This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State Newsಧಾರವಾಡ

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ 27 ವಿದ್ಯಾರ್ಥಿಗಳು ಆಯ್ಕೆ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಗಳ ಫಲಿತಾಂಶ ಪ್ರಕಟ…..

WhatsApp Group Join Now
Telegram Group Join Now

ಧಾರವಾಡ

ಹೌದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯ ಆಯುಕ್ತರ ಕಚೇರಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ 9 ಜಿಲ್ಲೆಗಳ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆ ಯಲ್ಲಿ ಒಟ್ಟು 27 ವಿದ್ಯಾರ್ಥಿಗಳು ತಮ್ಮ ಕಲಾಕೃ ತಿಗಳ ಮೂಲಕ ಅತಿ ಹೆಚ್ಚು ಅಂಕಗಳನ್ನು ಸಂಪಾದಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರತೀ ಜಿಲ್ಲೆಯ 8, 9 ಮತ್ತು 10ನೇ ತರಗತಿಗಳ ಗುಂಪುಗಳಲ್ಲಿ ಪ್ರತ್ಯೇಕವಾಗಿ ಜರುಗಿದ ಚಿತ್ರಕಲಾ ಸ್ಪರ್ಧೆಗಳಲ್ಲಿ ತೀರ್ಪುಗಾರರು ನೀಡಿದ ಅಂಕಗಳ ಆಧಾರದ ಮೇಲೆ ಪ್ರತಿ ಗುಂಪುಗಳಲ್ಲಿ ತಲಾ 9 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದರು.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿದರು.ಆಯುಕ್ತರ ಕಚೇರಿಯ ಡಿಡಿಪಿಐ ಎಸ್.ಬಿ.ಬಿಂಗೇರಿ, ದೈಹಿಕ ಶಿಕ್ಷಣ ಡಿಡಿಪಿಐ ಕೆ.ಜಿ.ತೆಲಬಕ್ಕನವರ, ಹಿರಿಯ ಸಹಾಯಕ ನಿರ್ದೇಶಕಿ ಪಾರ್ವತಿ ವಸ್ತ್ರದ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪೂರ,ವೃತ್ತಿ ಶಿಕ್ಷಣದ ಹಿರಿಯ ಸಹಾಯಕ ನಿರ್ದೇಶಕ ಬಿ.ವೈ. ಭಜಂತ್ರಿ,ಡಯಟ್ ಹಿರಿಯ ಉಪನ್ಯಾಸಕ ದೀಪಕ ಕುಲಕರ್ಣಿ,ಆಯುಕ್ತರ ಕಚೇರಿಯ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಗಳ ಸಂಚಾಲಕ ಪಿ.ಆರ್. ಬಾರಕೇರ, ಇ-ಆಡಳಿತ ಸಂಯೋಜನಾ ಧಿಕಾರಿ ಶಾಂತಾ ಮೀಸಿ, ಎಸ್.ಎ.ಕೇಸರಿ, ವ್ಹಿ.ಬಿ. ಶಿಂಗೆ, ಗುರುರಾಜ ಅಂಬೇಕರ, ರವಿ ಗೋಡಕೆ, ಗೋಪಾಲ ಚೆಲುವಾದಿ ಇದ್ದರು.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜಿಲ್ಲಾವಾರು ಕ್ರಮವಾಗಿ ೮, ೯ ಮತ್ತು ೧೦ನೇ ತರಗತಿ ಮಕ್ಕಳ ವಿವರ ಇಂತಿದೆ.

ವಿಜಯಪುರ ಜಿಲ್ಲೆ  -ಮುಸ್ಕಾನ ಕೊಚಬಾಳ.(ಸ.ಪ್ರೌ.ಶಾಲೆ ಮೂಕಿಹಾಳ ತಾ. ಮುದ್ದೇಬಿಹಾಳ), ಭಾಗ್ಯಶ್ರೀ ಎಂ. ಉಪ್ಪಾರ(ಸ.ಪ್ರೌ.ಶಾಲೆ ಹಂದಿಗ ನೂರ ತಾ. ಸಿಂದಗಿ), ಅಲ್ಲಾವುದ್ದೀನ.ಹು. ದರ್ಶನಾಳ(ಸ.ಪ್ರೌ. ಶಾಲೆ ಉಮರಾಣಿ ತಾ. ಚಡಚಣ).                                            ಬಾಗಲಕೋಟ – ಸಂಜು ಅ. ಮರನೂರ (ಸ.ಪ್ರೌ.ಶಾಲೆ ಅಲಗೂರ ಪುನರ್ವಸತಿ ಕೇಂದ್ರ ಬಾಗಲಕೋಟ), ಕೀರ್ತನಾ ಕು. ಖೋತ (ಸ.ಪ್ರೌ.ಶಾಲೆ ಜಗದಾಳ ತಾ. ಜಮಖಂಡಿ), ಭರತೇಶ ತಿ. ನಾಯಕ(ಸ.ಪ್ರೌ.ಶಾಲೆ ಜಗದಾಳ ತಾ. ಜಮಖಂಡಿ).                                                ಚಿಕ್ಕೋಡಿ – ಸಿದ್ಧಾಂತ ಪ. ಅಲಗೌಡರ(ಭರತೇಶ ಸಂ.ಪ.ಪೂ. ಕಾಲೇಜು ಬೆಲ್ಲದಬಾಗೇವಾಡಿ) ರಕ್ಷಿತಾ ಗ.ಪಾಟೀಲ್(ಸ.ಪ್ರೌ.ಶಾಲೆ ಸದಲಗಾ ತಾ. ನಿಪ್ಪಾಣಿ), ಪೂಜಾ ಪ.ಯಲ್ಲಾಪೂರ (ಮಯ್ಯೂರಿ ಇಂಗ್ಲೀಷ್ ಮೀಡಿಯಂ ಪ್ರೌಢ ಶಾಲೆ ಗೋಕಾಕ).

ಬೆಳಗಾವಿ-ಸದಾನಂದ ಉ. ನಿಂಬಾಳಕರ(ಸ.ಪ್ರೌ. ಶಾಲೆ ಹಿರೇಮುನವಳ್ಳಿ ತಾ. ಖಾನಾಪುರ), ಸಂಗೀತಾ ಅ. ನಾವಿ(ಶ್ರೀ ಮರಡಿಬಸವೇಶೌರ ಪ್ರೌಢ ಶಾಲೆ ಬೈಲಹೊಂಗಲ್ )ಶ್ವೇತಾ ರಾ. ಚವ್ಹಾಣ(ದಿ.ಕೆ.ಪಿ. ಮೊಖಾಶಿ ಸ.ಪ್ರೌ.ಶಾಲೆ ಹೂಲಿಕಟ್ಟಿ ತಾ.ಸವದತ್ತಿ).                       ಧಾರವಾಡ – ವೈಷ್ಣವಿ ಕದಂ (ಕರ್ನಾಟಕ ಪ್ರೌಢ ಶಾಲೆ ಧಾರವಾಡ), ತೇಜಸ್ ಗು. ಹಿರೇಮಠ (ಸ.ಪ್ರೌ. ಶಾಲೆ ಕೊಟಬಾಗಿ ತಾ. ಧಾರವಾಡ), ಅಕ್ಷತಾ ಗು. ಗೋವನಕೋಪ್ಪ (ಸ.ಪ್ರೌ. ಶಾಲೆ ತಡಕೋಡ ತಾ. ಧಾರವಾಡ).                             ಗದಗ ರಕ್ಷಿತಾ ಸೋ. ಪರವಾನಗಿ (ಕೆ.ಪಿ.ಎಸ್. ಸೊರಟೊರ ತಾ. ಗದಗ), ಅನೀತಾ ನಾ ಪರಮೇಶ್ವರ (ಸ.ಪ್ರೌ. ಶಾಲೆ  ಜಗಾಪುರ ತಾ. ನರಗುಂದ), ಶ್ರೇಯಾ ಲ. ಕಾಕಡೆ (ಸ.ಪ್ರೌ. ಶಾಲೆ  ಬರದೂರ  ತಾ. ಮುಂಡರಗಿ).

ಹಾವೇರಿ –                                                    ಶಂಕರಗೌಡ ಪ್ರ. ಕೆಂಚಪ್ಪನವರ (ಸ. ಪ್ರೌ. ಶಾಲೆ ಯಡಗೋಡ ತಾ. ಹಿರೇಕೆರೂರ), ಶಿದ್ಲಿಂಗಪ್ಪ ಎಂ. ಬಾಳಿಕಾಯಿ(ಎಸ್.ವಿ.ಎಚ್. ಶಾಲೆ ಕಾರಡಗಿ), ಆದಿತ್ಯ ಕೆಮ್ಮಣಕೇರಿ(ಸ. ಪ್ರೌ. ಶಾಲೆ ಮಕರವಳ್ಳಿ ತಾ. ಹಾನಗಲ್).                                                 ಶಿರಸಿ ಅಶ್ವರ್ಯಾ ಎಂ.  ಹಳಿಜೋಳ (ಮು.ದೇ.ವಸತಿ ಶಾಲೆ ಬಾಣಸಗೇರಿ ತಾ. ಹಳಿಯಾಳ), ನಮ್ರತಾ ರಾ. ಗಡಗಡಿ(ಅ.ಬಿ. ವಾಜಪೇಯಿ ವಸತಿ ಶಾಲೆ ಮದನಹಳ್ಳಿ), ಇಮಾಮಸಾಬ ಆರ್. ಕೆ. (ಮು.ದೇ.ವಸತಿ ಶಾಲೆ ಬಾಣಸಗೇರಿ ತಾ. ಹಳಿಯಾಳ).        ಉತ್ತರಕನ್ನಡ.                                                  ರಮ್ಯಾ ಗಿ. ನಾಯ್ಕ(ಸ. ಪ್ರೌ. ಶಾಲೆ ಹೊದ್ಕೆ ಶಿರೂರ ಕಡ್ನೇರು ತಾ. ಹೊನ್ನಾವರ) ರಜತ ದಿ. ಗೋಸಾವಿ(ಸದಾಶಿವಗಡ ಪ್ರೌಢ ಶಾಲೆ ಅಂಕೋಲಾನಗರ), ಮಿಥುನ ಅ. ನಾಯ್ಕ(ಕ.ಪ.ಸ್ಕೂಲ್ ಬೈಲೂರು ತಾ. ಭಟ್ಕಳ)

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕರು

ಎಂ. ಎಸ್. ಕುಂಬಾರ(ಸ.ಪ್ರೌ.ಶಾಲೆ ಜಮುನಾಳ ತಾ. ವಿಜಯಪುರ. )ವೆಂಕಪ್ಪ ಡಿ. ನಾಯಕ(ಅಡವಿ ಸಿದ್ದೇಶ್ವರ ಪ್ರೌ.ಶಾ.ಮರೆಗುದ್ದಿ ಬಾಗಲಕೋಟ),  ದಯಾನಂದ ಅ. ಹಿರೇಮಠ(ಸ.ಪ್ರೌ.ಶಾಲೆ ನಾಗರಾಳ ತಾ. ಚಿಕ್ಕೋಡಿ), ಡಿ.ಬಿ. ಮಳವಂಕಿ (ಸ.ಪ್ರೌ.ಶಾಲೆ ಹಿರೇಮುನವಳ್ಳಿ-ಬೆಳಗಾವಿ), ಎಚ್. ಆರ್. ಹಲಗತ್ತಿ (ಅಂಬೇಡ್ಕರ ಪ್ರೌಢ ಶಾಲೆ ಕಟ್ನೂರ ಗಿರಿಯಾಲ ಮಾವನೂರ ತಾ. ಹುಬ್ಬಳ್ಳಿ), ಕಾಳಪ್ಪ ಬ. ಬಡಗೇರ(ಸ.ಪ್ರೌ. ಶಾಲೆ ಜಗಾಪುರ ತಾ. ನರಗುಂದ), ಪ್ರಕಾಶ ಎಸ್. ಚವ್ಹಾಣ(ಜನತಾ ಹೆಣ್ಣು ಮಕ್ಕಳ ಪ್ರೌಢ ಶಾಲೆ  ಹಾನಗಲ್), ಈರಯ್ಯ ಪ. ಮಠಪತಿ(ಸ.ಪ್ರೌ.ಶಾಲೆ  ಬೆಳವಟಗಿ ತಾ. ಹಳಿಯಾಳ),  ಚನ್ನವೀರಪ್ಪ ರಾ. ಹೊಸಮನಿ(ಸ. ಪ್ರೌ. ಶಾಲೆ ಮುಂಡಳ್ಳಿ ತಾ.ಕಾರವಾರ)

ಸುದ್ದಿ ಸಂತೆ ನ್ಯೂಸ್…..

 


Google News

 

 

WhatsApp Group Join Now
Telegram Group Join Now
Suddi Sante Desk