ಬೆಂಗಳೂರು –
ರಾಜ್ಯ ಸರ್ಕಾರಿ ನೌಕರ’ರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ ಹೌದು ರಾಜ್ಯ ಸರ್ಕಾರವು ಈ ಹಿಂದೆ ಹೇಳಿದಂತೆ ಪುಣ್ಯಕೋಟಿ ದತ್ತು ಯೋಜನೆ ಗೆ ಒಂದು ತಿಂಗಳ ವೇತನವನ್ನು ಕಟಾವು ಮಾಡ ಲಾಗಿದ್ದು ಈ ಕೂಡಲೇ ಅನುಷ್ಠಾನಕ್ಕೆ ಸೂಚನೆ ಯನ್ನು ನೀಡಲಾಗಿದೆ ಇದರೊಂದಿಗೆ ವೇತನ ಕಟ್ ಮಾಡಲು ಸೂಚನೆ ನೀಡಲಾಗಿದೆ
ರಾಜ್ಯ ಸರ್ಕಾರದಿಂದ ಜಾರಿಗೊಳಿಸಿರುವಂತ ಮಹತ್ವದ ಯೋಜನೆಯಲ್ಲಿ ಒಂದು ಪುಣ್ಯಕೋಟಿ ದತ್ತು ಯೋಜನೆಯಾಗಿದೆ. ಈ ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಸರ್ಕಾರಿ ನೌಕರರ ವೇತನದಿಂದ ವಂತಿಗೆಯನ್ನು ಕಟಾವು ಮಾಡೋ ದಕ್ಕೆ ಆದೇಶಿಸಲಾಗಿದೆ.ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿರುವಂತ ಪ್ರತಿಯು ಸುದ್ದಿ ಸಂತೆ ನ್ಯೂಸ್ ಗೆ ಲಭ್ಯವಾಗಿದೆ.
ಸರ್ಕಾರ ಹೊರಡಿಸಿರುವಂತ ನಡವಳಿಯಲ್ಲಿ ಪುಣ್ಯಕೋಟಿ ದತ್ತು ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ವಿವಿಧ ವೃಂದದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ನಿಗಮ, ಮಂಡಳಿ,ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ 2022ರ ತಿಂಗಳ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವೇತನ ಕಟಾವು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಎ ವೃಂದದ ಅಧಿಕಾರಿಗಳ ವೇತನದಿಂದ ರೂ.11,000, ಬಿ-ವೃಂದದ ಅಧಿಕಾರಿಗಳಿಂದ ರೂ.4,000, ಸಿ-ವೃಂದದ ನೌಕರರಿಂದ ರೂ.400 ಕಟಾವು ಮಾಡಲು ನಿರ್ಧರಿಸಿದೆ.ಆದ್ರೇ ಡಿ-ವೃಂದದ ನೌಕರರ ವೇತನದಿಂದ ಪುಣ್ಯಕೋಟಿ ದತ್ತು ಯೋಜನೆಗೆ ವೇತನ ಕಡಿತಗೊಳಿಸೋದ ರಿಂದ ವಿನಾಯ್ತಿಯನ್ನು ನೀಡಲಾಗಿದೆ.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಬೆಂಗಳೂರು