This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

ಅಕ್ಟೋಬರ್ ತಿಂಗಳಿನೊಂದಿಗೆ ದೀಪಾವಳಿ ಮುಗಿಯುತ್ತಾ ಬಂತು ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಮಾಡಿ ಮಧ್ಯಂತರ ಪರಿಹಾರ ಘೋಷಣೆಯ ಆದೇಶ ಹೊರಡಿಸಿ – ಷಡಾಕ್ಷರಿ ಅವರಿಗೆ ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗ ಒತ್ತಾಯ

ಅಕ್ಟೋಬರ್ ತಿಂಗಳಿನೊಂದಿಗೆ ದೀಪಾವಳಿ ಮುಗಿಯುತ್ತಾ ಬಂತು ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಮಾಡಿ ಮಧ್ಯಂತರ ಪರಿಹಾರ ಘೋಷಣೆಯ ಆದೇಶ ಹೊರಡಿಸಿ – ಷಡಾಕ್ಷರಿ ಅವರಿಗೆ ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗ ಒತ್ತಾಯ
WhatsApp Group Join Now
Telegram Group Join Now

ಬೆಂಗಳೂರು

 

ಹೌದು ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚಿಸಿ ಹಾಗೂ ಮಧ್ಯಂತರ ಪರಿಹಾರ ಘೋಷಣೆ ಮಾಡಿಸುವ ವಿಚಾರ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಅಕ್ಟೋಬರ್ ತಿಂಗಳ ಒಳಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿಯ ವೇತನ ನೀಡುವ ಕುರಿತಂತೆ ಸಮಿತಿಯೊಂದನ್ನು ರಚನೆ ಮಾಡೊದಾಗಿ ಹೇಳಿದ್ದರು.

ಸಧ್ಯ ಇನ್ನೇನು ಎರಡು ಮೂರು ದಿನಗಳಾದರೆ ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂತು ಇನ್ನೂ ದೀಪಾವಳಿ ಹಬ್ಬವೂ ಕೂಡಾ ಮುಗಿ ಯಿತು ಇನ್ನೂ ಯಾವಾಗ ರಚನೆ ಮಾಡುತ್ತಾರೆ ಈ ಕುರಿತಂತೆ ಮತ್ತೆ ರಾಜ್ಯದ ಮುಖ್ಯಮಂತ್ರಿ ಅವರಿಗೆ ಒತ್ತಾಯವನ್ನು ಮಾಡುವಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ರಾಜ್ಯದ ಷಡಾಕ್ಷರಿ ಸರ್ ಅಭಿಮಾನಿ ಬಳಗದ ಸರ್ವ ಸದಸ್ಯರು ಒತ್ತಾಯವನ್ನು ಮಾಡಿದ್ದಾರೆ.

 

 

ದೀಪಾವಳಿ ಹಬ್ಬದ ಕೊಡುಗೆಯಾಗಿ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಮಾಡಿಸಿ ಈ ಕೂಡಲೇ ಮಧ್ಯಂತರ ಪರಿಹಾರ ಘೋಷಣೆ ಮಾಡಿಸಿ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗ ಮಂಜೂರು ಮಾಡಿಸಲು ಷಡಾಕ್ಷರಿ ಸರ್ ಅಭಿ ಮಾನಿಗಳ ಬಳಗದ ರಾಜ್ಯ ಗೌರವ ಸಂಚಾಲಕ ರಾದ ಹೆಚ್ ಗಿರಿಗೌಡ ಹಾಗೂ ರಾಜ್ಯ ಸಂಚಾಲಕ ರಾದ ಬೂದನೂರು ಮಹೇಶ ಮಂಡ್ಯ ಮತ್ತು ಸರ್ವ ಸದಸ್ಯರ ಪರವಾಗಿ ಒತ್ತಾಯವನ್ನು ಮಾಡಿದ್ದಾರೆ.

ಹೌದು ಈ ಒಂದು ವಿಚಾರವನ್ನು ಮಾತುಗಳನ್ನು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಸರ್ ಅವರು ಹೇಳಿದ್ದರು ಅದು ಒಂದು ಎರಡು ಮೂರು ನಾಲ್ಕು ಅಲ್ಲ ಸಾಕಷ್ಟು ಸಲ ಇದನ್ನು ಹೇಳಿದ್ದರು.ಹೇಳಿದಂತೆ ಯಾವಾಗಲೂ ಅವರು ನಡೆದುಕೊಂಡಿದ್ದಾರೆ. ಆದರೆ ಸಧ್ಯ ಈ ಒಂದು ವಿಚಾರದಲ್ಲೂ ಕೂಡಾ ಇದು ಆಗುತ್ತದೆ ಎಂಬ ವಿಶ್ವಾಸದಲ್ಲಿ ಈಗಲೂ ರಾಜ್ಯದ ಸರ್ಕಾರಿ ನೌಕರರಿದ್ದಾರೆ.ಅದು ಅಕ್ಟೋಬರ್ ತಿಂಗಳು ಮುಗಿಯೊದರಳಗಾಗಿ ಆದರೆ ನಿಜವಾಗಿಯೂ ಷಡಾಕ್ಷರಿ ಅವರು ತಾವು ಹೇಳಿದ ಮಾತಿನಂತೆ ನಡೆದುಕೊಂಡರು ಎಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬಳಗದವರು ಮತ್ತೆ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ

ಇದು ಅಕ್ಟೋಬರ್ ತಿಂಗಳ ಮುಕ್ತಾಯ ಆಗುವು ದರ ಒಳಗಾಗಿ ಆಗಲಿ.ರಾಜ್ಯದ ಸರ್ಕಾರಿ ನೌಕರ ರಿಗೆ ಕೇಂದ್ರ ಸರ್ಕಾರ ಮಾದರಿಯಲ್ಲಿನ 7ನೇ ವೇತನ ನೀಡುವ ವಿಚಾರದಲ್ಲಿ ಸಮಿತಿ ರಚನೆ ಮಾಡುವ ಕುರಿತಂತೆ ಆಗಸ್ಟ್ ತಿಂಗಳಿನಲ್ಲಿಯೆ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಸರ್ ಅವರು ಹೇಳಿದ್ದರು ಇದರ ನಡುವೆ ಬೆಂಗಳೂರು ಮಹಾನಗರ ಪಾಲಿಕೆಗೆ ಈಗಾಗಲೇ ಎಲ್ಲಾ ಸಿದ್ದತೆಗಳಾಗಿದ್ದು ಯಾವ ಸಮಯದಲ್ಲಿ ಚುನಾವಣೆ ಘೋಷಣೆ ಯಾಗಲಿದೆ ಎಂಬುವುದೇ ದೊಡ್ಡ ಆತಂಕವಾ ಗಿದ್ದು ಇದರ ಬೆನ್ನಲ್ಲೆ ಮತ್ತೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯ ಲಿದ್ದು ಈ ಒಂದು ಚುನಾವಣೆ ಘೋಷಣೆಯಾ ದರೆ ನೀತಿ ಸಂಹಿತಿ ಜಾರಿಗೆ ಬರುತ್ತದೆ.

ಇನ್ನೂ ಈ ಒಂದು ಚುನಾವಣೆ ಘೋಷಣೆಯಾ ದರೆ ಇನ್ನೇನು ಮಾಡಲು ಬರೊದಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ವೇತನ ಆಯೋಗಕ್ಕೆ ಸಮಿತಿ ರಚನೆ ವಿಳಂಬವಾಗುತ್ತದೆ ಇದರ ನಡುವೆ ನೀವೆ ಹೇಳಿದಂತೆ.ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂತು ಆದರೂ ಕೂಡಾ ಈವರೆಗೆ ಸಮಿತಿ ರಚನೆ ಕುರಿತಂತೆ  ಬೆಳವಣಿಗೆ ಗಳು ಕಂಡು ಬರುತ್ತಿಲ್ಲ.ದಿನಾಂಕ -14-10-2022 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ರಾಜ್ಯಾಧ್ಯಕ್ಷರಾದ  ತಾವು ಹಾಗೂ ತಮ್ಮ ತಂಡದ ಸರ್ವ ಸದಸ್ಯರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಸಂಘದ ಅಧ್ಯಕ್ಷರು ಸನ್ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಪುಣ್ಯಕೋಟಿ ದತ್ತು ಯೋಜನೆಗೆ ಸುಮಾರು 100 ಕೋಟಿಗಳ  ಸರ್ಕಾರಿ ನೌಕರರ ದೇಣಿಗೆಯನ್ನು ನೀಡುವ ಒಪ್ಪಿಗೆ ಪತ್ರವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿರುತ್ತೀರಿ.

ಹಾಗೂ ದಿನಾಂಕ-06-09-2022ರಂದು ವಿಧಾನ ಸೌಧದ ಬ್ಯಾಕ್ಟೆಂಟ್ ಹಾಲ್ ನಲ್ಲಿ ನಡೆದ ಸಕಾ೯ರಿ ನೌಕರರಿಗೆ ಸರ್ವತ್ತೋಮ ಸೇವಾ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಅಕ್ಟೋಬರ್  ತಿಂಗಳಿನಲ್ಲಿ ಸರ್ಕಾರಿ ನೌಕರರಿಗಾಗಿ ವೇತನ ಆಯೋಗ ರಚಿಸುವ ಭರವಸೆ ನೀಡಿದ್ದರು

ದಿನಾಂಕ. 14-10- 2022 ರಂದು ತಾವು ಮುಖ್ಯಮಂತ್ರಿಗಳನ್ನು ತಾವು ಮತ್ತು ತಂಡದ ಸದಸ್ಯರು ಪುಣ್ಯಕೋಟಿ ಯೋಜನೆಗೆ ದೇಣಿಗೆ ನೀಡುವ ಒಪ್ಪಿಗೆ ಪತ್ರ ನೀಡುವ ಸಂದರ್ಭದಲ್ಲಿ ಭೇಟಿ ಮಾಡಿದಾಗ ಅಕ್ಟೋಬರ್ ತಿಂಗಳಲ್ಲೆ ವೇತನ ಆಯೋಗ ರಚಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದರು.ಭಾರತ ದೇಶದ ಹಲವಾರು ರಾಜ್ಯಗಳು ಈಗಾಗಲೇ ತನ್ನ ರಾಜ್ಯದ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆ ಯಾಗಿ ಹಲವಾರು ಸೌಲಭ್ಯಗಳನ್ನು ಘೋಷಣೆ ಮಾಡುತ್ತಿವೆ. ಆದರೆ ನಮ್ಮ ರಾಜ್ಯದಲ್ಲಿ ಇನ್ನೂ ಆ ಘೋಷಣೆಗಳು ಆಗಿಲ್ಲ.ಕೋರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ನಿರ್ವಸಿದ್ದಾರೆ. ಹಲವಾರು ಸಕಾ೯ರಿ ನೌಕರರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ.

ದಿನನಿತ್ಯ ಎಲ್ಲ ಜೀವನ ಅವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿದೆ. ಮನೆ ಬಾಡಿಗೆ ವಿದ್ಯುತ್ ಬಿಲ್, ಹಾಲಿನ ದರ, ಅಡುಗೆ ಎಣ್ಣೆ ಪೆಟ್ರೊಲ್ ಡಿಸೇಲ್ ಇತ್ಯಾದಿ.ಕುಟುಂಬ ಸದಸ್ಯರ ಅನಾರೋಗ್ಯದಿಂದ ಹೀಗೆ ಖರ್ಚು-ವೆಚ್ಚಗಳು ಹೆಚ್ಚಾಗಿವೆ ತಾವು ವಿಳಂಭ ಮಾಡಿದಷ್ಟು ಸರ್ಕಾರಿ ನೌಕರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ.ಹೀಗಾಗಿ ಈಗಾಗಲೇ ಅಸಮಾಧಾನಗೊಂಡಿರುವ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತಷ್ಟು ಈ ಒಂದು ವಿಳಂಬದ ವಾತಾವರಣ ತುಂಬಾ ಬೇಸರವನ್ನುಂಟು ಮಾಡುತ್ತಿದ್ದು ಈ ಕೂಡಲೇ ಈಗಾಗಲೇ ಈ ಒಂದು ವಿಚಾರ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ವೇತನ ಆಯೋಗ ರಚನೆ ಮಾಡಿಸಿ ಹಾಗೂ ಮಧ್ಯಂತರ ಪರಿಹಾರ (IR) ಘೋಷಣೆ ಮಾಡಿಸಬೇಕೆಂದು ಈ ಮೂಲಕ ತಮ್ಮ ಅಭಿಮಾನಿಗಳ ಬಳಗದ ಸರ್ವ ಸದಸ್ಯರು ಹಾಗೂ ಸಮಸ್ತ ಕನಾಟಕ ರಾಜ್ಯ ಸರ್ಕಾರಿ ನೌಕರರು ಕೇಳಿಕೊಂಡಿದ್ದಾರೆ.ಷಡಾಕ್ಷರಿ ಸರ್ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗ ಮಂಜೂರು ಮಾಡಿಸಲು ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮತ್ತು ಸರ್ವ ಸದಸ್ಯರು ಈ ಮೂಲಕ ಒತ್ತಾಯವನ್ನು ಮಾಡಿದ್ದಾರೆ.

ಈ ಕೂಡಲೇ ಈ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸಿ ವೇತನ ಆಯೋಗ ರಚನೆ ಮಾಡಿಸಿ ಮಧ್ಯಂತರ ಪರಿಹಾರ (IR) ಘೋಷಣೆ ಮಾಡುವ ಕುರಿತಂತೆ ಆದೇಶವನ್ನು ಹೊರಡಿಸಿ ಸರ್.ವಿಳಂಬವಾದರೆ ಶೀಘ್ರದಲ್ಲೇ ಮತ್ತೆ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ  ಚುನಾವಣೆಗಳು ಇದರ ನಂತರ ಮತ್ತೆ ರಾಜ್ಯದಲ್ಲಿ ಬೃಹತ್ ವಿಧಾನಸಭಾ ಚುನಾವಣೆಗಳು ಬರುತ್ತವೆ ಎಂಬ ಎಲ್ಲ ವಿಷಯಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರಲಾಗಿದೆ ಎಂಬ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk