ಬೆಂಗಳೂರು –
ವರ್ಗಾವಣೆಯ ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯದ ಸಚಿವ ಸಂಪುಟ ಸಭೆ ಸಂತೋಷದ ಸುದ್ದಿಯನ್ನು ನೀಡಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ಯಲ್ಲಿ ವಿಧಾನ ಸೌಧ ನಡೆದ ಸಭೆಯಲ್ಲಿ ಹಲ ವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿ ಕೆಲವೊಂದಿಷ್ಟು ಮಹತ್ವದ ತೀರ್ಮಾ ನಗಳನ್ನು ಕೈಗೊಳ್ಳಲಾಯಿತು.
ಪ್ರಮುಖವಾಗಿ ಸಧ್ಯ ರಾಜ್ಯದಲ್ಲಿ ಗ್ರೂಪ್ ಸಿ ಮತ್ತು ಡಿ ನೌಕರರ ಅಂತರ ಜಿಲ್ಲಾ ವರ್ಗಾವಣೆಗೆ ಒಪ್ಪಿಗೆಯನ್ನು ನೀಡಲು ಒಪ್ಪಿಗೆಯನ್ನು ನೀಡಲಾ ಯಿತು.ಗ್ರೂಪ್ ಸಿ ಮತ್ತು ಡಿ ನೌಕರರ ಅಂತರ ಜಿಲ್ಲಾ ವರ್ಗಾವಣೆಗೆ ಇದರೊಂದಿಗೆ 7 ವರ್ಷ ಸೇವೆ ಸಲ್ಲಿಸಿದ ನೌಕರರ ಅಂತರ ಜಿಲ್ಲಾ ವರ್ಗಾ ವಣೆಗೆ ಅನುಮತಿ ನೀಡಲಾಗಿದೆ.ಪತಿ,ಪತ್ನಿ ಪ್ರಕರಣದಲ್ಲಿ ಅಂತರ ಜಿಲ್ಲಾ ವರ್ಗಾವಣೆಗೆ ಅನುಮತಿ ನೀಡಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಇದರೊಂದಿಗೆ ಕೆಲ ವರ್ಷಗಳಿಂದ ವರ್ಗಾವಣೆ ಗಾಗಿ ಪರದಾಡುತ್ತಿದ್ದ ರಾಜ್ಯದ ಕೆಲ ಸರ್ಕಾರಿ ನೌಕರರಿಗೆ ಇಂದಿನ ಸಚಿವ ಸಂಪುಟದ ಸಭೆ ಸಂತೋಷದ ಸುದ್ದಿಯನ್ನು ನೀಡಿದೆ.
ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್