ಬೆಂಗಳೂರು –
7ನೇ ವೇತನ ಆಯೋಗದ ಸಮಿತಿ ರಚನೆ ಹಾಗೂ ಮಾರ್ಗಸೂಚಿಗಳನ್ನು ಒಳಗೊಂಡ ಸಂಪೂರ್ಣ ಅಧಿಕೃತ ಆದೇಶವನ್ನು ರಾಜ್ಯ ಸರ್ಕಾರವು ಇಂದು ಹೊರಡಿಸಲಿದೆ.ಮುಖ್ಯಮಂತ್ರಿಗಳು ನಿನ್ನೆ ಅಧಿಕೃತವಾಗಿ ಕಡತದಲ್ಲಿ ಅನುಮೋದನೆಯನ್ನು ಮಾಡಿರುತ್ತಾರೆ.ಮುಖ್ಯಮಂತ್ರಿಗಳಿಗೆ ರಾಜ್ಯದ ನೌಕರರ ಪರವಾಗಿ ಧನ್ಯವಾದಗಳು ಎಂದು ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದ್ದಾರೆ.
ಈ ಹಿಂದೆ ವೇತನ ಆಯೋಗದ ಸಮಿತಿ ರಚನೆ ಯವರಿಗೆ ಕಚೇರಿ ಸಿಬ್ಬಂದಿ -ಅನುದಾನ ಹಾಗೂ ಮಾರ್ಗಸೂಚಿಗಳನ್ನೂಳಗೊಂಡ ಆದೇಶಗಳನ್ನು 3-4 ಹಂತಗಳಲ್ಲಿ 3 ತಿಂಗಳ ಅವಧಿಯಲ್ಲಿ ಹೊರಡಿಸಲಾಗುತ್ತಿತ್ತು.
ಆದರೆ ಈ ಬಾರಿ ಈ ಎಲ್ಲಾ ಒಗ್ಗೂಡಿದ ಆದೇಶ ವನ್ನು ಒಂದೇ ಬಾರಿಗೆ ಹೊರಡಿಸಲು ಒಂದು ವಾರ ವಿಳಂಬವಾಗಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ ಎಂದರು.
ಮಾರ್ಚ್ ಅಂತ್ಯದೊಳಗೆ ಏಳನೇ ವೇತನ ಆಯೋಗದ ಪರಿಷ್ಕೃತ ವೇತನದ ಸೌಲಭ್ಯವನ್ನು ನಾವೆಲ್ಲರೂ ಪಡೆಯೋಣ ಎಂದು ತಿಳಿಸುತ್ತಾ ಇಂದು ಸಂಜೆ ಆದೇಶವಾದ ನಂತರ ತಮಗೆ ಸಾಮಾಜಿಕ ಜಾಲತಾಣದಲ್ಲಿ ಆದೇಶವನ್ನು ಕಳಿಸಲಾಗುವುದು ಎಂದಿದ್ದಾರೆ.
ಸರ್ಕಾರಿ ನೌಕರ ಸಂಘದ ನಿರಂತರ ಪ್ರಯತ್ನ ದಿಂದ ಈ ಎಲ್ಲಾ ಕಾರ್ಯವು ತ್ವರಿತಗತಿಯಲ್ಲಿ ಆಗಿದೆ ಎಂಬ ಅಂಶವನ್ನು ತಮ್ಮಗಳ ಗಮನಕ್ಕೆ ತರುತ್ತ ಸಹಕಾರಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್…..