ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಗಾಗಿ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದ್ದು ಕಾರ್ಯ ಚಟುವಟಿಕೆ ಗಳು ಆರಂಭಗೊಂಡಿದ್ದು ಇದರ ನಡುವೆ ಈ ಒಂದು ವೇತನ ಸಮಿತಿ ಆಯೋಗ ಏನೇನು ಶಿಫಾರಸ್ಸು ಮಾಡಲಿದೆ ಎಂಬುದನ್ನು ನೋಡೊ ದಾದರೆ
ಕನಿಷ್ಠ ವೇತನವು ಮಾಸಿಕ ರೂ. 18,000 ಇಂದ ಆರಂಭವಾಗುತ್ತದೆ.ಗರಿಷ್ಠ ಪ್ರಸ್ತಾವಿತ ಪರಿಹಾರ ವನ್ನು ರೂ. 22,50,000 ಗೆ ನಿಗದಿಸಬೇಕು. ಸಂಪುಟ ಕಾರ್ಯದರ್ಶಿ ಮತ್ತು ಇತರ ತತ್ಸಮಾನ ಹುದ್ದೆಗಳ ಆರಂಭಿಕ ಸಂಬಳ ರೂ. 2,50,000 ಇರಬೇಕು.ಹೊಸ ಪಾವತಿ ಮ್ಯಾಟ್ರಿಕ್ಸ್ ವ್ಯವಸ್ಥೆ ಯು ಪ್ರಸ್ತುತ ಪಾವತಿ ಬ್ಯಾಂಡ್ ಮತ್ತು ಗ್ರೇಡ್ ಪಾವತಿ ವ್ಯವಸ್ಥೆಗಳ ಬದಲಿಗೆ ಜಾರಿಗೆ ಬರುತ್ತದೆ.
ಪ್ರಸ್ತುತ ವೇತನ ಸ್ಕೇಲ್‌ಗಳನ್ನು ನಿರ್ಧರಿಸುವಾಗ, ಹೊಸ ವೇತನ ಸ್ಕೇಲ್‌ಗಳನ್ನು ಪಡೆಯಲು ಎಲ್ಲ ಕೆಲಸಗಾರರಿಗೂ 2.57 ಗುಣಕದಲ್ಲಿ ಅನ್ವಯಿಸ ಬೇಕು.ವಾರ್ಷಿಕ ಏರಿಕೆ ದರವು ಆರನೇ ವೇತನ ಆಯೋಗ ನಿಗದಿಸಿದ 3% ರಷ್ಟೇ ಆಗಿರುತ್ತದೆ ಹೀಗೆ ಪ್ರಮುಖವಾಗಿ 7ನೇ ವೇತನ ಆಯೋಗದ ಶಿಫಾರಸುಗಳಾಗಲಿದ್ದು ಈ ಒಂದು ಸಾರಾಂಶ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.
ಸುದ್ದಿ ಸಂತೆ ನ್ಯೂಸ್…..