ಚಿತ್ರದುರ್ಗ –
ಪುಣ್ಯಕೋಟಿ ಯೋಜನೆಯ ಆರಂಭದ ಬೆನ್ನಲ್ಲೇ ರಾಜ್ಯದಲ್ಲಿ ಈ ಒಂದು ಯೋಜನೆಗೆ ಸರ್ಕಾರದ ಹಣ ನೀಡುವುದಕ್ಕೆ NPS ಸಂಘದ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸರ್ಕಾರಿ ನೌಕರರ ಪ್ರಮುಖ ಬೇಡಿಕೆ NPS ರದ್ದುಪಡಿಸಿ ಹಳೆಯ ಪಿಂಚಣಿ (OPS) ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡರೆ ಒಂದು ತಿಂಗಳ ವೇತನ ಪುಣ್ಯ ಕೋಟಿ ಯೋಜನೆಗೆ ನೀಡಲು ಸಿದ್ದರಿದ್ದೇವೆ ಎಂದು NPS ನೌಕರರ ಸಂಘದ ಅಧ್ಯಕ್ಷ ಡಾ.ಎಸ್.ಆರ್.ಲೇಪಾಕ್ಷ ತಿಳಿಸಿದ್ದಾರೆ
ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನದಲ್ಲಿ ಎ ಗುಂಪಿನ ಅಧಿಕಾರಿಗಳು.11000, ಬಿ ಗುಂಪಿನ ಅಧಿಕಾರಿ,4000 ಹಾಗೂ ಸಿ ವೃಂದದ ಅಧಿಕಾರಿಗಳು 400 ನೌಕರರ ವೇತನದಲ್ಲಿ ಕಟಾವು ಮಾಡಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ.
ಆದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದೇಶ ಹಾಗೂ ರಾಜ್ಯದ ಜನತೆ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಬಾರಿ ತಮ್ಮ ವೇತನದಲ್ಲಿ ಹಣವನ್ನು ಸರ್ಕಾರಕ್ಕೆ ನೀಡಿದ್ದಾರೆ ಈಗಾಗಲೇ NPS ನೌಕರರ ಕಟಾವಿನ ಹಣ ಬಿಟ್ಟು ಸರ್ಕಾರದ ವಂತಿಗೆ 2500 ಕೋಟಿಗೂ ಅಧಿಕ ಹಣ ಸರ್ಕಾ ರಕ್ಕೆ ಬಿಟ್ಟುಕೊಡಲು ಸಿದ್ದರಿದ್ದಾರೆ.ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಲಿ.ಈಗಾಗಲೇ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ NPS ನೌಕರರು ಯಾವುದೇ ಕಾರಣಕ್ಕೂ ಹಣ ಕಟಾವು ಮಾಡು ವುದಕ್ಕೆ ಅವಕಾಶ ನೀಡುವುದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಈಗಾಗಲೇ ರಾಜ್ಯದ ನೌಕರರು ಮುಂದಾಗಿ ಹೋರಾಟವನ್ನು ಮಾಡುತ್ತಿದ್ದಾರೆ ಎಂದರು.