ಧಾರವಾಡ –
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ C.S.ಷಡಕ್ಷರಿ ರವರಿಗೆ ಧಾರವಾಡದಲ್ಲಿ ಸನ್ಮಾನವನ್ನು ಮಾಡಿ ಗೌರವಿಸಲಾಯಿತು ಹೌದು ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ C.S.ಷಡಕ್ಷರಿ ರವರನ್ನು ಧಾರವಾಡ ಸರ್ಕಿಟ ಹೌಸ್ ದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ವತಿಯಿಂದ ಪದಾಧಿ ಕಾರಿಗಳ ನಿಯೋಗ ಭೇಟಿಯಾಗಿ ಶಿಕ್ಷಕರ ರಾಜ್ಯದ ಸರ್ಕಾರಿ ನೌಕರರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಮಾಡಿದರು.
ಪ್ರಮುಖವಾಗಿ 7ನೇ ವೇತನ ಆಯೋಗ ರಚನೆ ಹಳೆಯ ಪಿಂಚಣಿ ವ್ಯವಸ್ಥೆ ಸೇರಿದಂತೆ ಕೆಲವೊಂ ದಿಷ್ಟು ಪ್ರಮುಖ ಸಮಸ್ಯೆಗಳ ಕುರಿತಂತೆ ಚರ್ಚೆ ಯನ್ನು ಮಾಡಿ ಮನವಿಯನ್ನು ನೀಡಲಾಯಿತು ನಂತರ ರಾಜ್ಯಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿ ಧಾರವಾಡ ಫೇಡಾ ನೀಡಲಾಯಿತು.
ಈ ಒಂದು ನಿಯೋಗದಲ್ಲಿ ಸಂಘದ ರಾಜ್ಯಾಧ್ಯಕ್ಷ ರಾದ ಗುರು ತಿಗಡಿ.ಜಿಲ್ಲಾ ಗೌರವಾಧ್ಯಕ್ಷ ರಮೇಶ ಮಂಗೋಡಿ.ಜಿಲ್ಲಾಧ್ಯಕ್ಷ R.S ಹಿರೇಗೌಡರ, ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರು,ಹಾಗೂ ತಾಲ್ಲೂಕು ಕಾರ್ಯದರ್ಶಿ ಚಂದ್ರು ತಿಗಡಿ.ಶಹರ ಕಾರ್ಯದರ್ಶಿ I.H.ನದಾಫ್ ಪದಾಧಿಕಾರಿಗಳಾದ ಶ್ರೀಮತಿ ಗಂಗವ್ವ ಕೋಟಿಗೌ ಡರ,ಶ್ರೀಮತಿ ಮಹಾದೇವಿ,ಮಹಾದೇವ ದೊಡ ಮನಿ. N.V.ತೋರಣಗಟ್ಟಿ.ರಾಜು ಬೆಟಗೇರಿ. ಹಾಗೂ ಗ್ರಾಮೀಣ ಶಿಕ್ಷಕರ ಸಂಘದ ಗೌರವಾ ಧ್ಯಕ್ಷ L.I.ಲಕ್ಕಮ್ಮನವರ ಜಿಲ್ಲಾಧ್ಯಕ್ಷ ಅಕ್ಬರಲಿ ಸೊಲ್ಲಾಪುರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹಿರಿಯ ವರದಿಗಾರರು