ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ನೀಡುವ ಕುರಿತಂತೆ ಈಗಾಗಲೇ ಸಮಿತಿಗೆ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರನ್ನು ಮುಖ್ಯಮಂತ್ರಿ ಅವರೇ ದಾವಣಗೆರೆಯಲ್ಲಿ ಘೋಷಣೆ ಮಾಡಿದ್ದು ಇದರ ನಡುವೆ ಈ ಒಂದು ಘೋಷಣೆಯಾಗಿ ಒಂದು ವಾರ ಕಳೆದಿದೆ ಆದರೆ ಈವರೆಗೆ ಮಾತ್ರ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತವಾದ ಆದೇಶ ಹೊರಗೆ ಬಂದಿಲ್ಲ ಇದು ಒಂದು ವಿಚಾರವಾದರೆ ಇನ್ನೂ ಇಂದು ಈ ಒಂದು ವಿಚಾರವು ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಯಾಗುತ್ತದೆ ಪೈನಲ್ ಒಪ್ಪಿಗೆ ನೀಡಲಾ ಗುತ್ತದೆ ಎಂದುಕೊಳ್ಳಲಾಗಿತ್ತು
ಆದರೆ ಈ ವಿಚಾರವು ಚರ್ಚೆಗೆ ಬರಲೇ ಇಲ್ಲ ಕೆಲವೊಂದಿಷ್ಟು ವಿಚಾರಗಳೊಂದಿಗೆ ರಾಜ್ಯದ ಸರ್ಕಾರಿ ನೌಕರರ ವರ್ಗಾವಣೆಗೆ ತಿದ್ದಪಡಿಯನ್ನು ಚರ್ಚೆ ಮಾಡಲಾಗಿದ್ದು ಮುಖ್ಯಮಂತ್ರಿ ಅವರೇ 7ನೇ ವೇತನ ಆಯೋಗದ ಸಮಿತಿಗೆ ಅಧ್ಯಕ್ಷರನ್ನು ಘೋಷಣೆ ಮಾಡಿದ್ದು ಹೀಗಾಗಿ ಇವತ್ತಿನ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ಮಾಡಿ ಒಪ್ಪಿಗೆ ನೀಡಲಾಗುತ್ತದೆ ಎಂದು ಸಮಸ್ತ ರಾಜ್ಯದ ಸರ್ಕಾರಿ ನೌಕರರು ಅಂದುಕೊಂಡಿದ್ದರು ಆದರೆ ಚರ್ಚೆಯಾಗಲಿಲ್ಲ ಹೀಗಾಗಿ ಮತ್ತೆ ಇನ್ನೂ ಈ ಒಂದು ಆದೇಶ ಯಾವಾಗ ಬರುತ್ತದೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿದ್ದಾರೆ.
ಚಕ್ರವರ್ತಿ ಜೊತೆ ಮಂಜುನಾಥ ಸುದ್ದಿ ಸಂತೆ ನ್ಯೂಸ್






















