ಬೆಂಗಳೂರು –
ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿದ ಬೆನ್ನಲ್ಲೇ ಅತ್ತ ಚಟುವಟಿಕೆಗಳು ಚುರುಕುಗೊಂಡಿದ್ದು ಇತ್ತ ಈ ಒಂದು ವೇತನ ಆಯೋಗದಲ್ಲಿ ಕೆಲವೊಂದಿಷ್ಟು ಬೇಡಿಕೆಗಳ ಕುರಿತಂತೆ ರಾಜ್ಯದ ಸರ್ಕಾರಿ ನೌಕರರು ಬೇಡಿಕೆ ಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ.
ಹೌದು ಮೂಲ ವೇತನದೊಂದಿಗೆ ತುಟ್ಟಿ ಭತ್ಯೆ (ಡಿಎ) ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ನೌಕರರ ಸಂಘದ ಪ್ರಮುಖ ಬೇಡಿಕೆಯಾಗಿದ್ದು ಈ ಮೂಲಕ ಮೂಲ ವೇತನದ ಶೇ. 40ರಷ್ಟು ವೇತನ ಹೆಚ್ಚಳವನ್ನು ಸರಕಾರಿ ನೌಕರರು ನಿರೀಕ್ಷಿಸುತ್ತಿ ದ್ದಾರೆ.
ಜೊತೆಗೆ 2023ರ ಏಪ್ರಿಲ್ 1ರಿಂದ ಆರ್ಥಿಕ ಅನುಕೂಲ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ ಇನ್ನ್ನೂ ಪ್ರತಿ 5 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತದೆ. ಬೆಲೆ ಏರಿಕೆ, ಕೇಂದ್ರ ಮತ್ತು ಬೇರೆ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ ಮತ್ತಿತರ ಅಂಶಗಳನ್ನು ಪರಿಶೀಲಿಸಿ ಆಯೋಗವು ವೇತನ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ. ಆದರೆ, ಹಿಂದೆಲ್ಲಾ ಆರೇಳು ವರ್ಷ ಗಳು ಕಳೆದರೂ ವೇತನ ಆಯೋಗಗಳು ರಚನೆ ಯಾಗುತ್ತಿರಲಿಲ್ಲ.
ಆದರೆ, ಈ ಬಾರಿ 5 ವರ್ಷಗಳ ಮಿತಿಯೊಳಗೇ ಆಯೋಗ ರಚನೆಯಾಗುತ್ತಿದೆ. ಈ ಹಿಂದೆ 2018ರ ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಸಿಎಂ ಸಿದ್ದರಾಮಯ್ಯ ವೇತನ ಆಯೋಗದ ವರದಿ ಪಡೆದು, ಅನುಷ್ಠಾನ ಆದೇಶ ಹೊರಡಿಸಿದ್ದರು. ಈಗ ಹಾಲಿ ಸಿಎಂ ಬೊಮ್ಮಾಯಿ ಕೂಡ ನಿರೀಕ್ಷಿತ ಅವಧಿಯೊಳಗೆ ವೇತನ ಏರಿಕೆ ಯನ್ನು ಅನುಷ್ಠಾನಗೊಳಿಸಲು ಹೊರಟಿದ್ದು ಇದನ್ನು ತುದಿಗಾಲಿನಲ್ಲಿ ನಿಂತುಕೊಂಡು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕಾಯುತ್ತಿದ್ದು ಶೀಘ್ರ ದಲ್ಲೇ ಅಧ್ಯಕ್ಷರಿಂದ ವರದಿ ಸಲ್ಲಿಕೆಯಾಗಿ ಜಾರಿಗೆ ಬರಲಿ ಎಂಬೊದು ಸುದ್ದಿ ಸಂತೆಯ ಆಶಯವಾಗಿದೆ.
ವರದಿ – ಚಕ್ರವರ್ತಿ ಜೊತೆಗೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್ ಬೆಂಗಳೂರು