ಎದುರಿಗೆ ಬಂದ ಟಾಟಾ ಎಎಸ್ ತಪ್ಪಿಸಿದ್ರು – ಬಿಆರ್ ಟಿಎಸ್ ಗೋಡೆಗೆ ಡಿಕ್ಕಿ ಹೊಡೆಯಿತು ಬಸ್ – ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದೊಡ್ಡ ಅಪಘಾತ

Suddi Sante Desk

ಧಾರವಾಡ –

ಎದುರಿಗೆ ಬಂದ ಟಾಟಾ ಎಎಸ್ ತಪ್ಪಿಸಲು ಹೋಗಿ ಬಿಆರ್ ಟಿಎಸ್ ಗೋಡೆಗೆ ಬಸ್ ವೊಂದು ಡಿಕ್ಕಿಯಾದ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ನವನಗರದ ಬಿಆರ್ ಟಿಎಸ್ ಸೇತುವೆ ಬಳಿ ಈ ಒಂದು ಅಪಘಾತವಾಗಿದೆ.

ಗಾಮನಗಟ್ಟಿಯಿಂದ ಹುಬ್ಬಳ್ಳಿಯ ಕಡೆಗೆ ಸಾರಿಗೆ ಬಸ್ ಹೊರಟಿತ್ತು. ಮುಖ್ಯರಸ್ತೆಗೆ ಬಂದು ಇನ್ನೇನು ಹುಬ್ಬಳ್ಳಿಯ ಕಡೆಗೆ ಹೊಗುವಷ್ಟರಲ್ಲಿ ಎದುರಿಗೆ ವೇಗವಾಗಿ ಟಾಟಾ ಎಎಸ್ ವೊಂದು ಬಂದಿದೆ.

ಟಾಟಾ ಎಎಸ್ ಗೆ ಡಿಕ್ಕಿಯಾಗುತ್ತದೆ ಎಂದುಕೊಂಡು ಬಸ್ ಚಾಲಕ ಆ ಒಂದು ಅಪಘಾತವನ್ನು ತಪ್ಪಿಸಿದ್ದಾರೆ. ಟಾಟಾ ಎಎಸ್ ಅಪಘಾತ ತಪ್ಪಿಸಿ ಮುಂದೆ ಎದುರಿಗೆ ಇದ್ದ ಬಿಆರ್ ಟಿಎಸ್ ಸೇತುವೆಗೆ ಡಿಕ್ಕಿಯಾಗಿದೆ ಬಸ್.

ಚಾಲಕನ ಸಮಯ ಪ್ರಜ್ಞೆಯಿಂದ ಟಾಟಾ ಎಎಸ್ ಅಪಘಾತವನ್ನು ಚಾಲಕ ತಪ್ಪಿಸಿದ್ದಾರೆ. ನಂತರ ಮುಂದೆ ಇದೇ ಬಸ್ ಸೇತುವೆಗೆ ಗೋಡೆಗೆ ಡಿಕ್ಕಿಯಾಗಿದೆ. ಟಾಟಾ ಎಎಸ್ ಚಾಲಕನ ಅಜಾಗರೂಕತೆಯಿಂದ ಈ ಒಂದು ಅಪಘಾತವಾಗಿದೆ.

ಸಧ್ಯ ಅಪಘಾತದಲ್ಲಿ ಸಾರಿಗೆ ಬಸ್ ನ ಮುಂಭಾಗ ಸ್ವಲ್ಪು ಮಟ್ಟಿಗೆ ಜಖಂ ಆಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಟಾಟಾ ಎಎಸ್ ನೊಂದಿಗೆ ಚಾಲಕ ಪರಾರಿಯಾಗಿದ್ದಾನೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದ್ದು ಬಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಯಾಣಿಕರಿದ್ದರು.

ಸಧ್ಯ ಈ ಒಂದು ಅಪಘಾತದ ವಿಷಯ ತಿಳಿದ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.