ಬೆಂಗಳೂರು –
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಧ್ಯಕ್ಷರಾದ ರಾಜೇಶ್ ಹಾಗೂ ಕಾರ್ಯ ದರ್ಶಿಗಳಾದ ಸುರೇಶ್ ಉಪಾಧ್ಯಕ್ಷರಾದ ರಾಜು ವಾರದ ಧಾರವಾಡ ಜಿಲ್ಲಾಧ್ಯಕ್ಷರಾದ ನಾಗರಾಜ್ ಬಿದರಳ್ಳಿ ರವರು ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರನ್ನು ಭೇಟಿ ಮಾಡಿ ನವಂಬರ್ 2 ರಂದು ಕರೆ ನೀಡಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಬೇಕೆಂದು ಕೋರಿದರು. ರಾಜ್ಯಾ ಧ್ಯಕ್ಷರು ಬೆಂಬಲ ನೀಡುವ ಭರವಸೆಯನ್ನು ನೀಡಿದರು.
ಮುಂದುವರಿದು ಪ್ರಮುಖ ಬೇಡಿಕೆಗಳಾದಲೋ ಕಾಯುಕ್ತ ವಿಚಾರಣೆಯನ್ನು ಕೈ ಬಿಡುವ ಬಗ್ಗೆP DO ಹುದ್ದೆಗಳನ್ನು PDO- Grade-1 ಗೆ ಉನ್ನತಿಕರಿಸುವ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಲು ಆರ್ಥಿಕ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋ ಚಿಸಲು ಅಗತ್ಯ ದಾಖಲೆಗಳುಮಾಹಿತಿಗಳೊಂದಿಗೆ ಪದಾಧಿಕಾರಿಗಳ ಒಟ್ಟಿಗೆ ಚರ್ಚಿಸಲಾಯಿತು
ಈ ಬಗ್ಗೆ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿ ಗಳು ದಿನಾಂಕ:28-10-2022ರ ಬೆಳಗ್ಗೆ 11.೦೦ ಗಂಟೆಗೆ ದಾಖಲೆಗಳೊಂದಿಗೆ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿರೊಂದಿಗೆ ಚರ್ಚಿಸಲು ಸಮಯವನ್ನು ನೀಡಿರುತ್ತಾರೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾ ಭಿವೃದ್ಧಿ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸ ಲಾಯಿತು.