ಕುಂದಗೋಳ –
ಸಧ್ಯ ರಾಜ್ಯದಲ್ಲಿ ಎನ್ ಪಿ ಎಸ್ ತೋಲಗರಿ ಒಪಿಎಸ್ ಜಾರಿಗೆ ಬರಲಿ ಎಂಬ ವಿಚಾರ ಕುರಿತಂತೆ ರಾಜ್ಯದ ಸರ್ಕಾರಿ ನೌಕರರು ಬೀದಿ ಗಿಳಿದು ಹೋರಾಟವನ್ನು ಮಾಡುತ್ತಿದ್ದು ರಾಜ್ಯದ ಮೂಲೆ ಮೂಲೆಗಳಲ್ಲಿ ಈ ಒಂದು ವಿಚಾರ ಕುರಿ ತಂತೆ ಸಧ್ಯ ರಾಜ್ಯದ ಸರ್ಕಾರಿ ನೌಕರರು ಸಿಡಿದೆದ್ದಿ ದ್ದಾರೆ.ಸ್ವಯಂ ಪ್ರೇರಿತವಾಗಿ ಸಮಸ್ತ ರಾಜ್ಯದ ಸರ್ಕಾರಿ ನೌಕರರು ದೊಡ್ಡ ಮಟ್ಟದಲ್ಲಿ ಹೋರಾ ಟವನ್ನು ಮಾಡುತ್ತಿದ್ದು ಈ ಒಂದು ಹೋರಾಟಕ್ಕೆ ವಯೋವೃದ್ದ ಹಿರಿಯ ಜೀವಿ ಮಹಿಳೆಯೊಬ್ಬರು ನೆರವಾಗಿದ್ದಾರೆ.
ಹೌದು ಧಾರವಾಡದ ಡಯಟ್ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಕೆ ಎಸ್ ಭರಮಗೌಡ್ರ ಇವರ ಮಾತೋಶ್ರೀ ಕಾಶಮ್ಮ ಶಂಕರಗೌಡ ಭರಮಗೌಡ್ರ ಕುಂದಗೋಳದ ಅದರಗುಂಚಿ ಗ್ರಾಮದ ನಿವಾಸಿಯಾಗಿರುವ ಇವರು NPS ನೌಕರರಿಗೂ ಪಿಂಚಣಿ ದೊರೆಯು ವಂತಾಗಲಿ ಎಂದು ಶುಭ ಹಾರೈಸಿ NPS ನೌಕರರ ಹೋರಾಟಕ್ಕೆ 50,101=00 ರೂಪಾಯಿ ನೆರವಿನ ದೇಣಿಗೆಯನ್ನು ನೀಡಿದ್ದಾರೆ.
ಓಪಿಎಸ್ ಸಂಕಲ್ಪ ಯಾತ್ರೆಯಲ್ಲಿ ಸ್ವತಃ ಪಾಲ್ಗೊ ಳ್ಳುವುದಾಗಿ ತಿಳಿಸಿದ್ದು ಇದು ಧಾರವಾಡ ಜಿಲ್ಲೆಯ ಸಮಸ್ತ ನೌಕರರ ಹೋರಾಟಕ್ಕೆ ಪ್ರೇರಣೆಯಾಗಿ ದ್ದಾರೆ ಹೀಗೆ ನೆರವು ನೀಡಿ ಉದಾರತೆಯನ್ನು ಮೆರೆದಿರುವ ಮಾತೋಶ್ರೀಯವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಶಹರ ಘಟಕ ಧಾರವಾಡ ಇವರು ತಿಳಿಸಿದ್ದು ಎಮ್ ಆರ್ ಕಬ್ಬೇರ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸರಕಾರಿ ಎನ್ ಪಿಎಸ್ ನೌಕರರ ಸಂಘ ಶಹರ ಘಟಕ ಧಾರವಾಡ ಹಾಗೂ P F ಗುಡೇನಕಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.