ಬೆಂಗಳೂರು –
ಹೌದು ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಮಾಡಿ ಆದೇಶ ಮಾಡಿದ ಬೆನ್ನಲ್ಲೇ ಸಮಿತಿ ಯಿಂದ ಒಂದೊಂದು ಚಟುವಟಿಕೆ ಗಳು ಆರಂಭಗೊಂಡಿದ್ದು ನಿನ್ನೆಯಷ್ಟೇ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಸಭೆ ಮಾಡಿದ ನಂತರ ಇಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆಯನ್ನು ಮಾಡಿದರು
ಹೌದು 7ನೇ ವೇತನ ಆಯೋಗ ರಚನೆಯಾಗಿ ಎರಡೇ ದಿನದಲ್ಲಿ ವೇತನ ಆಯೋಗದ ಅಧ್ಯಕ್ಷ ರಾದ ಸುಧಾಕರ್ ರಾವ್ ಮತ್ತು ಸಮಿತಿ ಸದಸ್ಯ ರುಗಳು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಐಎಸ್ಎನ್ ಪ್ರಸಾದ್, ಅವರ ಕಛೇರಿಯಲ್ಲಿ ಮಹತ್ವದ ಮೊದಲ ಸಭೆ ನೆಡೆಸಿದರು.ಒಂದು ಗಂಟೆಗಳ ಕಾಲ ನಡೆದ ಈ ಒಂದು ಮಹತ್ವದ ಸಭೆಯಲ್ಲಿ ವೇತನ ಆಯೋಗದ ಕಾರ್ಯ ಚಟುವಟಿಕೆ ಗಳ ಕುರಿತು ಸುಧೀರ್ಘವಾಗಿ ಚರ್ಚೆ ಯನ್ನು ಮಾಡಲಾಯಿತು
ಈ ಸಂದರ್ಭದಲ್ಲಿ ಆರ್ಥಿಕ ಇಲಾಖೆ ಕಾರ್ಯ ದರ್ಶಿಗಳಾದ ಜಾಫರ್ ಸಾರ್ ಮತ್ತು ಏಕ್ ರೂಪಕೌರ್ ಸೇರಿದಂತೆ ಹಲವರು ಉಪಸ್ಥಿತರಿ ದ್ದರು.
ಈ ಬೆಳವಣಿಗೆ ರಾಜ್ಯಾಧ್ಯಕ್ಷರ ಕನಸಾದ ನಿಗದಿತ ಅವಧಿಯೊಳಗೆ ವೇತನ ಆಯೋಗದ ಸೌಲಭ್ಯ ಗಳನ್ನು ಪಡೆಯಬೇಕೆಂಬ ಭರವಸೆಯನ್ನು ನಿನ್ನೆಯ ಸಭೆ ಇಮ್ಮಡಿಗೊಳಿಸಿದ್ದು ಇಂದು ಸಮಿತಿಯ ಅಧ್ಯಕ್ಷರು ಮತ್ತೊಂದು ಹಂತದ ಸಭೆ ಮಾಡಿದ್ದು ಇದರೊಂದಿಗೆ ಕಾರ್ಯ ಚಟುವಟಿಕೆ ಗಳು ಚುಟುಕುಗೊಂಡಿವೆ.
ಅಷ್ಟೇ ಅಲ್ಲ ನೌಕರರಲ್ಲಿ ಭರವಸೆಯನ್ನ ಮೂಡಿಸಿದೆ.ಸಭೆಯ ಅಧ್ಯಕ್ಷರು ಹಾಗೂ ಸದಸ್ಯ ರನ್ನ ರಾಜ್ಯ ಸರ್ಕಾರಿ ನೌಕರರ ಸಂಘವು ಅಭಿ ನಂದಿಸುತ್ತಿದ್ದು ಶೀಘ್ರದಲ್ಲೇ ವರದಿ ಸಿದ್ದತೆ ಯಲ್ಲಿ ಸಮಿತಿ ಕಾರ್ಯವನ್ನು ಆರಂಭ ಮಾಡಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..