ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ ತೆರೆ ಮರೆಯಲ್ಲಿ ಸಮಿತಿ ರಚನೆಗೆ ಸಿದ್ದತೆ ಮಾಡಿದ್ದು ಸಮಿತಿ ರಚನೆಗೊಂಡ ನಂತರ ಒಂದೆ ರೆಡು ತಿಂಗಳಲ್ಲಿ ವರದಿ ಸಲ್ಲಿಕೆಯಾಗಲಿದ್ದು ನಂತರ ಅಧಿಕೃತವಾದ ಆದೇಶವು ಹೊರಬೀಳ ಲಿದ್ದು ಇನ್ನೂ ಈ ಒಂದು ಹೊಸ ವೇತನ ರಚನೆ ಯಿಂದಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಹೆಚ್ಚಳವಾಗಲಿದೆ.
ಹೌದು ಅಂದಾಜು ಎಷ್ಟು ಪ್ರಮಾಣ ಹೆಚ್ಚಳ ವಾಗಲಿದೆ ಎಷ್ಟು ಹೆಚ್ಚಿಗೆ ಆಗಲಿದೆ ಈ ಕುರಿತಂತೆ ನೊಡೋದಾದರೆ ಶೇ.27.25ರಷ್ಟು ವಿಶೇಷ ಭತ್ಯೆಯನ್ನು(ಡಿಎ) ಮೂಲ ವೇತನದಲ್ಲಿ ವಿಲೀನ ಗೊಳಿಸುವಂತೆ ಸರಕಾರಿ ನೌಕರರ ಸಂಘ ಬೇಡಿಕೆ ಇಟ್ಟಿದೆ
ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ನೌಕರರ ಮೂಲ ವೇತನದಲ್ಲಿ ಗಣನೀಯ ಹೆಚ್ಚಳದ ಜತೆಗೆ ಭವಿಷ್ಯ ನಿಧಿ ಸೇರಿದಂತೆ ಇತರ ಸೌಲಭ್ಯಗಳಲ್ಲೂ ಹೆಚ್ಚಿನ ಅನುಕೂಲ ದೊರಕಲಿವೆ.
ಮೂಲ ವೇತನ ಡಿಎ ವಿಲೀನವಾದಾಗ
17,000 ರೂ. 21,000 ರೂ.
25,200 ರೂ. 32,067 ರೂ.
30,000 ರೂ. 38,175 ರೂ.
36,000 ರೂ. 45,810 ರೂ.
40,750 ರೂ. 51,854 ರೂ.
1,02,100 ರೂ. 1,29,922 ರೂ.
ವೇತನ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗಾಗಲೇ ಭರವಸೆಯನ್ನು ನೀಡಿದ್ದಾರೆ.ಅದರಂತೆ ಅವರು ಕ್ರಮ ಕೈಗೊಳ್ಳುವ ಪೂರ್ಣ ವಿಶ್ವಾಸ ಮತ್ತು ನಂಬಿಕೆಯನ್ನು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ ಎಸ್ ಷಡಾಕ್ಷರಿ ಸೇರಿದಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬಳಗವು ಹೊಂದಿದ್ದು ಇದರೊಂದಿಗೆ ದಸರಾ ಸಂದರ್ಭದಲ್ಲಿ ಸರಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಲು ಉದ್ದೇಶಿಸಿರುವ ರಾಜ್ಯ ಸರಕಾ ರವು ವೇತನ ಪರಿಷ್ಕರಣೆ ಸಂಬಂಧ ಸಮಿತಿ ರಚಿಸಲು ತಯಾರಿ ಮಾಡಿಕೊಳ್ಳುತ್ತಿದೆ.
ಈ ಸಮಿತಿ ಸಲ್ಲಿಸುವ ವರದಿ ಆಧರಿಸಿ ಹೊಸ ವರ್ಷಾರಂಭದಲ್ಲಿ ನೌಕರರ ವೇತನದಲ್ಲಿ ಏರಿಕೆ ಯಾಗುವ ನಿರೀಕ್ಷೆಯಿದೆ.ಅದರೊಂದಿಗೆ ಚುನಾವಣೆ ವರ್ಷದಲ್ಲಿ ನೌಕರ ವರ್ಗಕ್ಕೆ ಸರಕಾರದ ಕಡೆಯಿಂದ ಭರ್ಜರಿ ಗಿಫ್ಟ್ ದೊರಕಿದಂತಾಗಲಿದೆ.
ರಾಜ್ಯದಲ್ಲಿ ಸದ್ಯಕ್ಕೆ ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸರಕಾರಿ ನೌಕರರಿಗೆ ಸಂಬಳ ನೀಡಲಾಗುತ್ತಿದೆ.ಆರನೇ ವೇತನ ಆಯೋಗದ ಶಿಫಾರಸು 2018ರ ಏಪ್ರಿಲ್‌ನಿಂದ ಜಾರಿಗೆ ಬಂದಿದೆ. ಅದಾದ ಬಳಿಕ ಏಳನೇ ವೇತನ ಆಯೋಗ ರಚನೆ ಬೇಡಿಕೆ ಸೇರಿದಂತೆ ಕೇಂದ್ರ ಸರಕಾರದ ನೌಕರರಿಗೆ ಸಮನಾದ ವೇತನ ಮತ್ತು ಭತ್ಯೆ ನೀಡುವಂತೆ ರಾಜ್ಯ ಸರಕಾರಿ ನೌಕರರ ಸಂಘ ಮನವಿ ಮಾಡಿಕೊಂಡಿದೆ.