ಬೆಂಗಳೂರು –
ಹೌದು ಆರ್ ಟಿಇ ಶುಲ್ಕಕ್ಕೆ ಶಿಕ್ಷಣ ಇಲಾಖೆ ಹೊಸದೊಂದು ಯೋಜನೆಯನ್ನು ರೂಪಿಸಿದ್ದು ಮರು ಪಾವತಿಗೆ ಪ್ಲಾನ್ ಮಾಡಿದ್ದು ಪಾವತಿಗೆ ಕ್ರಿಯಾ ಯೋಜನೆ ಸಿದ್ದಗೊಂಡಿದ್ದು ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ.2019-20ನೇ ಸಾಲಿ ನಿಂದ 2021-22ನೇ ಸಾಲಿನ ಆರ್‌ಟಿಇ ಶುಲ್ಕ ಮರುಪಾವತಿ ಬಾಕಿ ಇರುವ ಶಾಲೆಗಳಿಗೆ ಏಕ ರೂಪದಲ್ಲಿ ತ್ವರಿತವಾಗಿ ಶುಲ್ಕ ಪಾವತಿಸಲು ಶಿಕ್ಷಣ ಇಲಾಖೆಯು ವಿಶೇಷ ಕಾಲಮಿತಿ ಕ್ರಿಯಾ ಯೋಜನೆ 2022 ರೂಪಿಸಿದೆ.
ಇದಕ್ಕಾಗಿ ತಂತ್ರಾಂಶ ಬಿಡುಗಡೆ ಮಾಡಿದ್ದು ಅ.31ರೊಳಗೆ ಅರ್ಜಿ ಸಲ್ಲಿಸಲು ಖಾಸಗಿ ಶಾಲೆಗಳಿಗೆ ಸೂಚಿಸಿದೆ.ಕಳೆದ ಮೂರು ವರ್ಷ ಗಳಲ್ಲಿ ಆಯಾ ಶೈಕ್ಷಣಿಕ ವರ್ಷಗಳಲ್ಲಿಯೇ ತಂತ್ರಾಂಶವನ್ನು ಬಿಡುಗಡೆ ಮಾಡಿ ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿತ್ತು ಪ್ರಸ್ತುತ 2022-23ನೇ ಶೈಕ್ಷಣಿಕ ವರ್ಷ ನಡೆಯುತ್ತಿದ್ದು ಶುಲ್ಕ ಮರುಪಾವತಿ ಪ್ರಕ್ರಿಯೆಯು ಆಯುಕ್ತರು ಡಿಡಿಪಿಐ ಮತ್ತು ಬಿಇಒಗಳ ಹಂತದಲ್ಲಿ ನಡೆ ಯುತ್ತಿದೆ.
ಹೀಗಾಗಿ ಪ್ರಕ್ರಿಯೆ ಕುಂಠಿತವಾಗಿದೆ ಬಾಕಿ ಇರುವ ಶುಲ್ಕವನ್ನು ಮಂಜೂರು ಮಾಡುವುದಕ್ಕಾಗಿ ವಿಶೇಷ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಪ್ರಾಥಮಿಕ ಶಾಲಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.