ಬೆಂಗಳೂರು –
ಕಂಪ್ಯೂಟರ್ ಪರೀಕ್ಷೆ ತೇರ್ಗಡೆಯಾಗುವ ವಿಚಾರ ಕುರಿತಂತೆ ಡಿಸೆಂಬರ್ 31 ರ ಒಳಗಾಗಿ ಕಡ್ಡಾಯ ವಾಗಿದ್ದು ಇದನ್ನು ಪಾಸ್ ಮಾಡದಿದ್ದರೆ ಸರ್ಕಾರಿ ನೌಕರರಿಗೆ ಹಂತ ಹಂತವಾಗಿ ಸೌಲಭ್ಯಗಳನ್ನು ಹಿಂದೆ ತಗೆದುಕೊಳ್ಳುವ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ಹೇಳಿದೆ.ಹೌದು ಈಗಾಗಲೇ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಡಿಸೆಂಬರ್ 31 ರ ಒಳಗಾಗಿ ಕಂಪ್ಯೂಟರ್ ಪರೀಕ್ಷೆಯನ್ನು ಮುಗಿಸಿ ಕೊಂಡು ಪ್ರಮಾಣಪತ್ರವನ್ನು ಕೂಡಾ ಪಡೆದು ಕೊಳ್ಳುವಂತೆ ಸೂಚನೆಯನ್ನು ನೀಡಲಾಗಿತ್ತು.
ಏನೇಲ್ಲಾ ಹೇಳಿದರು ಕೂಡಾ ಇನ್ನೂ ಈವರೆಗೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಇನ್ನೂ ರಾಜ್ಯದ ಸರ್ಕಾರಿ ನೌಕರರು ಈ ಒಂದು ಪರೀಕ್ಷೆಯನ್ನು ಪಾಸ್ ಮಾಡಿಲ್ಲ ಹೀಗಾಗಿ ಈ ಕುರಿತಂತೆ ಡಿಸೆಂಬರ್ 31 ಡೆಡ್ ಲೈನ್ ಆಗಿದ್ದು ಇದರ ಒಳಗಾಗಿ ಪರೀಕ್ಷೆಯ ಪ್ರಮಾಣ ಪತ್ರಗಳನ್ನು ನೀಡದಿರುವ ಸರ್ಕಾರಿ ನೌಕರರಿಗೆ ಸೌಲಭ್ಯಗ ಳನ್ನು ಕಟ್ ಮಾಡೊದಾಗಿ ಎಚ್ಚರಿಕೆಯ ಸಂದೇಶ ವನ್ನು ರಾಜ್ಯ ಸರ್ಕಾರ ನೀಡಿದೆ.

ಹೌದು ಇಂದಿನ ದಿನಮಾನಗಳಲ್ಲಿ ಎಲ್ಲಾ ಕೆಲಸ ಕಾರ್ಯಗಳಿಗೂ ತಂತ್ರಜ್ಞಾನದ ಮಾಹಿತಿ ಅತ್ಯಗತ ವಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯ ಗೊಳಿಸಲಾಗಿದೆ.ಆದರೆ ಬಹಳಷ್ಟು ಸರ್ಕಾರಿ ನೌಕರರು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ವಿಚಾರ ಸರ್ಕಾರಕ್ಕೆ ಗಮನಕ್ಕೆ ಬಂದಿದೆ ಯಂತೆ
ಮೂಲಗಳ ಪ್ರಕಾರ 2021ರ ಅಂತ್ಯದವರೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಾಗಿ 2.55 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದು ಈ ಪೈಕಿ 2.46 ಲಕ್ಷ ನೌಕರರು ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯಲ್ಲಿ 1.65 ಲಕ್ಷ ನೌಕರರು ಉತ್ತೀರ್ಣ ರಾಗಿದ್ದಾರೆ.ಉಳಿದ 90 ಸಾವಿರಕ್ಕೂ ಅಧಿಕ ಮಂದಿ ಫೇಲ್ ಆಗಿದ್ದಾರೆ. ಅಲ್ಲದೆ ಇನ್ನೂ ಮೂರೂವರೆ ಲಕ್ಷಕ್ಕೂ ಅಧಿಕ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದು ಕೊಳ್ಳಬೇಕಿದೆ.ಇದೀಗ ಡಿಸೆಂಬರ್ 31ರ ಒಳಗೆ ಉತ್ತೀರ್ಣರಾಗಲು ರಾಜ್ಯ ಸರ್ಕಾರ ಕೊನೆಯ ಅವಕಾಶ ನೀಡಿದ್ದು ಒಂದು ವೇಳೆ ಉತ್ತೀರ್ಣರಾ ಗದಿದ್ದರೆ ಅಂತವರ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸಿಗು ವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಕೆಲ ಹುದ್ದೆಗಳನ್ನು ಹೊರತುಪಡಿಸಿ ಗ್ರೂಪ್ ಎ, ಬಿ, ಸಿ ಸೇವೆಯಲ್ಲಿರುವವರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ ವಾಗಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್…..






















