This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

State Newsಉತ್ತರಕನ್ನಡ

ದಾಂಡೇಲಿ ಯಲ್ಲಿ ಅರ್ಥಪೂರ್ಣ ವಾಗಿ ನಡೆಯಿತು ಅಧ್ಯಕ್ಷರ ಹಾಗೂ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಾಹಿತಿ ಗಳನ್ನು ಹರಾಜು ಹಾಕುವ ಸಮ್ಮೇಳನಗಳಾಗಬಾರದು ಎಂದರು ಮಾಸ್ಕೇರಿ ನಾಯಕ

ದಾಂಡೇಲಿ ಯಲ್ಲಿ ಅರ್ಥಪೂರ್ಣ ವಾಗಿ ನಡೆಯಿತು  ಅಧ್ಯಕ್ಷರ ಹಾಗೂ  ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಾಹಿತಿ ಗಳನ್ನು ಹರಾಜು ಹಾಕುವ ಸಮ್ಮೇಳನಗಳಾಗಬಾರದು ಎಂದರು ಮಾಸ್ಕೇರಿ ನಾಯಕ
WhatsApp Group Join Now
Telegram Group Join Now

ದಾಂಡೇಲಿ

ಜಿಲ್ಲೆಯ ಕೇಂದ್ರ ಕನ್ನಡ  ಸಾಹಿತ್ಯ ವೇದಿಕೆ  ದಾಂಡೇಲಿಯ ಪಂಚಗಾನ ಭವನದಲ್ಲಿ ತಾಲೂಕ  ಅಧ್ಯಕ್ಷರ ಹಾಗೂ  ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ತಾಲೂಕ ಪದಾದಿಕಾರಿಗಳ ಸಹ ಯೋಗದೂಂದಿಗೆ ಎರ್ಪಡಿಸಿತ್ತು.ಸದರಿ ಕಾರ್ಯ ಕ್ರಮದಲ್ಲಿ ನೂತನ ತಾಲೂಕು ಘಟಕದ ಅಧ್ಯಕ್ಷೆ ದೀಪಾಲಿ ಸಾವಂತ್ ಅವರ ಚಿಂತನ ಮಂಥನ ಚೊಚ್ಚಲ ಕೃತಿ ಅನಾವರಣಗೂಂಡಿತು. ಕಾರ್ಯ ಕ್ರಮದ ಉದ್ಘಾಟಕರಾಗಿ ಆಗಮಿಸಿದ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕೃತ  ಸಾಹಿತಿ ಮಾಸ್ಕೆರೀ ಎಮ್ ಕೆ ನಾಯಕ  ದೀಪಾಲಿ  ಸಾವಂತ ಅವರ ಕೃತಿ ಅನಾವರಣಗೊಳಿಸಿದರು,

ದೀಪ ಬೆಳಗಿಸಿ ಮಾತನಾಡಿದ ನಾಯಕರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಪರ ಸಂಘಟನೆ ಗಳ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿವರಿಸುತ್ತಾ ಕವಿ ಸಾಹಿತಿಯಾದವರ ನಡೆ ನುಡಿಗಳಲ್ಲಿ ಸಾಂಗತ್ಯ ಇರಬೇಕು ಒಲೈಸುವದನ್ನು ಬಿಟ್ಟು ಹಾರೈಸುವ ಎತ್ತರಕ್ಕೆ ಏರಬೇಕಲ್ಲದೆ, ಸ್ವಾಭಿಮಾ ನಕ್ಕೆ ಧಕ್ಕೆಯಾಗದಂತೆ ಸಮಾಜಕ್ಕೆ ದುಃಖವಾಗ ದಂತೆ ಬರವಣಿಗೆಯನ್ನು ಮುನ್ನಡೆಸಬೇಕು. ಸಾಹಿತಿಯಾದವರು ಸಮಾಜಕ್ಕೆ ಮಾದರಿಯಾಗ ಬೇಕೆ ವಿನಹ ಸಮಯಸಾಧಕರು ಅನಿಸಿಕೊಳ್ಳ ಬಾರದು ಎಂದರು.

ಅಧಿಕಾರಿ ವರ್ಗ ಹಾಗೂ ಧನಿಕ ವರ್ಗದ ಬಾಲ ಬಡಿಯದೆ ಅವರ ಕೊಡುಗೆಗಳನ್ನು ಕಾಲ ಕಾಲಕ್ಕೆ ಸ್ಮರಿಸುವ ಮನುಷ್ಯತ್ವವನ್ನುಕಾಪಾಡಿಕೊಳ್ಳಬೇಕು ಕನ್ನಡ ಸಾಹಿತ್ಯ ಪರಿಷತ್ತು ಆನೇಕ ಮಹಾದಾನಿ ಗಳ ಚಿಂತಕರ ಕೊಡುಗೆ.ಲಕ್ಷ ಲಕ್ಷ ಆಜೀವ ಸದಸ್ಯರ ಠೇವಣಿ ಇದೆ ಅವುಗಳಿಗೆ ಧಕ್ಕೆ ಬಾರದ ಹಾಗೆ ತಾಲೂಕು,ಜಿಲ್ಲಾ ಮಟ್ಟದ ಪದಾಧಿಕಾರಿ ಗಳು ಕಾರ್ಯ ನಿರ್ವಹಿಸಬೇಕು ಅವರಿಗೆ ಪ್ರತಿ ಸಮ್ಮೇಳನಕ್ಕೂ ಹಣದ ಹೊಳೆ ಹರಿಯುತ್ತಿದೆ ಹಾಗಿದ್ದರೂ ಜನರ ಹತ್ತಿರ ಹಣ ಪಡೆದು ನಿಜ ವಾದ ಸಾಹಿತಿಗಳನ್ನು ಹರಾಜು ಹಾಕುವ ಸಮ್ಮೇ ಳನಗಳನ್ನು ಮಾಡಬಾರದು.ಸರ್ಕಾರದಿಂದ ಬರುವ ಹಣದಲ್ಲಿಯೇ ಕಾರ್ಯಕ್ರಮವನ್ನು ಮಾಡಿದರೆ ಪರಿಷತ್ತಿಗೊಂದು ಗೌರವ ಬರುತ್ತದೆ ಇತಿ ಮಿತಿ ಮೀರಿ ಮಾಡುವುದು ಅವರ ಹೆಸರಿ ಗಾಗಿಯೆ ವಿನಹ ಅದು ರಾಜ್ಯಾದ್ಯಕ್ಷರ ಆದೇಶ ವಾಗಲಾರದು ಎಂದರು.

ಇಂತಹ ವಿದ್ಯಮಾನಗಳ ಮಧ್ಯೆ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಿತಿ ಮೀರದಹಾಗೆ ತೆರೆಯ  ಮರೆಯಲಿದ್ದ ಎಳೆಯ ಹಾಗೂ ಹಿರಿಯ ಕವಿ ಕಲಾವಿದರನ್ನು ಗೌರವಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂಬ ಅಭಿಪ್ರಾಯ ವ್ಷಕ್ತಪಡಿಸಿದರು

ಕವಿ ಕಲಾವಿದ ಲೇಖಕರು ಹಾಗೂ ಸಂಘಟಕ ರಾದವರು ಅವರ ಆದರ್ಶ ವರ್ತನೆಯನ್ನು ಅನುಸರಿಸಬೇಕು.ಮನಸ್ಸಿಗೆ ಬಂದಂತೆ ವರ್ತಿ ಸಿದರೆ ಸಾಮಾಜಿಕವಾಗಿ ಅಂತವರನ್ನು ಅಪಾಯ ಕಾರಿಯೆಂದೆ ಭಾವಿಸಬೇಕಾಗುತ್ತದೆ. ಆ ಮಿತಿಯ ಲ್ಲಿಯೇ ಪ್ರತಿಯೊಬ್ಬ ಸಾಹಿತ್ಯ ಸಂಘಟಕರು ಆಡಂಬರ ಮಾಡದೆ ಕಾರ್ಯ ನಿರ್ವಹಿಸಬೇಕೆಂಬ ಸಲಹೆ ನೀಡಿದರು.

ಶ್ರೀಮತಿ ದೀಪಾಲಿ ಸಾವಂತ್ ಅವರ ಕಾವ್ಯವು ನಗರಕ್ಕೆ ಒಂದು ಮಹತ್ವಪೂರ್ಣ ಕೊಡುಗೆ ಎಂದು ಪ್ರಶಂಶಿಸಿದರು.ಮುಖ್ಯ ಅತಿಥಿಗಳಾಗಿ ಗಣಪತಿ ಭಟ್ ವರ್ಗಸರ್, ಮೊದಲಾದ ಸಾಹಿತಿಗಳಿದ್ದರು.ಕೃತಿ ಪರಿಚಯವನ್ನು ಹಳಿಯಾ ಳದ ಉಪನ್ಯಾಸಕ ಶಾಂತರಾಮ್ ಚಿಬ್ಬಲಕರ್ ವಿವರವಾಗಿ ಮಾಡಿದರು ವೇದಿಕೆಯ ಜಿಲ್ಲಾ ಅಧ್ಯಕ್ಷೆ ಶಿವಲೀಲಾ ಹುಣಸಗಿ ಯವರು ಮುಂದಿನ ದಿನಗಳಲ್ಲಿ ಮಾಸ್ಕೇರಿ ನಾಯಕರ ಮಾರ್ಗದರ್ಶನ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಸಾಹಿತ್ಯಾಸಕ್ತರ ಸಹಯೋಗದೂಂದಿಗೆ ಕನ್ನಡದ ಕೃಷಿ ಕಾರ್ಯಕ್ರಮಗಳನ್ನ ಆಯೋಜಿಸುವ ಸಂಕಲ್ಪ ಮಾಡಿದರು.

ಸುದ್ದಿ ಸಂತೆ ನ್ಯೂಸ್ ದಾಂಡೇಲಿ…..


Google News

 

 

WhatsApp Group Join Now
Telegram Group Join Now
Suddi Sante Desk