ಶಿರಸಿ –
ಸರ್ಕಾರಗಳಿಗೆ ಯಾವಾಗ ಕರ್ಫ್ಯೂ ಹಾಕಬೇಕು ಅನ್ನೋದೇ ಗೊತ್ತಿಲ್ಲ. ಇದೊಂದು ಸರ್ಕಾರದ ದೊಡ್ಡ ತಪ್ಪು ನಿರ್ಧಾರ ಎಂದು ಮಾಜಿ ಸಚಿವ ಮತ್ತು ಯಲ್ಲಾಪೂರ ಚುನಾವಣೆಯ ಉಸ್ತುವಾರಿಯನ್ನು ಹೊತ್ತುಕೊಂಡಿರುವ ಸಂತೋಷ ಲಾಡ್ ಹೇಳಿದರು. ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಶಿರಸಿಯಲ್ಲಿ ಮಾತನಾಡಿದ ಏಕೆ ಹೀಗೆ ಮಾಡಿದ್ರು ಅನ್ನೋದು ಗೊತ್ತಿಲ್ಲ. ಆದ್ರೆ ಖಂಡಿತವಾಗಿ ಇದು ಸರ್ಕಾರ ಗೊಂದಲ ಮಾಡಿಕೊಂಡಿದೆ ಅನ್ನೋದು ಕಾಣುತ್ತಿದೆ ಅಂತಾ ಹೇಳಿದರು.
ಶಿರಸಿಯ ಪಂಚವಟಿಯ ಹಾಲ್ ನಲ್ಲಿ ಮಾತನಾಡಿದ ಸಂತೋಷ್ ಲಾಡ್ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಹೆಬ್ಬಾರ್, ಬಿಜೆಪಿ ಸೇರಿದ್ರು. ನಂತರ ನಡೆದ ಉಪಚುನಾವಣೆಯಲ್ಲಿ ಸರ್ಕಾರದ ಎಲ್ಲಾ ಸಚಿವರು ಬಂದು 25-30 ಕೋಟಿ ಖರ್ಚು ಮಾಡಿ ಗೆದ್ದಿದ್ದಾರೆ. ಅದಾದ ನಂತರ ನಮ್ಮ ಪಕ್ಷದ ಬಹಳಷ್ಟು ಮುಖಂಡರು ಅವರ ಜೊತೆ ಹೋದ್ರೂ ಕೂಡ ಪಕ್ಷವನ್ನ ಸ್ಥಳೀಯ ಮುಖಂಡರು ಪಕ್ಷ ಸಂಘಟನೆ ಮಾಡಿದ್ದಾರೆ ಎಂದ್ರು. ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಚುನಾವಣೆಗೆ ನಿಲ್ಬೇಕಾಗುತ್ತೆ. ಆದ್ರೆ ನನ್ನ ಮೊದಲ ಆಯ್ಕೆ ಕಲಘಟಗಿನೇ ಆಗಿದೆ. ಕುಮಾರಸ್ವಾಮಿಯವರಿಗೆ ನಾನು ತುಂಬಾ ಆತ್ಮೀಯ. ಈಗಿನ ರಾಜಕೀಯ ಹೇಳಿಕೆಗಳಿಗೆ ಕುಮಾರಸ್ವಾಮಿಯವರೇ ಉತ್ತರಿಸಬೇಕೆಂದರು.
ದೇವೇಗೌಡರು ಪ್ರಧಾನಿಯಾಗೋಕೆ ಕಾಂಗ್ರೆಸ್ ಕಾರಣ. ಕುಮಾರಸ್ವಾಮಿ 2 ಸಲ ಮುಖ್ಯಮಂತ್ರಿಯಾಗೋಕೂ ಕೂಡ ಕಾಂಗ್ರೆಸ್ ಕಾರಣವಾಗಿತ್ತು ಅಂದ್ರು. ನನ್ನನ್ನು ಯಾರೂ ಸೈಡ್ ಲೈನ್ ಮಾಡಿಲ್ಲ. ಸೈಲೆಂಟ್ ಆಗಿರೋದು ನಿಜ. ನಾನು ಸಣ್ಣ ವಯಸ್ಸಿನಲ್ಲೇ ರಾಜಕೀಯಕ್ಕೆ ಬಂದವನು. ಸುದೀರ್ಘ ರಾಜಕೀಯ ಜೀವನದ ನಡುವೆ ಹಿಂದಿನ ಚುನಾವಣೆಯ ಸೋಲಿನಿಂದ ನನಗೆ ನೋವಾಗಿರೋದು ನಿಜ. ಅದಕ್ಕೋಸ್ಕರ 2 ವರ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ ಅಂದ್ರು.ಇನ್ನು ವಿಜಯನಗರ ಜಿಲ್ಲೆ ಮಾಡಿರೋದು ನನಗೆ ಸಂತಸ ತಂದಿದೆ. ಭೂ ವಿಸ್ತಾರ ಇದ್ದಾಗ ಜಿಲ್ಲೆ ಆಗ್ಲೇಬೇಕು. ಆದ್ರೆ ಎಲ್ಲಿ ಮಾಡ್ಬೇಕು ಅನ್ನೋದನ್ನ ಸರ್ಕಾರ ಸ್ವಲ್ಪ ಗಮನ ತೆಗೆದುಕೊಂಡು ಮಾಡ್ಬೇಕು. ಇನ್ನೊಂದು ತಾಲೂಕನ್ನು ಗುರುತಿಸಿಕೊಡೋಕೆ ಆಗಲ್ಲ. ಅದು ತಪ್ಪಾಗುತ್ತೆ. ಆದ್ರೆ ಆನಂದ್ ಸಿಂಗ್ ಮಾಡಿರೋದು ಖುಷಿ ಇದೆ ಅಂದ್ರು.