ಧಾರವಾಡ –
ಒಂದು ದೇಶ ಒಂದು ಚುನಾವಣೆ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆನ್ ಲೈನ್ ಮೂಲಕ ನಡೆಯಿತು.ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಅವರು ಈ ಒಂದು ವಿಷಯ ಕುರಿತು ಮಾತನಾಡಿದರು.

ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾಗಿ ವಿಷಯ ಕುರಿತು ಬೆಳಕು ಚೆಲ್ಲಿ ಹೊಸ ಚಿಂತನೆಗೆ ಹಚ್ಚಿದರು.ಆನ್ ಲೈನ್ ಮೂಲಕ ನಡೆದ ಈ ಒಂದು ಕಾರ್ಯಕ್ರಮವನ್ನು ಬಿಜೆಪಿ ನಾಯಕರು ವೀಕ್ಷಣೆ ಮಾಡಿದರು.

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ್ ದೇಸಾಯಿ ಅವರ ಉಪಸ್ಥಿತಿಯಲ್ಲಿ ಅವರ ಗೃಹ ಕಚೇರಿಯಲ್ಲಿ ವೀಕ್ಷಿಸಲಾಯಿತು.

ಧಾರವಾಡದ ಗೃಹ ಕಚೇರಿಯಲ್ಲಿ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷ ಕಿರಣ ಉಪ್ಪಾರ್ ಮಂಡಳದ ಅಧ್ಯಕ್ಷರಾದ ಶಕ್ತಿ ಹಿರೇಮಠ.ವಿನಾಯಕ ಗೊಂದಳಿ,ಹಾಶಮ ಮಿರಜಕರ,ಪ್ರಕಾಶ ಇಂಗಳೆ,ಸೇರಿದಂತೆ ಯುವಮೋರ್ಚಾದ ಎಲ್ಲಾ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವರೊಂದಿಗೆ ಶಾಸಕರು ಉಪನ್ಯಾಸವನ್ನು ವೀಕ್ಷಣೆ ಮಾಡಿದರು.
