ಬೆಂಗಳೂರು – ಕರೋನ ಎರಡನೇ ಹಂತದ ವೈರಸ್ ತಡೆಗಟ್ಟುವ ಉದ್ದೇಶದಿಂದ ರಾಜ್ಯದಲ್ಲಿ ಇಂದಿನಿಂದ ಜನೇವರಿ 2 ರವರೆಗೆ ನೈಟ್ ಕರ್ಫ್ಯು ಜಾರಿ ಮಾಡಿ ಮಾರ್ಗಸೂಚಿ ಗಳನ್ನು ಹೊರಡಿಸಿದ್ದ ರಾಜ್ಯ ಸರ್ಕಾರ ಇಂದು ಏಕಾ ಏಕಿ ಕರ್ಫ್ಯು ಆದೇಶವನ್ನು ವಾಪಸ್ ಪಡೆದಿದೆ.ನಿನ್ನೆ ಯಿಂದ ರಾಜ್ಯದಲ್ಲಿ ನೈಟ್ ಕರ್ಫ್ಯು ಮಾಡಲು ಮುಂದಾಗಿ ಮತ್ತೆ ಸಾರ್ವಜನಿಕರ ಹಿತದೃಷ್ಟಿಯಿಂದ ರದ್ದು ಮಾಡಿ ಇವತ್ತು ರಾತ್ರಿಯಿಂದ ಜಾರಿ ಮಾಡಲು ಮುಂದಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಯಿತು. ಇವೆಲ್ಲದರ ನಡುವೆ ಈಗ ರಾತ್ರಿ ಕರ್ಪ್ಯೂ ವನ್ನು ಹಿಂದೆ ಪಡೆದಿದೆ.
ಸರ್ಕಾರ ನೈಟ್ ಕರ್ಫ್ಯು ಆದೇಶ ಹೊರಡಿಸಿದ ಮೇಲೆ ಅನೇಕ ಟೀಕೆ ಟಿಪ್ಪಣಿ ಗಳು ಎದುರಾದ ಹಿನ್ನಲೆಯಲ್ಲಿ ಸರ್ಕಾರ ರಾತ್ರಿ ಕರ್ಫ್ಯು ರದ್ದು ಮಾಡಿದೆ.