ರಾಜಸ್ಥಾನ-
ಪ್ರತಿ ವರುಷದಂತೆ ಈವರುಷವೂ ಕೂಡಾ ದೇಶದ ಪ್ರಧಾನಿ ನರೇಂದ್ರ ಮೋದಿ ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದ ಯೋಧರೊಂದಿಗೆ ಆಚರಣೆ ಮಾಡಿದರು.
ಈ ಬಾರಿಯೂ ಭಾರತೀಯ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ದೇಶದ ರಕ್ಷೆಣೆಯಲ್ಲಿರುವ ಯೋಧರಿಗೆ ಆತ್ಮಸ್ಥೈರ್ಯವನ್ನು ತುಂಬಿದರು .
ದೀಪಾವಳಿ ಆಚರಿಸಲು ರಾಜಸ್ಥಾನದ ಜೈಸಲ್‌ಮೇರ್‌ಗೆ ತೆರಳಿದ ಪ್ರಧಾನಿ ಯೋಧರೊಂದಿಗೆ ಹಬ್ಬವನ್ನು ಆಚರಣೆ ಮಾಡಿದರು,ಸೈನಿಕರ ಸಮವಸ್ತ್ರದಲ್ಲಿ ಆಗಮಿಸಿದ ಮೋದಿ ಯೋಧರೊಂದಿಗೆ ಯೋಧರಾಗಿ ಕೆಲ ಸಮಯ ಕಳೆದು ದೀಪಾವಳೆಯನ್ನು ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು 2014 ರಲ್ಲಿ ದೀಪಾವಳಿಯ ಸಿಯಾಚಿನಗೆ ಹೋದಾಗ, ಕೆಲವರು ಆಶ್ಚರ್ಯಗೋಳಗಾಗಿದ್ದರು . ನಾನು ನನ್ನ ಜನರ ನಡುವೆ ಬರುತ್ತೇನೆ, ನನ್ನ ಜನರನ್ನು ಬಿಟ್ಟು ನಾನೆಲ್ಲಿ ಹೋಗಲಿ ? ನೀವು ಹಿಮಭರಿತ ಬೆಟ್ಟಗಳಲ್ಲಿ ಅಥವಾ ಮರುಭೂಮಿಯಲ್ಲಿ ವಾಸಿಸುತ್ತಿರಲಿ, ನನ್ನ ದೀಪಾವಳಿ ನಿಮ್ಮ ನಡುವೆ ಬರುವ ಮೂಲಕ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ಇನ್ನೂ ಪರಿಸ್ಥಿತಿ ಏನೇ ಇರಲಿ, ನಿಮ್ಮ ಶಕ್ತಿ ಮತ್ತು ಶೌರ್ಯವನ್ನು ಎಲ್ಲಿಯೂ ಹೋಲಿಸಲಾಗದು. 130 ಕೋಟಿ ದೇಶವಾಸಿಗಳು ನಿಮ್ಮ ಶೌರ್ಯಕ್ಕೆ ತಲೆಬಾಗುತ್ತಾ ನಿಮ್ಮೊಂದಿಗೆ ದೃಡ ವಾಗಿ ನಿಂತಿದ್ದಾರೆ. ನಿಮ್ಮ ಶೌರ್ಯದ ಬಗ್ಗೆ ಹೆಮ್ಮೆ ಪಡುತ್ತಾರೆ. ವಿಶ್ವದ ಯಾವುದೇ ಶಕ್ತಿಯು ನಮ್ಮ ಧೈರ್ಯಶಾಲಿ ಸೈನಿಕರ ದೇಶದ ಗಡಿ ರಕ್ಷಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೆಮ್ಮೆ ಪಟ್ಟರು . ಇನ್ನೂ ಗಡಿಯಲ್ಲಿ ನೀವು ಮಾಡುವ ತ್ಯಾಗ, ತಪಸ್ಸು ದೇಶದ ಜನರಲ್ಲಿ ನಂಬಿಕೆ ಹುಟ್ಟುಹಾಕುತ್ತದೆ.ಮಿಲಿಟರಿ ಕೌಶಲ್ಯದ ಇತಿಹಾಸವನ್ನು ತೆಗೆದು ಓದಿದಾಗಲೆಲ್ಲಾ ಲಾಂಗ್‌ವಾಲಾ ಕದನ ನೆನಪಾಗುತ್ತದೆ ಇಂದಿಗೂ ಪ್ರತಿಯೊಬ್ಬ ಭಾರತೀಯರ ಹೃದಯವನ್ನು ತುಂಬುತ್ತದೆ ಎಂದು ನೆನೆದರು.
ಪ್ರತಿ ಬಾರಿಯೂ, ಪ್ರತಿ ಹಬ್ಬದಲ್ಲೂ, ನಾನು ನಿಮ್ಮ ನಡುವೆ ಬಂದಾಗಲೆಲ್ಲಾ, ನಾನು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ,ನಿಮ್ಮ ಸಂತೋಷ ಮತ್ತು ದುಃಖದಲ್ಲಿ ನಾನು ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ಸಾಮರ್ಥ್ಯವು ವಿಜಯದ ನಂಬಿಕೆ, ದಕ್ಷತೆಯು ಶಾಂತಿಯ ಬಹುಮಾನವಾಗಿದೆ. ಭಾರತ ಇಂದು ಸುರಕ್ಷಿತವಾಗಿದೆ, ಏಕೆಂದರೆ ಭಾರತಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿ ಇದೆ. ಎಂದು ಪ್ರಧಾನಿ ಮೋದಿಯವರು ಭಾರತದ ಘನತೆಯನ್ನು ಕುರಿತು ಸೈನಿಕರಿಗೆ ಹೇಳಿದರು.
ಇನ್ನೂ ಈ ಒಂದು ವಿಶೇಷವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ
ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ , ಬಿಎಸ್‌ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೇ ರಾಜಸ್ಥಾನದ ಬಿಜೆಪಿ ಪಕ್ಷದ ಹಿರಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.