suddi Sante Desk

ಧಾರವಾಡ –

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯರೊಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೆಬ್ಬಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟ 32 ಸದಸ್ಯರ ಬಲವನ್ನು ಹೊಂದಿರುವ ಈ ಒಂದು ಗ್ರಾಮದಲ್ಲಿ ಒರ್ವ ಸದಸ್ಯರನ್ನು ಅವಿರೋಧವಾಗಿ ಗ್ರಾಮಸ್ಥರೇ ಆಯ್ಕೆ ಮಾಡಿದ್ದಾರೆ. ವಾರ್ಡ್ 5 ರಲ್ಲಿ ಅವಿರೋಧವಾಗಿ ಸದಸ್ಯರೊಬ್ಬರನ್ನು ಆಯ್ಕೆ ಮಾಡಿ ಗ್ರಾಮದ ಹಿರಿಯರು ಒಗ್ಗಟ್ಟಿನಿಂದ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಬಸವರಾಜ ಶಿವಪ್ಪ ಲಕ್ಕಮನವರ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಇವರು ಹೆಬ್ಬಳ್ಳಿ ಗ್ರಾಮ ಪಂಚಾಯತನ 5ನೇ ವಾರ್ಡ್ ನ ಗ್ರಾಮ ಪಂಚಾಯತ ಸದಸ್ಯರಾಗಿದ್ದಾರೆ.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯತಿಯಲ್ಲಿ ಈ ಒಂದು ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಂದು ಕಡೆ ಗ್ರಾಮ ಪಂಚಾಯತಿ ಚುನಾವಣಾ ಕಣ ಸಾಕಷ್ಟು ಪ್ರಮಾಣದಲ್ಲಿ ರುಂಗು ಪಡೆದುಕೊಳ್ಳುತ್ತಿದೆ. ಮತ್ತೊಂದೆಡೆ ಎಲ್ಲ ಅಭ್ಯರ್ಥಿಗಳು

ಚುನಾವಣೆ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನೂ ಗ್ರಾಮ ಪಂಚಾಯತಿಯ 5ನೇ ವಾರ್ಡ್‌ ನಲ್ಲಿ ಗ್ರಾಮದ ಹಿರಿಯರ ಮುಖಂಡರ ಗಣ್ಯರ ಸಮ್ಮುಖದಲ್ಲಿಯೇ ಅವಿರೋಧವಾಗಿ ಆಯ್ಕೆಯಾಗಿ ಅಭ್ಯರ್ಥಿಯು ಸಂಭ್ರಮಾಚಾರಣೆ ಮಾಡುತ್ತಿದ್ದಾರೆ.

ಹೌದು ಇನ್ನೂ ಗ್ರಾಮ ಪಂಚಾಯತಿ ಮತದಾನಕ್ಕೆ ಹಲವು ದಿನಗಳ ಮಾತ್ರ ಬಾಕಿ ಉಳಿದಿದ್ದು, ಗ್ರಾಮದ ವಾರ್ಡ್ ನಂಬರ ಐದರಲ್ಲಿ ಬಸವರಾಜ ಲಕ್ಕಮನವರ ಅವಿರೋಧಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಈಗ ಅವರಿಗೆ ಬಣ್ಣ ಹಚ್ಚವ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ಸಂಭ್ರಮದ ವಾತಾವರಣ ಕಳೆಗಟ್ಟಿದ್ದು ಪ್ರತಿಯೊಂದಕ್ಕೂ ಚುನಾವಣೆ ಚುನಾವಣೆ ಎನ್ನುವ ಇಂದಿನ ವ್ಯವಸ್ಥೆಯ ನಡುವೆ ವಾರ್ಡ್ 5 ಕ್ಕೇ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇನ್ನೊಬ್ಬರು ಗ್ರಾಮದ ಹಿರಿಯರು ಹೇಳಿದ ಕೂಡಲೇ ತಮ್ಮ ಉಮೇದುವಾರಿಕೆಯನ್ನು ಹಿಂದೆ ತಗೆದುಕೊಂಡರು.

ಹೀಗಾಗಿ ಒಗ್ಗಟ್ಟು ಒಂದು ಕಡೆ ಮತ್ತೊಂದೆಡೆ ಹಿರಿಯರ ಮಾರ್ಗದರ್ಶನ ಇವೆಲ್ಲದರ ನಡುವೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯತಿಗೆ ಆಯ್ಕೆಯಾಗುತ್ತಿದ್ದಂತೆ ಬಸವರಾಜ ಅವರು ಹೆತ್ತ ತಾಯಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು ಹಾಗೇ ಗ್ರಾಮದ ಎಲ್ಲಾ ದೇವಸ್ಥಾಗಳಿಗೂ ತೆರಳಿ ದೇವರ ಆಶಿರ್ವಾದ ಪಡೆದಕೊಂಡು ಗುರು ಹಿರಿಯರಿಗೆ ನಮಸ್ಕರಿಸಿದರು. ಒಟ್ಟಾರೆ ಹೆಬ್ಬಳ್ಳಿ ಗ್ರಾಮದ ವಾರ್ಡ್ 5 ರಲ್ಲಿ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿ ಪಂಚಾಯತ ಗದ್ದುಗೆ ಏರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.