ಮಂಗಳೂರು –
ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿ ಗರಂ ಆಗಿದ್ದಾರೆ. ಕಲ್ಲಡ್ಕದಲ್ಲಿ ಮಾತನಾಡಿದ ಅವರು ನಾಯಕರ ಬಗ್ಗೆ ಹೇಳಿಕೆಗಳು, ನಡವಳಿಕೆಗಳು ಪಕ್ಷದ ಗೌರವಕ್ಕೆ ತಕ್ಕುದಾಗಿಲ್ಲ ಅವರ ನಡವಳಿಕೆಗಳ ಬಗ್ಗೆ ಹಲವರು ತೀಕ್ಷ್ಣ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆಂದರು.

ಈ ವಿಚಾರವನ್ನು ಅವರೇ ತಿದ್ದಿಕೊಂಡು ನಡವಳಿಕೆ ಬದಲಿಸಿಕೊಂಡರೆ ಒಳ್ಳೆಯದು.ಇನ್ನೂ ಇವರ ಮೇಲೆ ಕ್ರಮ ಕೈಗೊಳ್ಳುವುದು, ಬಿಡುವುದು ಪಕ್ಷದ ನಾಯಕರಿಗೆ ಬಿಟ್ಟದ್ದು ಬೇರೆ ಪಕ್ಷಗಳ ರೀತಿ ನಮ್ಮ ಶಾಸಕರು ಮಾತನಾಡುವುದು ಸರಿಯಾಗಲ್ಲ ಹಿಂದೆ ಇದೇ ರೀತಿ ನಡವಳಿಕೆ ತೋರಿದ್ದಕ್ಕೆ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದೆ ನಾವು ಈಗಲೂ ಪಕ್ಷದ ವರಿಷ್ಠರಿಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತೇವೆ ಎಂದರು.

ಇನ್ನು ಕೂಡ ತಿದ್ದಿಕೊಳ್ಳದಿದ್ದರೆ ನಾವೇನು ಮಾಡೋಕ್ಕಾಗುವುದಿಲ್ಲ ಬಸವರಾಜ್ ಯತ್ನಾಳ್ ಹೇಳಿಕೆ ಬಗ್ಗೆ ಗರಂ ಆದ ಡಿವಿಎಸ್ ನಾನು ವಾಜಪೇಯಿ ಸರಕಾರದಲ್ಲಿ ಸಚಿವನಾಗಿದ್ದೆ ಎನ್ನುವ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಡಿವಿ ಈಗ ಸಚಿವರಾಗಿದ್ದಾರೆ ನನಗಿಂತ ಸದಾನಂದ ಗೌಡ ಹಿರಿಯನೇನು ಅಲ್ಲ, ಏನೋ ದೊಡ್ಡ ಹುದ್ದೆ ಸಿಕ್ಕಿದೆ ಹೀಗೆಂದು ಡಿವಿಎಸ್ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಚಿವ ಬಸವರಾಜ್ ಯತ್ನಾಳ್ ವಿರುದ್ಧ ಕಿಡಿಕಾರಿದರು.