This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ವಿಜಯಪುರ ದಲ್ಲಿ OPS ಸಂಕಲ್ಪಯಾತ್ರೆ- ಪೂರ್ವಭಾವಿ ಸಭೆ ನಗರಕ್ಕೆ ಆಗಮಿಸಿದ OPS ರಾಜ್ಯಾಧ್ಯಕ್ಷ ಶಾಂತಾರಾಮ ಗೆ ಭವ್ಯ ಸ್ವಾಗತ

WhatsApp Group Join Now
Telegram Group Join Now

ವಿಜಯಪುರ

ರಾಜ್ಯ ಸರಕಾರಿ ನೌಕರರ ಸಂಧ್ಯಾಕಾಲದಲ್ಲಿ ತೆಗೆದುಕೊಳ್ಳುವ ಹಳೆ  ಪಿಂಚಣಿ ಯೋಜನೆ (ಓ.ಪಿ.ಎಸ್) 2006 ರಿಂದ ರದ್ದು ಮಾಡಿ ನೂತನ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು ಇಡೀ ನೌಕರ ವಲಯ ತಲ್ಲಣಗೊಂಡಿದ್ದು ಇಳಿಯ ವಯಸ್ಸಿನಲ್ಲಿ ಕೇವಲ 500, 1000 ರೂಗಳ ಪಿಂಚಣಿ ಪಡೆಯುವಂತಾಗಿದ್ದು ವಿಷಾದನೀಯ ಎಂದು ವಿಜಯಪುರ ಸರಕಾರಿ ಪ್ರೌಡಶಾಲೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾಧ್ಯಮ ಸಲಹೆಗಾರರಾದ ಹಣಮಂತ ಬೂದಿಹಾಳ ಮಾತನಾಡಿದರು.

ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್  ಸಂಘ (ರಿ) ಬೆಂಗಳೂರು ರಾಜ್ಯ ಘಟಕ ಹಾಗೂ ವಿಜಯ ಪುರ ಜಿಲ್ಲಾ ಘಟಕ ಹತ್ತು ಹಲವಾರು ಹೋರಾಟ ಮಾಡುತ್ತಾ ಬಂದಿರುವುದು ಇದಲ್ಲದೇ ಸರಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನೆ ಆಗಿರುವುದಿಲ್ಲ ಪ್ರಥಮವಾಗಿ ಸದಸ್ಯತ್ವ ಆಂದೋ ಲನದೊಂದಿಗೆ ಪ್ರಾರಂಭವಾದ ಹೋರಾಟ ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಜನ ಸೇರಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ.ನಂತರ ರಕ್ತಕೊಟ್ಟೆವು ಪಿಂಚಣಿ ಬಿಡೇವು ಎಂಬ ಹೋರಾಟದಲ್ಲಿ ಸುಮಾರು 20 ಸಾವಿರ ಲೀಟರ ರಕ್ತ ಕೊಟ್ಟಿದ್ದೇವೆ.ನಂತರ ಸುಮಾರು ಒಂದು ಲಕ್ಷ 50 ಸಾವಿರ ನೌಕರರು ಸೇರಿ ಬೆಳಗಾವಿ ಚಲೋ ಹೋರಾಟ ಮಾಡಿದಾಗ ಕೇವಲ ಸಮಿತಿ ರಚನೆ ಮಾಡಿ ಸರಕಾರ ಕೈತೊಳಿದು ಕೊಂಡಿತು

ನಂತರ ಟ್ವೀಟರ್ ಚಳುವಳಿ ಸರಕಾರದ ಗಮನ ಸೆಳೆದಿದ್ದೇವೆ ನಂತರ ಹಲವಾರು ಭಾರಿ ಜನಪ್ರತಿನಿ ಧಿಗಳಿಗೆ ತಹಶಿಲ್ದಾರರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಆದರೆ ಯಾವುದೇ ಪರಿಣಾಮ ಸರ್ಕಾರದ ಮೇಲೆ ಆಗಿರುವುದಿಲ್ಲ.ಕೇವಲ ಡಿ.ಸಿ.ಆರ್.ಜಿ ಅಂತಾ ಕೆಲವೊಂದು ಮಾರ್ಪಾಡು ಮಾಡಿವೆ ಇದರಿಂದ ಎನ್.ಪಿ.ಎಸ್. ನೌಕರರಿಗೆ ಯಾವುದೇ ಪ್ರಯೋಜನೆ ಆಗಿರುವುದಿಲ್ಲ.

ಎನ್.ಪಿ,ಸ್. ಎಂಬುದು ಇದೊಂದು ಮರಣ ಶಾಸನ, 2006 ರಿಂದ ಹಲವಾರು ಎನ್.ಪಿ.ಎಸ್ ನೌಕರರು ಮರಣ ಹೊಂದಿದ್ದಾರೆ ನಿವೃತ್ತಿ ಹೊಂದಿ ದ್ದಾರೆ.ಅವರ ಕುಟುಂಬಗಳು ಇವತ್ತು ಬೀದಿ ಪಾಲಾಗಿವೆ ಕೂಲಿ ಕಾರ್ಮಿಕರಿಗಿಂತ ಕನಿಷ್ಠ ಹಣ ಪಡಿಯುತ್ತಿದ್ದಾರೆ.ಸಂಧ್ಯಾಕಾಲದ ಎನ್.ಪಿ.ಎಸ್ ನೌಕರರ ಜೀವನ ದುಸ್ಥರವಾಗಿದೆ  ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ

ಇದರಿಂದ ಹಲವಾರು ನೌಕರರಿಗೆ ಮದುವೆ ಮಾಡಿಕೊಳ್ಳುವುವರಿಗೆ ಕನ್ಯಾ ಕೊಡುವುದು ನಿಂತು ಬಿಟ್ಟಿದೆ ಇದರಿಂದ ಸಮಾಜಕ್ಕೆ ದೊಡ್ಡ ಕಂಟಕ ನಿರ್ಮಾಣವಾಗಿದೆ.ಇದೆಲ್ಲವನ್ನು ಮನಗಂಡ ರಾಜ್ಯ ಸರ್ಕಾರ ಎನ್.ಪಿ.ಎಸ್. ನೌಕರರ ರಾಜ್ಯ ಅಧ್ಯಕ್ಷರಾದ ಶಾಂತರಾಮ ಅವರು ಇಡೀ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಎನ್.ಪಿ.ಎಸ್ ನೌಕರರನ್ನು ಜಾಗೃತ ಮಾಡಿಸಲು ಓ.ಪಿ.ಎಸ್ ಸಂಕಲ್ಪಯಾತ್ರೆ ಹಮ್ಮಿಕೊಂಡಿದ್ದು

ನಮ್ಮ ವಿಜಯಪುರ ಜಿಲ್ಲೆಯಲ್ಲಿ ನವ್ಹೆಂಬರ 4 ರಂದು ಬೃಹತ್ ಪ್ರಮಾಣದ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದಾರೆ.ಈ ಸಂಕಲ್ಪಯಾತ್ರೆ ಪ್ರಥಮ ವಾಗಿ ಸಿಂದಗಿಯಿಂದ ಪ್ರಾರಂಭವಾಗಿ ದೇವರ ಹಿಪ್ಪರಗಿಯಲ್ಲಿ ಎರಡೂ ಕಡೆ ಬೈಕ್ ರ್ಯಾಲಿ ಮಾಡುವ ಮೂಲಕ ಮಧ್ಯಾಹ್ನ 12 ಗಂಟೆಗೆ ವಿಜಯಪುರದ ಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿ ನಂತರ ಅಲ್ಲಿಂದ  ಸುಮಾರು 3000 ಎನ್.ಪಿ.ಎಸ್ ಹಾಗೂ ಓ.ಪಿ.ಎಸ್ ನೌಕರರು ಪಾದಯಾತ್ರೆಯ ಮೂಲಕ ಗಾಂಧಿಚೌಕ, ಬಸವೇ ಶ್ವರ ಚೌಕ್, ಅಂಬೇಡ್ಕರ್ ಚೌಕದಿಂದ ಜಿಲ್ಲಾಧಿ ಕಾರಿಗಳಿಗೆ ಮನವಿ ನೀಡಿ ನಂತರ ಕಂದಗಲ್ಲ ಹಣಮಂತ್ರಾಯ ರಂಗಮಂದಿರದಲ್ಲಿ ಡಿಸೆಂಬರ್ 19ಕ್ಕೆ ಬೆಂಗಳೂರು ಪ್ರೀಡಮ್ ಪಾರ್ಕನಲ್ಲಿ ಹಮ್ಮಿಕೊಂಡಿರುವ ಅರ್ನಿದಿಷ್ಟ ಹೋರಾಟದಲ್ಲಿ ಸುಮಾರು 2 ಲಕ್ಷ ಎನ್.ಪಿ.ಎಸ್ ನೌಕರರು ಪಾಲ್ಗೋಳುವ ಬಗ್ಗೆ ಸಂಪೂರ್ಣವಾದ ಮಾಹಿತಿ ಯನ್ನುರಾಜ್ಯ ಪದಾಧಿಕಾರಿಗಳು ನೀಡಿದರು

ನವ್ಹೆಂಬರ್ 4 ರಂದು ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಾಸ್ಥಾನದಿಂದ ಹೋರಡುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಾಗೂ ಎಲ್ಲ ಸಂಘ ಸಂಸ್ಥೆಗಳು ಎಲ್ಲಾ ಪದಾಧಿಕಾರಿಗಳು ಈ ಸಂಕಲ್ಪ ಯಾತ್ರೆಗೆ ಸಂಪೂರ್ಣ ಬೆಂಬಲ ನೀಡಿದ್ದು ಅವರೆಲ್ಲ ಸಕ್ರಿಯವಾಗಿ ಪಾಲ್ಗೋಳುವರು ಎಂದು ಅವರು ಹೇಳಿದರು.

ಈ ವೇಳೆ  ಎನ್.ಪಿ.ಎಸ್ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಡಲಗೇರಿ ಗೌರವ ಸಲಹೆ ಗಾರರಾದ ಜಗದೀಶ ಬೋಳಸೂರ, ಕಾರ್ಯ ದರ್ಶಿಯಾದ ಶಂಕರ ಖಂಡೇಕರ, ಜಿಲ್ಲಾ ಪದಾಧಿ ಕಾರಿಗಳಾದ ತಿಪ್ಪಣ ಜಂಬಗಿ, ಅಶೋಕ ಪತ್ತಾರ, ಮಾಂತಗೌಡ ಪಾಟೀಲ,ಗುರುರಾಜ ಕುಲಕರ್ಣಿ, ಚನ್ನಯ್ಯ ಮಠಪತಿ, ಸಿದ್ರಾಮ ಜಲ್ಲಿ, ರವೀಂದ್ರ ಉಗಾರ, ಆನಂದ ಕೆಂಭಾವಿ, ಪ್ರಕಾಶ ಗಬ್ಬರ, ಸಂತೋಷ ಕುಲಕರ್ಣಿ,ಎಸ್.ಎಸ್.ಜೇವೂರ, ಆರೋಗ್ಯ ಇಲಾಖೆ ಪ್ರಕಾಶ,ಸಂತೋಷ ಜಾಹಗೀರದಾರ. ಪತ್ತಾರ ವಿನಂತಿಸಿ ಕೊಂಡಿ ದ್ದಾರೆ, ಸಭೆಯಲ್ಲಿ ಎಲ್ಲಾ ತಾಲೂಕಿನ ಎನ್.ಪಿ. ಎಸ್. ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತಿ ಇದ್ದರು.


Google News

 

 

WhatsApp Group Join Now
Telegram Group Join Now
Suddi Sante Desk